ಕ್ಯಾಂಪಸ್ ಸುದ್ದಿ ನಗರ ಸ್ಥಳೀಯ

ಮನಸ್ಸನ್ನು ತೃಪ್ತಿ ಪಡಿಸುವಲ್ಲಿ ಸಂಗೀತದ ಪಾತ್ರ ಅಪಾರ: ಅಖಿಲಾ ಪಜಿಮಣ್ಣು

ಪುತ್ತೂರು: ಪ್ರತಿಯೊಬ್ಬ ವ್ಯಕ್ತಿಗೂ ಒಂದೊಂದು ಹವ್ಯಾಸಗಳು ಇದ್ದೆ ಇರುತ್ತದೆ, ಅದು ಕಲಾ ಕ್ಷೇತ್ರದಲ್ಲಿ ಆಗಿರಬಹುದು ಇತರೆ ವಿಷಯದಲ್ಲಿಯೂ ಆಗಿರಬಹುದು. ಸಾಧನೆ ಮಾಡಬೇಕೆಂಬ ದೃಢ ನಿರ್ಧಾರ ನಮ್ಮಲ್ಲಿ ಇದ್ದಾಗ ಗೊಂದಲಗಳು ಬೇಡ. ವಿದ್ಯಾರ್ಥಿ ದೆಸೆಯಲ್ಲಿ ಬಂದ ಅವಕಾಶಗಳನ್ನು ಬಳಸಿಕೊಳ್ಳಬೇಕು. ಕಲೆಗೆ ಎಂದಿಗೂ ನಿಲುವಿಲ್ಲ, ಕೆಲವೊಂದು ಸಮಯದಲ್ಲಿ ನಮ್ಮ ನೆಮ್ಮದಿಯನ್ನು ಸಂಗೀತದಲ್ಲಿ ಕಾಣಬಹುದು. ಪ್ರತಿಯೊಂದು ವಸ್ತುವಿನ ಶಬ್ದದ ಸಂಗೀತ ಇದೆ ಎಂದು ಕನ್ನಡ ಕೋಗಿಲೆ ಖ್ಯಾತಿಯ ಗಾಯಕಿ ಅಖಿಲಾ ಪಜಿಮಣ್ಣು ಹೇಳಿದರು.

ಇಲ್ಲಿನ ವಿವೇಕಾನಂದ ಕಾಲೇಜಿನ ಐಕ್ಯೂಎಸಿ ಮತ್ತು ಲಲಿತಕಲಾ ಸಂಘಗಳ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಲಲಿತಕಲಾ ಸಂಘದ ವಾರ್ಷಿಕ ಚಟುವಟಿಕೆಯನ್ನು ಉದ್ಟಾಟಿಸಿ ಗುರುವಾರ ಅವರು ಮಾತನಾಡಿದರು.

ಮುಖ್ಯ ಅಭ್ಯಾಗತರಾಗಿ ಭಾಗವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಪ್ರೊ. ವಿಷ್ಣು ಗಣಪತಿ ಭಟ್ ಮಾತನಾಡಿ, ಯಾವುದೇ ಕೆಲಸದಲ್ಲಿ ಪ್ರಯತ್ನ ಮಾಡಿದರೆ ಫಲ ಸಿಗುತ್ತದೆ. ಆಸಕ್ತಿ ಇದ್ದಾಗ ಅವಕಾಶಗಳನ್ನು ಬಳಸಿಕೊಳ್ಳಬೇಕು ಎಂದಿಗೂ ಹಿಂಜರಿಯಬಾರದು. ಇಂತಹ ಕಾರ್ಯಕ್ರಮದಿಂದ ವಿದ್ಯಾರ್ಥಿಗಳಲ್ಲಿ ಕಲೆಯ ಪ್ರೇರಣೆ ದೊರಕುತ್ತದೆ ಎಂದು ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯೆ ಶೋಭಾ ಕೊಳತ್ತಾಯ ಮಾತನಾಡಿ, ಕಲೆಯಿಂದ ಬದುಕು ಸುಂದರವಾಗುತ್ತದೆ ಮತ್ತು ವ್ಯಕ್ತಿ ಹಾಗೂ ಸಮಾಜವನ್ನು ಬದಲಿಸುವ ಕೆಲಸ ಮಾಡುತ್ತದೆ. ಕಲೆಯನ್ನು ಬಲ್ಲವನ್ನು ಎಂದಿಗೂ ಕ್ರೂರಿಯಲ್ಲ, ಅದು ಉತ್ತಮ ಭಾವನೆಯನ್ನು ಬೆಳೆಸುತ್ತದೆ. ಸಂಗೀತ ಒಂದು ಹೃದಯ ಭಾಷೆಯಂತೆ ಅದರಿಂದ ಸಿಗುವ ಒಲವು ಬೇರಾವುದರಿಂದಲೂ ಸಿಗಲು ಸಾಧ್ಯವಿಲ್ಲ. ಆದ್ದರಿಂದ ಸಾಧನೆ ಮಾಡಿದಷ್ಟು ಯಶಸ್ಸು ಗಳಿಸಬಹುದು ಎಂದರು.

ಲಲಿತ ಕಲಾ ಸಂಘದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಉದ್ಘಾಟನಾ ಕಾರ್ಯಕ್ರಮದ ನಂತರದಲ್ಲಿ ಕನ್ನಡ ಕೋಗಿಲೆ ಖ್ಯಾತಿಯ ಅಖಿಲಾ ಪಜಿಮಣ್ಣು ಇವರಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು.

ವಿದ್ಯಾರ್ಥಿನಿ ಕೀರ್ತಿ ಕುಡ್ವ ಪ್ರಾರ್ಥಿಸಿದರು. ಲಲಿತ ಕಲಾ ಸಂಘದ ಸಂಯೋಜಕ ಶ್ರೀಶ ಕುಮಾರ್ ಎಂ.ಕೆ ಪ್ರಾಸ್ತಾವಿಸಿದರು. ಸಂಘದ ಅಧ್ಯಕ್ಷೆ ಶ್ರೀರಾಗ ಹೆಚ್ ಸ್ವಾಗತಿಸಿ, ಕಾರ್ಯದರ್ಶಿ ಅನುಷ ಡಿ. ವಂದಿಸಿದರು. ಪವಿತ್ರ ಕಾರ್ಯಕ್ರಮವನ್ನು ನಿರೂಪಿಸಿದರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ಉಪಯುಕ್ತ ನ್ಯೂಸ್ ಸಿಗ್ನಲ್‌ ಗ್ರೂಪಿಗೆ ಜಾಯಿನ್ ಆಗಲು ಈ ಲಿಂಕ್‌ ಬಳಸಿ

Related posts

ದ.ಕ. ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಹ.ಸು. ಒಡ್ಡಂಬೆಟ್ಟು ಆಯ್ಕೆ

Upayuktha

ಶಿಬಾಜೆ: ವಿವಿಧ ಕಾಮಗಾರಿಗಳಿಗೆ ಶಾಸಕ ಪೂಂಜರಿಂದ ಶಿಲಾನ್ಯಾಸ

Sushmitha Jain

ಶಾರದಾ ಆಯುರ್‌ಧಾಮದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಬೆಳಗ್ಗೆ 7ರಿಂದ 8ರ ವರೆಗೆ

Upayuktha