ಓದುಗರ ವೇದಿಕೆ

ಚಿಂತಾಜನಕ ಸ್ಥಿತಿಯಲ್ಲಿರುವ ಇವರಿಗೆ ನೆರವಾಗುವಿರಾ…?

ಒಂದೇ ಮನೆಯಲ್ಲಿ ಸೊಂಟದ ಸ್ವಾಧೀನ ಇಲ್ಲದೆ ನಾಲ್ವರು ಅಸಹಾಯಕ ಸ್ಥಿತಿಯಲ್ಲಿ ದಿನಗಳ ಕಳೆಯತ್ತಿದ್ದಾರೆ..! ನಾಗರಿಕ ಸಮಾಜ ಮಾನವೀಯತೆಯ ನೆಲೆಯಲ್ಲಿ ಸ್ಪಂದಿಸಬೇಕಾಗಿದೆ. ನೆರವಾಗಿರುವಿರಾ..!!

ಒಂದೇ ಮನೆಯಲ್ಲಿ ಇರುವ ನಾಲ್ವರು ವಿಚಿತ್ರ ವ್ಯಾಧಿಯಿಂದ ಬಳಲುತ್ತಿದ್ದು, ಕಳೆದ ಐದು ವರ್ಷಗಳಿಂದ ಹಾಸಿಗೆಯಲ್ಲಿ ದಿನಗಳ ಕಳೆಯುತ್ತಿರುವ ಕರುಣಾಜನಕ ಘಟನೆಯು ಕಾರ್ಕಳದ ಅತ್ತೂರು ಗ್ರಾಮದಲ್ಲಿ ಕಂಡುಬಂದಿದೆ. ನಾಲ್ವರು ಪದ್ಮಶಾಲಿ ಸಮಾಜದ ಪದವು ತೋಟದಮನೆಯ ನಿವಾಸಿಗಳು.

ಗುಲಾಬಿ ಶೆಟ್ಟಿಗಾರ್ತಿ, (73 ವ), ಇವರ ಮಕ್ಕಳಾದ ಯಶೋಧಾ ಶೆಟ್ಟಿಗಾರ್ (37ವ) ಬಾಲಕೃಷ್ಣ ಶೆಟ್ಟಿಗಾರ್ (39ವ), ಗೀತಾ ಶೆಟ್ಟಿಗಾರ್ (32ವ) ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದವರು. ನಾಲ್ವರಿಗೂ ಸೊಂಟ, ಕಾಲಿನ ಸ್ವಾದಿನ ಇಲ್ಲದೆ ನಡೆಯಲಾಗದ ಚಿಂತಾಜನಕ ಪರಿಸ್ಥಿತಿಯಲ್ಲಿ ದಿನಗಳ ಕಳೆಯತ್ತಿದ್ದಾರೆ. ಕಳೆದ ಐದು ವರ್ಷಗಳಿಂದ ನಾಲ್ವರು ಈ ಕಾಯಿಲೆಗೆ ತುತ್ತಾಗಿದ್ದರೆಂದು ತಿಳಿದುಬಂದಿದೆ. ಹಲವು ಆಸ್ಪತ್ರೆಗಳಲ್ಲಿ ಅಲೆದಾಡಿದರೂ ಇವರಿಗೆ ಬಾಧಿಸಿರುವ ವ್ಯಾಧಿಯು ಗುಣಕಾಣದೆ ಕಂಗಲಾಗಿದ್ದಾರೆ. ಸರಕಾರದಿಂದ ಬರುವ ಪಿಂಚಣಿ 1500 ರೂಪಾಯಿ, ಅನ್ನಭಾಗ್ಯದ ಪಡಿತರ, ಹಾಗೂ ಊರ ಜನರಲ್ಲಿ ಅಂಗಲಾಚಿ ಪಡೆದಿರುವ ನೆರವಿನಿಂದ ಇವರು ದಿನಕಳೆಯುತ್ತಿದ್ದಾರೆ. ದುಡಿಯುವರು ಹಾಸಿಗೆ ಹಿಡಿದಿರುವುದರಿಂದ ಚಿಕಿತ್ಸೆ ಔಷೋಧೋಪಚಾರ ನಡೆಸಲು ಇವರಲ್ಲಿ ಅಸಾಧ್ಯವಾಗಿದೆ. ರಕ್ತದ ಸಮಸ್ಯೆಯಿಂದ ಈ ವ್ಯಾಧಿ ಬಂದಿರುವುದೆಂದು ವ್ಯೆದ್ಯರಿಂದ ತಿಳಿದುಬಂದಿದೆ.

ವಿಷಯ ತಿಳಿದು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ಕೆ.ಬಾಲಗಂಗಾಧರ ರಾವ್ ಅವರು ರೋಗಿಗಳ ಮನೆಗೆ ಭೇಟಿ ನೀಡಿದ್ದಾರೆ. ದೊಡ್ಡ ಆಸ್ಪತ್ರೆಯಲ್ಲಿ ನಾಲ್ವರನ್ನು ಚಿಕಿತ್ಸೆಗೆ ಅಗತ್ಯವಾಗಿ ಒಳಪಡಿಸಬೇಕಾಗಿದೆ, ದೊಡ್ಡ ಮಟ್ಟದ ಆರ್ಥಿಕ ನೆರವಿನ ಅಗತ್ಯವಿದೆ. ಸಹೃದಯಿ ದಾನಿಗಳು, ಸಮಾಜದ ಸಂಘ ಸಂಸ್ಥೆಗಳು ಬಡಕುಟುಂಬದ ನೆರವಿಗೆ ಬರಬೇಕೆಂದು, ನಾಗರಿಕ ಸಮಿತಿಯ ಕಾರ್ಯಕರ್ತರು ವಿನಂತಿಸಿಕೊಂಡಿದ್ದಾರೆ.

ಅವರ ಬ್ಯಾಂಕ್ ಖಾತೆ ವಿವರ;
Balakrishnan Shettigar
Corporation bank
Doopadakatte branch
A/no 024502101001560
Ifsc code- CORP0000245

ಸಂಪರ್ಕ ಸಂಖ್ಯೆ:- ಬಾಲಕೃಷ್ಣ ಶೆಟ್ಟಿಗಾರ್ 9611495379

ವರದಿ: ತಾರಾನಾಥ್ ಮೇಸ್ತ ಶಿರೂರು

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಈ ರಸ್ತೆ ಕಂದಕಗಳನ್ನು ಮುಚ್ಚಿಸುವವರು ಯಾರು?

Upayuktha

ಮಹಾನಗರವೆಂಬ ಮಾಯಾಲೋಕ… ಹಳ್ಳಿ ಹುಡುಗನ ಸಿಟಿ ಲೈಫ್…

Upayuktha

ಕೊರೊನಾ ವ್ಯಾಪಕತೆ: ಯಾರ ವೈಫಲ್ಯ? ಯಾರ ಮೇಲೆ ಹೊಣೆ?

Upayuktha