ಲೇಖನಗಳು

ಹಿತ-ಮಿತ: ಊಟ ಬಲ್ಲವರಿಗೆ…

ಊಟ ಬಲ್ಲವನಿಗೆ ರೋಗವಿಲ್ಲ
ಮಾತು ಬಲ್ಲವನಿಗೆ ಜಗಳವಿಲ್ಲ..ಆಹಾ ಎಷ್ಟೊಂದು ಸುಂದರ ವಾಕ್ಯಗಳಿವು. ಈ ಎರಡನ್ನು ಮನುಷ್ಯನಾದವನು ಪಾಲಿಸಿದರೆ ಬಹುಷ: ಮನುಷ್ಯನಷ್ಟು ಸುಖೀ ಪ್ರಾಣಿ ಜಗತ್ತಿನಲ್ಲಿ ಇನ್ನೊಂದಿರಲು ಸಾಧ್ಯವೇ ಇಲ್ಲ. ನಾಲಿಗೆ ಎನ್ನವ ಎರಡಂಚಿನ ಇಂದ್ರಿಯವು ಇಡೀ ಮನುಷ್ಯನನ್ನೇ ಇನ್ನಿಲ್ಲದಂತೆ ಕಾಡುತ್ತದೆ ಎಂದರೆ ಇದರ ತಾಕತ್ತು ಎಂತಹದೆಂದು ನಮಗರಿವಾಗುತ್ತದೆ. ಸಾಧಕನಾಗಲು, ಯೋಗಿಯಾಗಲು, ಆರೋಗ್ಯವಂತನಾಗಲು, ಉತ್ತಮ ವಾಗ್ಮಿಯಾಗಲು, ಜನಪ್ರಿಯ ವ್ಯಕ್ತಿಯಾಗಲು ಬಹಳ ಸುಲಭ ನಾಲಿಗೆ ಮೇಲೆ ಹಿಡಿತವಿದ್ದಾಗ.

ಹಿಂದಿನ ಕಾಲದಲ್ಲಿ ಕಠಿಣ ದುಡಿಮೆ, ಕನಿಷ್ಟ ಆಹಾರ ಇರುತ್ತಿದ್ದುದರಿಂದ ಸಹಜವಾಗಿಯೇ ಆರೋಗ್ಯವಂತ ದೃಢಕಾಯ ಇರುತ್ತಿತ್ತು. ಈಗ ಅದರ ವಿರುದ್ಧ ವಾತಾವರಣವಿರುವುದರಿಂದ ಅನಾರೋಗ್ಯದ ಸ್ಥೂಲಕಾಯವೇ ಹೆಚ್ಚು ಜನರಿಗಿರುವುದು ನಾವು ಕಾಣುತ್ತೇವೆ. ಕಾರಣಗಳು ಹಲವಿರಬಹುದು.

ಅದರಲ್ಲಿ ಮುಖ್ಯವಾದದ್ದೇ ಶ್ರಮವಲ್ಲದ ಜೀವನ, ಶಿಸ್ತಿಲ್ಲದ ಆಹಾರ ಕ್ರಮ. ಹಿಂದಿನ ಕಾಲದಲ್ಲಿ ಊಟದಿಂದ ಇನ್ನೊಂದು ಊಟದ ಮಧ್ಯೆ ನೀರು ಮಾತ್ರ ಕುಡಿಯುತ್ತಿದ್ದರೆ ಈಗ ಮಧ್ಯಂತರ ತೀರಾ ಕಡಿಮೆ. ತಿನ್ನಬಾರದ್ದನ್ನು ತಿಂದು ಬರಬಾರದಿರುವ ಖಾಯಿಲೆ ತರಿಸಿ ಕೊಂಡಾಗ ತಪ್ಪು ಅರಿವಾದರೆ ಕ್ಷಮೆಯಾದರು ಎಲ್ಲಿರುತ್ತದೆ? ಅನುಭವಿಸಿಯೇ ತೀರಬೇಕು.

ಇನ್ನು ಮಾತಿಗೆ ಬಂದರೆ ಆಡಬೇಕಾದ ಮಾತಿಗಿಂತ ಆಡಬಾರದ ಮಾತುಗಳಿಂದ ಆಗುವ ಅನಾಹುತಗಳೇ ಇಂದು ಜಾಸ್ತಿ. ರಾಜಕಾರಣಿಗಳಿಂದ ತೊಡಗಿ ಮಠಾಧಿಪತಿಗಳವರೆಗೂ, ಸಾಮಾನ್ಯರಿಂದ ತೊಡಗಿ ಅಸಾಮಾನ್ಯರವರೆಗೂ ಅಸಂಬದ್ಧ ಮಾತುಗಾರರೇ ಜಾಸ್ತಿ. ಸಂದರ್ಭಕ್ಕೆ ತಕ್ಕಂತೆ ದೇಶ ಕಾಲಕ್ಕನುಸಾರವಾಗಿ ಹಿತವಾದ ಸೂಕ್ತವಾದ ವಾಕ್ಚಾತುರ್ಯವಿರುವವರು ಬೆರಳೆಣಿಕೆಯಷ್ಟು ಮಾತ್ರ. ಅಂದಿನಿಂದ ಇಂದಿನವರೆಗೂ ದೇಶದೇಶದೊಳಗೆ ಯುದ್ಧಗಳಾಗಲೂ ಮತ್ತೆ ಶಾಂತಿಗಳಾಗಲೂ ಮಾತಿನ ವರಸೆಗಳೇ ಕಾರಣ. ಅನಿಸುತ್ತಿಲ್ಲವೇ ಆ ಎರಡಿಂಚು ನಾಲಗೆ ಏನೆಲ್ಲ ಅನಾಹುತಕ್ಕೆ ಕಾರಣವಾಗುತ್ತದೆ ಎಂದು..? ಏನೇ ಇರಲಿ ನಮ್ಮನ್ನು ನಾಲಗೆಯು ಆಳದಿರುವಂತೆ ನೋಡಿಕೊಂಡರೆ ನಾವು ಜಗವನ್ನೇ ಆಳಬಹುದು….

**********
– ಸಹಸ್ರಬುಧ್ಯೆ ಮುಂಡಾಜೆ

 

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

 

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್  App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

ಏನಿದು ರೂಪಾಂತರಿ ಕೊರೋನಾ? ಇದು ಮೊದಲಿನದಕ್ಕಿಂತಲೂ ಉಗ್ರವೇ…?

Upayuktha

ಹವ್ಯಕ ಲೇಖನ: ಪಾತ್ರ ತೊಳವಲೆ ಸ್ಕ್ರಬ್ಬರೇ ಬೇಕೊ..? ಬೋಳುಧಾರಳೆ ಸುಗುಡುದೆ, ನೊರೆಕ್ಕಾಯಿದೆ ಸಾಕು…

Upayuktha

ಚರಿತ್ರೆಯಲ್ಲಿ ಸತ್ಯದ ಆಯಾಮಗಳು…

Upayuktha