ದೇಶ-ವಿದೇಶ

ಇಂದಿನಿಂದ ಸಂಸತ್ ಅಧಿವೇಶನ ಆರಂಭ

ನವದೆಹಲಿ: ಕೊರೊನಾ ಹಿನ್ನೆಲೆಯಲ್ಲಿ ಬಾಕಿ ಉಳಿದ್ದ ಈ ಅಧಿವೇಶನ ಇದೀಗ ಸಂಸತ್ತಿನಲ್ಲಿ ಉಭಯ ಸದನಗಳ ಮುಂಗಾರು ಅಧಿವೇಶನ ಸೋಮವಾರದಿಂದ ಆರಂಭವಾಗಲಿದೆ. ಇದೇ ಮೊದಲು 2 ಸದನಗಳನ್ನು ಒಟ್ಟಾಗಿ ಒಂದು ಸದನದ ಕಲಾಪ ನಡೆಸುವುದು, ಸಾಮಾಜಿಕ ಅಂತರಕ್ಕೆ ಒತ್ತು , ಎರಡು ಪಾಳಿಗಳಲ್ಲಿ ಕಲಾಪ ನಡೆಸುವುದು ಸೇರಿದಂತೆ ಹಲವು ವಿಭಿನ್ನತೆಗಳಿಗೆ ಈ ಬಾರಿಯ ಅಧಿವೇಶನ ಸಾಕ್ಷಿಯಾಗಲಿದ್ದು, ಐತಿಹಾಸಿಕ ಎನಿಸಿದೆ.

ಚೀನಾ ವಿರುದ್ಧದ ಗಡಿ ಸಂಘರ್ಷ, ಕೊರೋನಾ ನಿರ್ವಹಣೆ, ಆರ್ಥಿಕತೆ ಕುಸಿತ, ಜಿಎಸ್’ಟಿ ನಷ್ಟ ಪರಿಹಾರ ವಿಚಾರಗಳನ್ನು ಮುಂದಿಟ್ಟುಕೊಂಡು ಸರ್ಕಾರದ ಮೇಲೆ ಎದ್ದೇಳಲು ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿಪಕ್ಷಗಳು ತಯಾರಾಗಿವೆ

ಇದಕ್ಕೆ ತಕ್ಕ ಉತ್ತರ ಕೊಡಲು ಆಡಳಿತದಲ್ಲಿ ರುವ ಬಿಜೆಪಿ ಪಕ್ಷವು ಸಜ್ಜಾಗಿದ್ದು, ವಿಭಿನ್ನ ಕಲಾಪದಲ್ಲೂ ಭರ್ಜರಿ ಮಾತಿನ ಘರ್ಷಣೆ ಯೋಚನೆಯಲ್ಲಿದ್ದು, ಸರ್ಕಾರ 45 ಮಸೂದೆಗಳನ್ನು ಮಂಡಿಸಲು ಉದ್ದೇಶಿಸಿದ್ದು, ಆ ಪೈಕಿ ಕೆಲವೊಂದನ್ನು ಕಠಿಣವಾಗಿ ವಿರೋಧಿಸಲು ಪ್ರತಿಪಕ್ಷಗಳು ತಯಾರು ನಡೆಸಿವೆ.

ಒಂದು ಕಲಾಪದಿಂದ ಮತ್ತೊಂದಕ್ಕೆ 6 ತಿಂಗಳಿಗಿಂತ ಅಧಿಕ ಅಂತರವಿರಬಾರದು ಎಂಬ ನಿಯಮವಿದೆ. ಆದ ಕಾರಣ ಕೊರೋನಾ ನಡುವೆಯೇ ಮುಂಗಾರು ಅಧಿವೇಶನವನ್ನು ಆಯೋಜನೆ ಮಾಡಲಾಗಿದೆ. ಸೋಮವಾರದಿಂದ ಅ.1ರ ವರೆಗೆ ಕಲಾಪ ನಡೆಯಲಿದೆ. ಸಾಮಾನ್ಯವಾಗಿ ಶನಿವಾರ ಅದರಲ್ಲೂ ವಿಶೇಷವಾಗಿ ಭಾನುವಾರ ಕಲಾಪ ನಡೆಯುವುದಿಲ್ಲ. ಆದರೆ ಈ ಬಾರಿ ವಾರಾಂತ್ಯ, ಸರ್ಕಾರಿ ರಜೆ ಯಾವುದನ್ನೂ ಪರಿಗಣಿಸದೆ ಸತತ 18 ದಿನ ಕಲಾಪ ನಡೆಸಲು ಉದ್ದೇಶಿಸಲಾಗಿದೆ. ಕೊರೋನಾ ಹಿನ್ನೆಲೆ ಕಲಾಪಕ್ಕೆ ಹಾಜರಾಗುವ ಸಂಸದರನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಸಾಮಾಜಿಕ ಅಂತರಕ್ಕೆ ಒತ್ತು ಕೊಟ್ಟು ಆಸನ ವ್ಯವಸ್ಥೆ ಮಾಡಲಾಗಿದೆ. ಸದಸ್ಯರ ನಡುವೆ ಪಾಲಿಕಾರ್ಬನ್ ಶೀಟ್ ಗಳನ್ನು ಅಳವಡಿಸಲಾಗಿದೆ.

ಬೆಳಿಗ್ಗೆ ರಾಜ್ಯಸಭೆ ಹಾಗೂ ಸಂಜೆ ಲೋಕಸಭೆ ಕಲಾಪಕ್ಕೆ ವ್ಯವಸ್ಥೆ ಮಾಡಲಾಗಿದೆ. ಮೊದಲ ದಿನ ಮಾತ್ರ ಬೆಳಿಗ್ಗೆ 9ರಿಂದ 1ರವರೆಗೆ ಲೋಕಸಭೆ, ಮಧ್ಯಾಹ್ನ 3ರಿಂದ ಸಂಜೆ 7ರವರೆಗೆ ರಾಜ್ಯಸಭೆ ಕಲಾಪ ನಡೆಯಲಿದೆ. ಮರುದಿನದಿಂದ ಬೆಳಿಗ್ಗೆ ರಾಜ್ಯಸಭೆ ಹಾಗೂ ಸಂಜೆ ಲೋಕಸಭೆ ಕಲಾಪ ನಿಗದಿಯಾಗಿದೆ.

ಲೋಕಸಭೆಯಲ್ಲಿ 257, ವೀಕ್ಷಕರ ಗ್ಯಾಲರಿಯಲ್ಲಿ 172, ರಾಜ್ಯಸಭೆಯಲ್ಲಿ 60, ವೀಕ್ಷಕರ ಗ್ಯಾಲರಿಯಲ್ಲಿ 51 ಸಂಸದರಿಗೆ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ಶೂನ್ಯವೇಳೆಯಲ್ಲಿ ಚುಕ್ಕೆ ಗುರುತಿಲ್ಲದ ಪ್ರಶ್ನೆ ಮಂಡನೆಗೆ ಅವಕಾಶ ನೀಡಲಾಗಿದೆ. ಕೆಲವು ಹಿರಿಯ ಸದಸ್ಯರಿಗೆ ಚೇಂಬರ್ ವ್ಯವಸ್ಥೆ ಕೂಡ ಮಾಡಿ ಆಸನ ಸೌಕರ್ಯ ಒದಗಿಸುವ ಕಾರ್ಯ ನಡೆದಿದೆ.

Related posts

ಕಾಶ್ಮೀರಿ ನಾಯಕರಿಗೆ ಶೀಘ್ರ ಬಂಧಮುಕ್ತಿ: ಸರಕಾರದ ಇಂಗಿತ

Upayuktha

ಶಬರಿಮಲೆ: ಸದ್ಯಕ್ಕೆ ಭಕ್ತರಿಗೆ ದರ್ಶನಕ್ಕೆ ಅವಕಾಶವಿಲ್ಲ

Upayuktha

ಗಲ್ಫ್‌ ರಾಷ್ಟ್ರಗಳಲ್ಲಿ ಐದು ವರ್ಷಗಳಲ್ಲಿ 34,000 ಭಾರತೀಯರ ಸಾವು

Upayuktha

Leave a Comment

error: Copying Content is Prohibited !!