ಕ್ಯಾಂಪಸ್ ಸುದ್ದಿ ನಗರ ಸ್ಥಳೀಯ

ವಿದ್ಯಾರ್ಥಿಗಳಲ್ಲಿ ಅಡಕವಾಗಿರುವ ವಿಜ್ಞಾನಿ ಅಭಿವೃದ್ಧಿಯಾಗಬೇಕು: ಸೇಡಿಯಾಪು ಜನಾರ್ಧನ ಭಟ್

ಪುತ್ತೂರು: ಕೃಷಿಕನಾಗುವವನು ಮೊದಲು ಯಾವ ಜಾಗದಲ್ಲಿ ಯಾವ ಬೆಳೆಯನ್ನು ಬೆಳೆದರೆ ಉತ್ತಮ ಎಂಬುದನ್ನು ತಿಳಿದುಕೊಳ್ಳಬೇಕು. ನಂತರ ಅದರಲ್ಲಿ ಬೆಳೆದ ಫಲವನ್ನು ಮೌಲ್ಯವನ್ನು ವರ್ಧಿಸುವ ಕಲೆ ತಿಳಿದಿರಬೇಕು. ಆಗ ಮಾತ್ರ ಕೃಷಿಕನಾಗಿ ಬೆಳೆಯಲು ಸಾಧ್ಯವಾಗುತ್ತದೆ ಎಂದು ಇಲ್ಲಿನ ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿಯ ಕೋಶಾಧಿಕಾರಿ ಸೇಡಿಯಾಪು ಜನಾರ್ಧನ ಭಟ್ ಹೇಳಿದರು.

ಕಾಲೇಜಿನ ಸಸ್ಯಶಾಸ್ತ್ರ ವಿಭಾಗ , ನೇಚರ್ ಕ್ಲಬ್ ಮತ್ತು ಐಕ್ಯುಎಸಿ ಘಟಕಗಳ ಆಶ್ರಯದಲ್ಲಿ ಆಯೋಜಿಸಿದ ‘ಅಂತರಾಷ್ಟ್ರೀಯ ಹಣ್ಣು ಮತ್ತು ತರಕಾರಿಗಳ ವರ್ಷ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಶುಕ್ರವಾರ ಅವರು ಮಾತನಾಡಿದರು.

ನಮ್ಮಲ್ಲಿ ಹಲವಾರು ಔಷಧೀಯ ಗಿಡಗಳು ಇವೆ. ಅದನ್ನು ಸಂಗ್ರಹಿಸಿ, ಯಾವುದಾದರೂ ರೋಗಕ್ಕೆ ಔಷಧಿಯನ್ನು ಮಾಡುವ ಪ್ರಯತ್ನ ವಿದ್ಯಾರ್ಥಿಗಳು ಮಾಡಬೇಕು. ಆಗ ಮಾತ್ರ ವಿದ್ಯಾರ್ಥಿಗಳಲ್ಲಿ ಅಡಕವಾಗಿರುವ ವಿಜ್ಞಾನಿ ಎಚ್ಚೆತ್ತುಕೊಳ್ಳುತ್ತಾನೆ ಎಂದು ಅಭಿಪ್ರಾಯ ಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿವೇಕಾನಂದ ಕಾಲೇಜಿನ ಪ್ರಾಂಶುಪಾಲರಾದ ಪ್ರೋ.ವಿಷ್ಣು ಗಣಪತಿ ಭಟ್ ಮಾತನಾಡಿ, ಈಗಿನ ಯುವಜನಾಂಗ ಹೊರಗಿನ ಆಹಾರಕ್ಕೆ ಮರುಳಾಗಿದ್ದಾರೆ. ಇದರಿಂದ ನಮ್ಮಲ್ಲಿರುವ ಪೌಷ್ಟಿಕಾಂಶ ಕಡಿಮೆಯಾಗುವುದಲ್ಲದೆ, ಹಲವಾರು ರೋಗಗಳಿಗೆ ದಾರಿ ಮಾಡಿ ಕೊಟ್ಟ ಹಾಗೆ ಆಗುತ್ತದೆ. ಆದ್ದರಿಂದ ಮನೆಯಲ್ಲೇ ಸಣ್ಣ ಕೃಷಿ ಮಾಡಿ, ಅದರಲ್ಲಿ ಬೆಳೆದ ತರಕಾರಿಗಳನ್ನು ಸೇವಿಸುವುದರಿಂದ ಪೌಷ್ಟಿಕಾಂಶದ ಜೊತೆಗೆ ರೋಗ ನಿರೋಧಕ ಶಕ್ತಿಯು ವೃದ್ಧಿಸುತ್ತದೆ ಎಂದರು.

ವಿದ್ಯಾರ್ಥಿಗಳಾದ ಸಾಯಿರೂಪ, ವೀನಾ ಶಾರದಾ ಮತ್ತು ವಿದ್ಯಾಶ್ರೀ ಪ್ರಾರ್ಥಿಸಿ, ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಶ್ರೀಕೃಷ್ಣ ಗಣರಾಜ್ ಭಟ್ ಸ್ವಾಗತಿಸಿದರು. ವಿದ್ಯಾರ್ಥಿನಿ ಶೈಣಿ ಕೆ.ಆರ್. ವಂದಿಸಿ, ಮೋನಿಷ ಎ.ಎಂ. ಕಾರ್ಯಕ್ರಮವನ್ನು ನಿರೂಪಿಸಿದರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ಉಪಯುಕ್ತ ನ್ಯೂಸ್ ಸಿಗ್ನಲ್‌ ಗ್ರೂಪಿಗೆ ಜಾಯಿನ್ ಆಗಲು ಈ ಲಿಂಕ್‌ ಬಳಸಿ

 

Related posts

ಕೊರೋನಾ ವೈರಸ್ ತಡೆ ಕುರಿತು ಕೇರಳದಲ್ಲಿ ಇಂದು ವೈದ್ಯರಿಗೆ ತರಬೇತಿ

Upayuktha

ಹಕ್ಕುಪತ್ರ, ಸಂಧ್ಯಾ ಸುರಕ್ಷಾ, ವಿಧವಾ ವೇತನ ಸಹಿತ ಸರಕಾರದ ಸೌಲಭ್ಯ ವಿತರಿಸಿದ ಶಾಸಕ ಡಾ.ಭರತ್ ಶೆಟ್ಟಿ

Upayuktha

ಅಶ್ಲೀಲ ಪ್ರಸಾರ ತಡೆಗೆ ಕಠಿಣ ನೀತಿ: ವಿಶ್ವ ಹಿಂದೂ ಪರಿಷತ್ ಕೇಂದ್ರೀಯ ಮಂಡಳಿ ಆಗ್ರಹ

Upayuktha