ವಾಣಿಜ್ಯ ವ್ಯಾಪಾರ- ವ್ಯವಹಾರ

ಲಾಕ್‌ಡೌನ್ ಸಂಕಟ: ಕೇರಳದಲ್ಲಿ 8 ಬ್ಯೂರೋ ಮುಚ್ಚಲು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ ನಿರ್ಧಾರ

(ಚಿತ್ರ ಕೃಪೆ: ಕೊಚ್ಚಿ ಪೋಸ್ಟ್‌ ಡಾಟ್‌ ಕಾಂ)

ತಿರುವನಂತಪುರಂ:

ಲಾಕ್‌ಡೌನ್‌ ಕಾರಣದಿಂದ ಆರ್ಥಿಕ ಹಿಂಜರಿತಕ್ಕೆ ಒಳಗಾಗಿರುವ ದೇಶದ ಪ್ರಮುಖ ಮಾಧ್ಯಮ ಸಂಸ್ಥೆ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ ಕೇರಳದಲ್ಲಿ ತನ್ನ 8 ಬ್ಯೂರೋ ಕಚೇರಿಗಳನ್ನು ಮುಚ್ಚಲು ನಿರ್ಧರಿಸಿದೆ.

ಹೆಚ್ಚುತ್ತಿರುವ ನ್ಯೂಸ್‌ ಪ್ರಿಂಟ್ ಬೆಲೆ ಮತ್ತು ಮುದ್ರಣ ಮಾಧ್ಯಮದ ನಿರ್ವಹಣೆಯ ಸಂಕಟದಿಂದಾಗಿ ಕಳೆದ ಒಂದು ವರ್ಷದಿಂದ ಇಂಡಿಯನ್ ಎಕ್ಸ್‌ಪ್ರೆಸ್‌ ಸಿಬ್ಬಂದಿಗಳ ಸಂಖ್ಯೆಯನ್ನು ಪದೇ ಪದೇ ಕಡಿತ ಮಾಡುತ್ತಲೇ ಇತ್ತು.

ಇದೀಗ ಕೊರೊನಾ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಲಾಕ್‌ಡೌನ್ ಮತ್ತೊಮ್ಮೆ ವಿಸ್ತರಣೆಯಾಗಿರುವುದರಿಂದ ಮೇ 31ರೊಳಗೆ ಕೇರಳದ 8 ಬ್ಯೂರೋ ಕಚೇರಿಗಳನ್ನು ಮುಚ್ಚುವಂತೆ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಆಡಳಿತ ಮಂಡಳಿ ಸೂಚನೆಗಳನ್ನು ರವಾನಿಸಿದೆ ಎಂದು ಕೊಚ್ಚಿ ಪೋಸ್ಟ್ ಡಾಟ್‌ ಕಾಂ ವರೆದಿ ಮಾಡಿದೆ.

ಆಲಪ್ಪುಳ, ತ್ರಿಶೂರ್‌, ಪತ್ತನಂತಿಟ್ಟ, ಕೊಲ್ಲಂ, ಕೊಟ್ಟಾಯಂ, ಪಾಲಕ್ಕಾಡ್‌, ಕಣ್ಣೂರು, ಮಲಪ್ಪುರಂ ಬ್ಯೂರೋ ಕಚೇರಿಗಳನ್ನು ತಕ್ಷಣದಿಂದಲೇ ಮುಚ್ಚಲಾಗುತ್ತಿದ್ದು, ಕಚೇರಿಯ ಪೀಠೋಪಕರಣಗಳನ್ನು ಗುಜರಿಗೆ ಮಾರಲಾಗುತ್ತಿದೆ. ಟಿಎನ್ಐಇ ಪತ್ರಕರ್ತರಿಗೆ ಅವರ ಶ್ರೇಣಿಗಳಿಗೆ ಅನುಸಾರವಾಗಿ ಶೇ 10ರಿಂದ 30ರ ವರೆಗೂ ವೇತನ ಕಡಿತ ಮಾಡಲಾಗಿದೆ.

ಈ ಎಲ್ಲ ಬ್ಯೂರೋಗಳೂ ಬಾಡಿಗೆ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸಂಪಾದಕೀಯ ಮತ್ತು ಸರ್ಕ್ಯುಲೇಶನ್ ವಿಭಾಗದಲ್ಲಿ 2-3 ಸಿಬ್ಬಂದಿಗಳ ತಂಡವನ್ನು ಇಟ್ಟುಕೊಂಡು ಕೆಲಸ ಮಾಡುತ್ತಿವೆ. ಬಹುತೇಕ ಸಂಪಾದಕೀಯ ಸಿಬ್ಬಂದಿಗೆ ‘ವರ್ಕ್‌ ಫ್ರಂ ಹೋಮ್‌’ ನೀತಿ ಜಾರಿಗೊಳಿಸಲಾಗಿದ್ದು, ಮುಂದೇನು ಎಂಬ ಆತಂಕದಲ್ಲಿದ್ದಾರೆ. ಅದೇ ವೇಳೆಗೆ ಜೂನ್ 1ರಿಂದ ಎಲ್ಲ ಕಚೇರಿಗಳು ಮುಚ್ಚಲಿವೆ ಎಂಬ ಮಾಹಿತಿ ಬಂದಿದೆ.

ಟೈಮ್ಸ್‌ ಆಫ್‌ ಇಂಡಿಯಾ ಬಳಗ ತನ್ನ ಮಲಬಾರ್ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಲಿದ್ದು, ತಿರುವನಂತಪುರಂ ಎಡಿಶನ್‌ ಸ್ಥಗಿತಗೊಳಿಸಲದೆ ಎಂಬ ವರದಿಯ ಬೆನ್ನಲ್ಲೇ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ ಕೂಡ ಬಾಗಿಲು ಹಾಕಲು ಮುಂದಾಗಿರುವುದು ಪತ್ರಕರ್ತರ ವಲಯದಲ್ಲಿ ತೀವ್ರ ಆತಂಕ ಸೃಷ್ಟಿಸಿದೆ.

ಡೆಕ್ಕನ್ ಕ್ರಾನಿಕಲ್ ಕಳೆದ ವರ್ಷವೇ ಮುಚ್ಚುಗಡೆಯಾಗಿತ್ತು.

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಈಗ ಲಭ್ಯ. ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ಇಂದಿನ ಕ್ಯಾಂಪ್ಕೋ ಮಾರುಕಟ್ಟೆ ಧಾರಣೆ (23-10-2020)

Upayuktha

ಎಸ್‌ಬಿಐನಿಂದ ಹಬ್ಬದ ಕೊಡುಗೆ: ಗೃಹ, ವಾಹನ ಖರೀದಿಗೆ ಅಗ್ಗದ ಸಾಲ

Upayuktha

ಏ. 12ರಿಂದ ಸೀಮಿತ ಪ್ರಮಾಣದಲ್ಲಿ ಅಡಿಕೆ ಖರೀದಿಗೆ ಕ್ಯಾಂಪ್ಕೋ ನಿರ್ಧಾರ

Upayuktha