ದೇಶ-ವಿದೇಶ

ಪಿಎಂ ಕಿಸಾನ್ ಯೋಜನೆಯಡಿ 9 ಕೋಟಿ ರೈತರಿಗೆ 18000 ಕೋಟಿ ರೂ ಬಿಡುಗಡೆ

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪಿಎಂ ಕಿಸಾನ್ ಯೋಜನೆಯಡಿ 9 ಕೋಟಿ ರೈತರಿಗೆ 18,000 ಕೋಟಿ ರೂ.ಗಳನ್ನು ಡಿ.25 ರಂದು ಬಿಡುಗಡೆ ಮಾಡಿದರು.

ಹಾಗೆ ದೇಶಾದ್ಯಂತ 19,000 ಭಾಗಗಳಲ್ಲಿ ರೈತರು-ಪ್ರಧಾನಿಗಳ ಸಂವಾದ ಕಾರ್ಯಕ್ರಮವನ್ನು ವರ್ಚ್ಯುಯಲ್ ಸಭೆ ಮೂಲಕ ಆಯೋಜಿಸಿದ್ದು, ಈ ಸಭೆಯ ಮೊದಲು ಪ್ರಧಾನಿಯವರು 18,000 ಕೋಟಿ ರೂ. ಗಳನ್ನು ಬಿಡುಗಡೆ ಮಾಡಿದ್ದಾರೆ.

ಡಿಸೆಂಬರ್ 25 ಇಂದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನುಮದಿನವಾಗಿದ್ದು, ಈ ದಿನವನ್ನು ಉತ್ತಮ ಆಡಳಿತ ದಿನ’ (ಗುಡ್ ಗೌರ್ನೆನ್ಸ್ ಡೇ) ಯನ್ನಾಗಿ ಆಚರಿಸಲಾಗುತ್ತದೆ.

ಈ ಉದ್ದೇಶ ದಿಂದ ರೈತರಿಗೆ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿಯಲ್ಲಿ ಸಿಗಬೇಕಾದ 2,000 ರೂ.ಗಳ ಕಂತನ್ನು ಬಿಡುಗಡೆ ಮಾಡಲಾಯಿತು.

ಯೋಜನೆಯಡಿಯಲ್ಲಿ ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ವಾರ್ಷಿಕ 6,000 ರೂಪಾಯಿಗಳನ್ನು ನೀಡಲಾಗುತ್ತದೆ. ಹಾಗೂ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಪ್ರತಿಭಟನೆಗಳನ್ನು ನಡೆಸುತ್ತಿರುವ ಈ ಮಧ್ಯೆಯೇ  ಪ್ರಧಾನಿ-ರೈತರ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿದೆ.

Related posts

ಕಾಶ್ಮೀರ ಪರಿಸ್ಥಿತಿ: ಅಮಿತ್ ಶಾಗೆ ವಿವರಣೆ ನೀಡಿದ ಅಜಿತ್ ದೋವಲ್

Upayuktha

ಐತಿಹಾಸಿಕ ಅಯೋಧ್ಯೆ ರಾಮ ಮಂದಿರ ಶಿಲಾನ್ಯಾಸ- ಲೈವ್

Upayuktha

ಅ.31ಕ್ಕೆ ‌ರಾಷ್ಟ್ರೀಯ ಏಕತಾ ದಿನಾಚರಣೆ: ಸರ್ದಾರ್‌ ಪಟೇಲ್‌ ಜನ್ಮದಿನಕ್ಕೆ ದೇಶಾದ್ಯಂತ ಭರದ ಸಿದ್ಧತೆ

Upayuktha