ಜಿಲ್ಲಾ ಸುದ್ದಿಗಳು ಶಿಕ್ಷಣ

ಪಿಯುಸಿ ವಿದ್ಯಾರ್ಥಿನಿಗೆ ಅಂಕದಲ್ಲಿ ಎಡವಟ್ಟು

ವಿಟ್ಲ: ಇಲ್ಲಿಯ ಸಮೀಪದ ಕೋಡಪದವು ಎಂಬಲ್ಲಿನ ಶ್ರೀಧರ ಭಟ್‌ ಕುಕ್ಕೆಮನೆ ಅವರ ಪುತ್ರಿ ಚಾಂದಿನಿ ಅವರು ಪುತ್ತೂರು ವಿವೇಕಾನಂದ ಕಾಲೇಜಿನ ಪಿಯುಸಿ ವಿದ್ಯಾರ್ಥಿನಿಯಾಗಿದ್ದು, ಇತ್ತೀಚೆಗೆ ಪಿಯುಸಿ ಫಲಿತಾಂಶ ಪ್ರಕಟವಾದಾಗ ಆಕೆಯ ಅಂಕ ನೋಡಿ ಶಾಕ್ ಆಗಿತ್ತು.

ಈಕೆಗೆ ಆಂಗ್ಲ ಭಾಷೆಯಲ್ಲಿ 13 ಅಂಕ ಬಂದಿದ್ದು ಆ ವಿಷಯದಲ್ಲಿ ಅನುತ್ತೀರ್ಣರಾಗಿದ್ದಾರೆಂದು ತಿಳಿಸಲಾಗಿತ್ತು.  ಆಕೆಗೆ ನಂಬಲಾಗಲಿಲ್ಲ ಶಾಕ್‌ ಆಗಿತ್ತು. ಆಕೆ ಫೇಲ್‌ ಆಗುವ ವಿದ್ಯಾರ್ಥಿನಿಯಲ್ಲವೆಂದು ಮನೆಯವರಿಗೂ ಆಕೆಯ ವಿದ್ಯಾಸಂಸ್ಥೆಗೂ ಭರವಸೆ ಇತ್ತು. ಇದರಿಂದಾಗಿ ಮನೆಯವರೆಲ್ಲರೂ ಸೇರಿ ಮರುಮೌಲ್ಯಮಾಪನಕ್ಕೆ ಅರ್ಜಿ ಹಾಕುವ ಏನೆಂದು ತಿಳಿಯಬಹುದು ಎಂದು ಆಕೆಯನ್ನು ಒತ್ತಾಯಿಸಿ ಅರ್ಜಿ ಹಾಕಿದರು.

ಬಳಿಕ ಅದರಂತೆ ಆಕೆಯ ಹೆತ್ತವರು ಸ್ಕ್ಯಾನಿಂಗ್ ಪ್ರತಿ ಪಡೆಯಲು 530 ರೂ. ಪಾವತಿಸಿ, ಉತ್ತರ ಪತ್ರಿಕೆಯನ್ನು ತರಿಸಿದರು. ಉತ್ತರ ಪತ್ರಿಕೆ ಬಂದು ಕೈ ಸೇರುತ್ತಿದ್ದಂತೆ ತಪ್ಪಾಗಿದ್ದು ವಿಷಯ ತಿಳಿದು ಬಂದಿದೆ.

ಪ್ರಥಮ ಪುಟದಲ್ಲೇ ಆಕೆಗೆ ಅಂಕ 83 ಇರುವುದಾಗಿ ನಮೂದಿಸಲಾಗಿತ್ತು.

ಅಂಕ ದಾಖಲಿಸುವ ವೇಳೆ ಇಲಾಖೆಯ ಸಿಬ್ಬಂದಿ ಮಾಡಿದ ಎಡವಟ್ಟು ಆತಂಕದ ವಾತಾವರಣವನ್ನು ಸೃಷ್ಟಿ ಮಾಡಿದೆ.

Related posts

ಚುನಾವಣೆ ಸಂದರ್ಭದಲ್ಲೂ ಪರವಾನಿಗೆಯುಳ್ಳ ನಾಗರಿಕರ ಕೋವಿಗಳನ್ನು ಠಾಣೆಯಲ್ಲಿ ಇಡಬೇಕಿಲ್ಲ: ಕೇರಳ ಹೈಕೋರ್ಟ್ ಮಹತ್ವದ ತೀರ್ಪು

Upayuktha

ಜನಪದ ವಿದ್ವಾಂಸ ಅಮೃತ ಸೋಮೇಶ್ವರ ಅವರಿಗೆ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ

Upayuktha

ಯು.ಟಿ. ಖಾದರ್ ಸಹೋದರ ನ ನಿವಾಸದ ಮೇಲೆ ಐಟಿ ದಾಳಿ

Harshitha Harish