ಫ್ಯಾಷನ್

ಹೆಣ್ಣಿನ‌ ಕಣ್ಣಿಗೆ ಅತಿಯಾದ ಮೇಕಪ್ ಒಳಿತಲ್ಲ

ಮೇಕಪ್ ಅಂದರೆ ಸಾಕು, ಮೇಕಪ್ ಮಾಡಿಸಿಕೊಳ್ಳಲು ಯುವತಿಯರು ಒಬ್ಬರಿಗಿಂತ ಒಬ್ಬರು ವಿಭಿನ್ನ ಶೈಲಿಯಲ್ಲಿ ಮೇಕಪ್ ಮಾಡಿಸಿಕೊಳ್ಳುತ್ತಾರೆ.
ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ,  ಹಲವು ಮಹಿಳೆಯರು ಮೇಕಪ್ ಮಾಡುತ್ತಾರೆ. ಇಲ್ಲದೆ ಮನೆ ಹೊರಗಡೆ ಕಾಲಿರಿಸುವುದಿಲ್ಲ , ಇನ್ಯಾವುದೇ ಕಾರ್ಯಕ್ರಮ ಸಭೆ ಸಮಾರಂಭಗಳಲ್ಲಿ ಭಾಗವಹಿಸುವುದಿಲ್ಲ .
ಅಡಿಯಿಂದ ಮುಡಿಯೊರೆಗೆ ಮೇಕಪ್ ಮಾಡದೇ ಇದ್ದರೆ ಸಮಾಧಾನಗೊಳ್ಳದ ಮಹಿಳೆಯರು ನಮ್ಮ ನಡುವೆ ಇರುತ್ತಾರೆ. ಆದರೆ ಮೇಕಪ್ ನಿಂದ ಆ ದಿನ ಮಾತ್ರವೇ ಸುಂದರವಾಗಿ ಕಾಣಬಹುದು.
ಮೇಕಪ್ ಗೆ ಉಪಯೋಗಿಸುವ ವಸ್ತುಗಳು ನಿಧಾನವಾಗಿ ನಮ್ಮ ಚರ್ಮದ ಅಂದವನ್ನು ಹಾಳು‌ ಮಾಡುತ್ತವೆ. ಕೆಲವೊಮ್ಮೆ ಅಲರ್ಜಿ ಉಂಟಾಗಬಹುದು.
ಅದರಲ್ಲೂ ಮುಖ್ಯವಾಗಿ ಕಣ್ಣಿಗೆ ಮೇಕಪ್ ಮಾಡುವಾಗ ತುಂಬಾ ಜಾಗರೂಕರಾಗಿರಬೇಕು. ಕಣ್ಣಿಗೆ ಹಚ್ಚುವ ಐ ಶ್ಯಾಡೋ , ಐ ಲೈನರ್ ನಿಂದ ನಿಧಾನವಾಗಿ ಕಣ್ಣು ಅಪಾಯಕ್ಕೆ ತುತ್ತಾಗುವ ಸಾಧ್ಯತೆ ಇರುತ್ತದೆ.
ಹಾಗಾಗಿ ಇವುಗಳನ್ನು ಬಳಸುವ ಮೊದಲೇ ಎಚ್ಚರಿಕೆಯಿಂದ ಬಳಸುವುದು ಉತ್ತಮ. ಕಣ್ಣಿಗೆ ಮೇಕಪ್ ಮಾಡುವ ಮುನ್ನ ಮುನ್ನೆಚ್ಚರಿಕೆ ಅಗತ್ಯ.
ಮೇಕಪ್ ಮಾಡಿಕೊಳ್ಳುವ ಮೊದಲು ನಮ್ಮ ಕೈಯನ್ನು ಸ್ವಚ್ಛವಾಗಿ ತೊಳೆದು ಕೊಳ್ಳಬೇಕು. ನಾವೆಲ್ಲ ಹಾಸ್ಟೆಲ್ ನಲ್ಲೋ , ಪಿಜಿಯಲ್ಲೋ ಅಥವಾ ನೆಂಟರಿಷ್ಟರ ಮನೆಯಲ್ಲಿ ಇದ್ದರೆ ಸಾಮಾನ್ಯವಾಗಿ ಸ್ನೇಹಿತರೊಂದಿಗೆ , ನೆಂಟರಿಷ್ಟರೊಂದಿಗೆ  ವಸ್ತುಗಳನ್ನು ಹಂಚಿಕೊಳ್ಳುತ್ತೇವೆ. ಆದರೆ ಕಣ್ಣಿನ ಮೇಕಪ್ ಗೆ ಬಳಸುವ ವಸ್ತುಗಳನ್ನು ಇತರರೊಂದಿಗೆ ಹಂಚಿಕೊಳ್ಳಬಾರದು.
 ಕಣ್ಣಿನ ಮೇಕಪ್ ವಸ್ತುಗಳನ್ನು ಹಂಚಿಕೊಳ್ಳುವುದು ಬ್ಯಾಕ್ಟೀರಿಯಗಳನ್ನು ಹಂಚಿಕೊಂಡಂತೆ. ನಮ್ಮ ಕಣ್ಣಿಗೆ ಸೊಂಕು ತಾಕಿದ್ದರೆ ಮೊದಲು ಕಣ್ಣಿಗೆ ಮೇಕಪ್ ಹಚ್ಚಿಕೊಳ್ಳುವುದು ನಿಲ್ಲಿಸಿ.
ಅಲ್ಲದೇ ನಮ್ಮ ಬಳಿ ಇರುವ ಕಣ್ಣಿನ ಎಲ್ಲಾ ಮೇಕಪ್ ಸಾಮಾಗ್ರಿಗಳನ್ನು ಎಸೆಯಬೇಕು. ಇಲ್ಲದಿದ್ದರೆ ಕಣ್ಣನ್ನು ಕಳೆದುಕೊಳ್ಳುವ ಸಂಧರ್ಭ ಎದುರಾಗಬಹುದು.
ನಾವು ಬಳಸುವ ಮೇಕಪ್ ಡಬ್ಬಿಯ ಬಾಯಿ ತೆರೆದೊಡನೆ ಗಾಳಿಯಲ್ಲಿ ಇರುವ ಸಾವಿರಾರು  ಕ್ರಿಮಿಕೀಟಗಳು ಡಬ್ಬಿಯೊಳಗೆ ಸೇರುತ್ತವೆ. ಡಬ್ಬಿಯ ಬಾಯಿ ಮುಚ್ಚಿದ ನಂತರ ಅವು ಮತ್ತೆ ಮೇಕಪ್ ಸಾಮಾಗ್ರಿಯೊಂದಿಗೆ ಸೇರುತ್ತವೆ. ಇದನ್ನು ಮತ್ತೆ ಮತ್ತೆ ಉಪಯೋಗಿಸುವುದರಿಂದ ಅಲರ್ಜಿ ಉಂಟಾಗುತ್ತದೆ.
ಅಲ್ಲದೇ ಯಾವುದೇ ವಸ್ತುವನ್ನು ಒಂದು ವರ್ಷಕ್ಕಿಂತ ಹೆಚ್ಚು ಉಪಯೋಗಿಸುವುದು ಹಾನಿಕಾರಕ.  ಚರ್ಮದ ಹಿತರಕ್ಷಣೆಯಿಂದ ಒಳ್ಳೆಯದಲ್ಲ.
ಯಾವುದೇ ಮೇಕಪ್ ವಸ್ತುವನ್ನು ಕೊಳ್ಳುವ ಮೊದಲು ಅದನ್ನು ಉಪಯೋಗಿಸಿ ನೋಡಬೇಕು. ಎಲ್ಲಾ ಉತ್ಪನ್ನಗಳು ಎಲ್ಲರಿಗೂ ಸರಿಯಾಗಿ ಉಪಯೋಗಕ್ಕೆ ಬರುವುದಿಲ್ಲ.
ನೈಸರ್ಗಿಕ ಉತ್ಪನ್ನಗಳಿಂದಲೂ ಅಲರ್ಜಿ ಉಂಟಾಗಿದ್ದರೆ ಅಲರ್ಜಿ ಅಂಶ ಅಧಿಕವಾಗಿದೆ ಎಂದರ್ಥ. ಹಾಗಿದ್ದಾಗ ಆದಷ್ಟು ಮೇಕಪ್ ಉತ್ಪನ್ನಗಳ ಬಳಕೆ ಕಡಿಮೆ ಮಾಡುವುದು ಉತ್ತಮ.
   ✍ಹರ್ಷಿತಾ ಕುಲಾಲ್

Related posts

ಹಲ್ಲಿಗೂ ಬಂತು ಹಚ್ಚೆ: ಫ್ಯಾಷನ್ನಿನ ಹೊಸ ರೂಪ

Upayuktha

ಮಂಗಳೂರಿನಲ್ಲಿ ‘ಜಯಲಕ್ಷ್ಮಿ ಮೆಗಾ ಶೋರೂಂ ಉದ್ಘಾಟನೆ

Upayuktha

‘ಲಿವಾ ಮಿಸ್ ದಿವಾ ಯೂನಿವರ್ಸ್ 2020’ ಆಡ್ಲೈನ್ ಕ್ಯಾಸ್ಟೊಲಿನೊಗೆ ಹುಟ್ಟೂರ ಸ್ವಾಗತ

Upayuktha