ಲೇಖನಗಳು-ಅಧ್ಯಾತ್ಮ

ಚಿಂತನ: ಅಪ್ಪ ನೆಟ್ಟ ಆಲದ ಮರವೆಂದು ಅದಕ್ಕೇ ಜೋತುಬಿದ್ದು ಬೆಪ್ಪರಾಗದಿರೋಣ

ಅಪ್ಪ ನೆಟ್ಟ ಆಲದ ಮರ.. ಅದು ಪೂಜೆಗೂ ಆಗುತ್ತದೆ, ನೆರಳಿಗೂ ಆಗುತ್ತದೆ, ಪ್ರಾಣಿ ಪಕ್ಷಿಗಳಿಗೆ ಆಶ್ರಯವೂ ಆಗುತ್ತದೆ. ಹಾಗೆಂದು ಅದರಲ್ಲಿ ಮಗನಿಗೆ ಯಾವ ಅಧಿಕಾರವೂ ಇರದು. ಆ ಮರದಿಂದ ಏನು ಸದುಪಯೋಗ ಇದೆಯೋ ಅದನ್ನಷ್ಟೇ ಆತ ಪಡಕೊಳ್ಳಬಹುದು. ಹೇಗೆ ನೆಟ್ಟದ್ದು ಅಪ್ಪನಾದರೂ ಅದರ ಉಪಯೋಗ ಹಲವು ಜೀವಿಗಳಿಗೆ ಇರುವುದೋ ಅದೇ ರೀತಿ ತಾನು ತನ್ನ ಜೀವಿತವನ್ನು ಸಮಾಜದ ಋಣ ತೀರಿಸಲೆಂದು ಅರ್ಪಿಸಿಕೊಳ್ಳಬೇಕೇ ಹೊರತು ಕೇವಲ ತನ್ನ ಮನೆ, ಮಡದಿ, ಮಕ್ಕಳು ಎಂದು ಸ್ವಾರ್ಥಕ್ಕಾಗಿಯೇ ಬದುಕಬಾರದು ಎಂಬ ಸೂಕ್ಷ್ಮ ವಿಚಾರವೂ ಇದೆ.

ಇನ್ನು ಕೆಲವರು ಸ್ವಂತಿಕೆಯೇ ಇಲ್ಲದೆ, ಶ್ರದ್ಧೆಯೋ ಅಂಧಶ್ರದ್ಧೆಯೋ ಹಿಂದಿನಿಂದ ನಡೆದುಕೊಂಡು ಬಂದಂಥ ದಾರಿಯಲ್ಲೇ ಮುಂದುವರೆಯಲು ಅಪೇಕ್ಷಿಸತ್ತಾರೆ. ಇವರು ಎಷ್ಟು ಪರಾವಲಂಬಿಗಳಾಗಿರುತ್ತರೆಂದರೆ, ಬದುಕುವುದಾದರೂ ಸಾಯುವುದಾದರೂ ಈ ಆಲದ ಮರದ ಕೆಳಗೆಯೇ ಎಂಬ ತೀರ್ಮಾನಕ್ಕೆ ಬಂದವರಂತೆ. ಆಲದ ಮರಕ್ಕೂ,ನೆಟ್ಟಂಥ ಅಪ್ಪನಿಗೂ ತನಗೂ ಅವಿನಾಭಾವ ಸಂಬಂಧವಿದ್ದು ಯಾವ ಕಾರಣಕ್ಕೂ ವಿಚಾರಕ್ಕೂ ವಿಮರ್ಶೆಗೂ ಅವಕಾಶವೇ ಇಲ್ಲದಂತೆ. ಒಂದು ವೇಳೆ ಈ ಮರ ಹಳತಾಗಿ ಈಗಲೋ ಆಗಲೋ ಧರೆಗುರುಳುವ ಸ್ಥಿತಿಯಲ್ಲಿದ್ದರೂ ಅದರಡಿಗೇ ಬಿದ್ದು ಪ್ರಾಣ ಕಳಕೊಂಡಾರೇ ಹೊರತು ಬದಿಗೆ ಸರಿದು ಹೊಸ ಅವಕಾಶವನ್ನು ಬಳಸಿಕೊಳ್ಳಲಾರರು. ಇಂಥವರಿಂದ ಸಮಾಜಕ್ಕೆ ಯಾವ ಉಪಯೋಗವೂ ಇಲ್ಲ.

ಯಾರಾತ ಆರೋಗ್ಯಪೂರ್ಣವಾದ ಪರಿವರ್ತನೆಗೆ ಸ್ಪಂದಿಸವುದಿಲ್ಲವೋ ಆತನ ಹಾಗೂ ಆತನನ್ನುಸರಿಸುವವರ ಪಾಡಂತು ಅಧೋಮುಖವೇ. ಇವತ್ತು ಯಾವುದೇ ರಾಜಕೀಯ ಪಕ್ಷವಿರಬಹುದು, ಒಂದು ವಿದ್ಯಾ ಸಂಸ್ಥೆ ಇರಬಹುದು, ಒಂದು ಸಮಾಜ ಅಥವಾ ಸಮುದಾಯವಿರಬಹುದು, ಒಂದು ಧರ್ಮವಿರಬಹುದು ಅಥವಾ ಒಂದು ದೇಶವೇ ಇರಬಹುದು ಕಾಲಕಾಲಕ್ಕೆ ಬೇಕಾದಂಥ ಆರೋಗ್ಯಕರ ಬದಲಾವಣೆ ಮಾಡಿಕೊಂಡು ಮುಂದುವರೆಯುವುದಿಲ್ಲವೋ ಆಗ ಅದೆಲ್ಲಕ್ಕೂ ಅಧಃಪತನವೇ ಗತಿ. ಕೆಲವೊಂದು ವಿಚಾರಗಳು ಸಾರ್ವಕಾಲಿಕವಾಗಿ ಬದಲಾಗದೇ ಇರುವಂಥದ್ದು ಇರುತ್ತದೆ. ಆಗ ನಾವು ಅದರೊಡನೆ ಹೊಂದಿಕೊಂಡು ಬದುಕಬೇಕಾದ ಅನಿವಾರ್ಯತೆಯ ಹೊರತಾಗಿ ಪರಿವರ್ತನೆಯಿಂದ ಮಾತ್ರ ಮಾನವನ ಉನ್ನತಿ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.

ಅಪ್ಪ ನೆಟ್ಟ ಆಲದ ಮರ ಒಂದು ಕಾಲದಲ್ಲಿ ಬಹೂಪಯೋಗಿಯಾಗಿದ್ದರೂ ಅದಕ್ಕೂ ಒಂದು ಕಾಲದ ಮಿತಿ ಇದೆ ತಾನೆ. ಅದರಿಂದ ಬಾಧೆ ಪ್ರಾರಂಭವಾದಾಗ ಇನ್ನೊಂದು ಸುದೃಢ ಮರವನ್ನು ಆಶ್ರಯಿಸುವುದು ಜಾಣತನ ಮಾತ್ರವಲ್ಲ ಅಗತ್ಯವೂ ಹೌದು. ಆದ್ದರಿಂದ ಅಪ್ಪ ನೆಟ್ಟ ಆಲದ ಮರವಾದರೂ ಅದರಿಂದ ಬದುಕು ಕಟ್ಟಬಹುದಾದರೆ ಅದರ ಆಶ್ರಯದಲ್ಲಿರೋಣ. ಒಂದು ವೇಳೆ ಬದುಕು ಕಷ್ಟವಾದರೆ ಅಪ್ಪ ನೆಟ್ಟದ್ದೆಂದು ಜೀವವನ್ನು ಅರ್ಪಿಸುವ ಬೆಪ್ಪರಾಗದಿರೋಣ. ಪರಿವರ್ತನೆಯೇ ಜೀವನದ ಧರ್ಮ. ಇದು ಕೃಷ್ಣನ ಸಂದೇಶವೂ ಹೌದು ವಾಸ್ತವವೂ ಹೌದು. ಏನಂತೀರಿ..??
***********
– ಬಾಲಕೃಷ್ಣ ಸಹಸ್ರಬುಧ್ಯೆ, ಮುಂಡಾಜೆ

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಈಗ ಲಭ್ಯ. ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

ಟೆಲಿಗ್ರಾಂ ಬ್ರಾಡ್‌ಕಾಸ್ಟ್‌ ಮೂಲಕ ಉಪಯುಕ್ತ ನ್ಯೂಸ್‌ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ.

Related posts

‘ಮಾಧ್ವ ಇತಿಹಾಸದಲ್ಲಿ ಶ್ರೀಮದಕ್ಷೋಭ್ಯತೀರ್ಥರ ಕೀರ್ತಿ ಅಮರವಾದುದು!!‘

Upayuktha

ಗೀತೆ- ಮಹಾಮಹಿಮ ಶ್ರೀಕೃಷ್ಣನ ಚಿನ್ಮಯರೂಪ

Upayuktha

ಶುಭನುಡಿ

Upayuktha