ದೇಶ-ವಿದೇಶ

ಹಕ್ಕಿ ಜ್ವರ ಹಿನ್ನೆಲೆ ಹಿಮಾಚಲ ಪ್ರದೇಶಕ್ಕೆ ಬಂದ ಸಾವಿರಾರು ವಲಸೆ ಪಕ್ಷಿಗಳು ಸಾವು

ಶಿಮ್ಲಾ: ಉತ್ತರ ಭಾರತದಲ್ಲಿ ಹಕ್ಕಿಜ್ವರ ಹೆಚ್ಚಾಗಿದ್ದು, ವಿವಿಧ ದೇಶಗಳಿಂದ ಹಿಮಾಚಲ ಪ್ರದೇಶಕ್ಕೆ ಬಂದಿದ್ದ ಸಾವಿರಾರು ವಲಸೆ ಪಕ್ಷಿಗಳು ಸೋಂಕಿಗೆ ತುತ್ತಾಗಿ ಸಾವನ್ನಪ್ಪಿವೆ.

ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯಲ್ಲಿರುವ ಪಾಂಗ್ ಡ್ಯಾಮ್‌ ನದಿಯ ಸುತ್ತಮುತ್ತ 1800ಕ್ಕೂ ಅಧಿಕ ವಲಸೆಗಳು ಸತ್ತು ಹೋಗಿವೆ. ಮುಂಜಾಗ್ರತಾ ಕ್ರಮವಾಗಿ ಈ ಪ್ರದೇಶದಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಬಗ್ಗೆ ತಜ್ಞರು ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಹಕ್ಕಿಜ್ವರದಿಂದಲೇ ಹಕ್ಕಿಗಳು ಸಾವನ್ನಪ್ಪಿವೆ ಎಂದು ಕಾಂಗ್ರಾ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ನದಿ ಪಾತ್ರದ ಸುಮಾರು 10 ಕಿ ಮೀ ವ್ಯಾಪ್ತಿಯಲ್ಲಿ ಪ್ರವಾಸಿ ಚಟುವಟಿಕೆಗಳನ್ನು ಬಂದ್‌ ಮಾಡಲಾಗಿದೆ. ಕೋಳಿ ಮಾಂಸ ಮಾರಾಟವನ್ನು ನಿಷೇಧಿಸಲಾಗಿದೆ.

ಕೋಳಿಗಳು ಇರುವ ಕೋಳಿ ಫಾರ್ಮ್ ಗಳಲ್ಲಿ ಅಗತ್ಯ ವಾಗಿ ಪರೀಕ್ಷೆ ನಡೆಸುವಂತೆ ಮತ್ತು ಸೋಂಕು ಪೀಡಿತ ಕೋಳಿಗಳನ್ನು ವೈಜ್ಞಾನಿಕವಾಗಿ ನಾಶ ಪಡಿಸುವಂತೆ ಆದೇಶ ನೀಡಲಾಗಿದೆ  ಎಂದು ಅವರು ಮಾಹಿತಿ ನೀಡಿದ್ದಾರೆ.

 

Related posts

ವಿಶ್ವ ದಾಖಲೆಯ ಓಟಗಾರನಿಗೆ ಕೋವಿಡ್ ಧೃಡ

Harshitha Harish

ಹಿಮಾಚಲ ಪ್ರದೇಶ ಸರ್ಕಾರದಿಂದ ನಟಿ ಕಂಗನಾ ರನಾವತ್ ರಕ್ಷಣೆ ಗೆ ನಿರ್ಧಾರ

Harshitha Harish

ಮುಕೇಶ್ ಅಂಬಾನಿ ನಿವಾಸದ ಬಳಿ ಕಾರಿನಲ್ಲಿ ಜಿಲೆಟಿನ್ ಪತ್ತೆ

Harshitha Harish