ಇತರ ಕ್ರೀಡೆಗಳು ಕ್ಯಾಂಪಸ್ ಸುದ್ದಿ ನಗರ ಸ್ಥಳೀಯ

ತ್ರೋಬಾಲ್ ಪಂದ್ಯಾಟ: ವಿವೇಕಾನಂದ  ಪಿಯು ಬಾಲಕರ ತಂಡ ಪ್ರಥಮ, ಬಾಲಕಿಯರ ತಂಡ ದ್ವಿತೀಯ ಸ್ಥಾನ

ಪುತ್ತೂರು: ಉಪ್ಪಿನಂಗಡಿಯ ಸರಕಾರಿ ಪದವಿಪೂರ್ವ ಕಾಲೇಜು ಹಾಗೂ ತೆಂಕಿಲದ ನರೇಂದ್ರ ಪದವಿಪೂರ್ವ ಕಾಲೇಜಿನ ಆಶ್ರಯದಲ್ಲಿ ತೆಂಕಿಲದ ಕ್ರೀಡಾಂಗಣದಲ್ಲಿ ನಡೆದ ತಾಲೂಕು ಮಟ್ಟದ ತ್ರೋಬಾಲ್ ಪಂದ್ಯಾಟದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಬಾಲಕರ ತಂಡ ಪ್ರಥಮ ಮತ್ತು ಬಾಲಕಿಯರ ತಂಡ ದ್ವಿತೀಯ ಸ್ಥಾನ ಗಳಿಸಿದೆ.

ಬಾಲಕರ ವಿಭಾಗದ ತಂಡದಲ್ಲಿ ವಿದ್ಯಾರ್ಥಿಗಳಾದ ಅನಿಕೇತ್ ಬದನಾಜೆ, ಮಿಥುನ್ ಜಿ.ಪಿ, ಚೇತನ್, ತರುಣ್ ಕುಮಾರ್, ಭಗತ್ ಎಚ್ ಎನ್, ತನುಜ್, ಚರಣ್, ಸಾತ್ವಿಕ್, ಚಿರಾಗ್ ಶೆಟ್ಟಿ, ಪ್ರೀತೇಶ್ ಕುಮಾರ್, ಸಂತೋಷ್ ಬಿ, ರೋಹನ್ ಸಿ, ದಿತಿನ್ ಬಿ ಭಾಗವಹಿಸಿದ್ದರು.

ಬಾಲಕಿಯರ ತಂಡದಲ್ಲಿ ವಿದ್ಯಾರ್ಥಿಗಳಾದ ಚೈತ್ರ, ದುರ್ಗಾಶ್ರೀ, ಚಾಂದಿನಿ ಎಸ್ ಪಿ, ಶ್ರೀಜನ ಕೆ, ಪ್ರಜ್ಞಾ ಎಸ್, ಎಂ. ಎಸ್ ದೀಪಾಲಿ, ವಿದ್ಯಾ, ಪೂರ್ಣಿಮ ಎಸ್, ಸಿಂಚನಾ, ರಕ್ಷಾ ಜಿ, ಶ್ರೀರಕ್ಷಾ ಭಾಗವಹಿಸಿದ್ದರು.

ಈ ತಂಡವು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರವಿಶಂಕರ್, ಡಾ| ಜ್ಯೋತಿ ಮತ್ತು ಯತೀಶ್ ಇವರ ನೇತೃತ್ವದಲ್ಲಿ ತರಬೇತಿಯನ್ನು ಪಡೆದಿರುತ್ತಾರೆ.

ತಂಡದ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಅಧ್ಯಾಪಕ ಮತ್ತು ಅಧ್ಯಾಪಕೇತರ ವೃಂದ ಅಭಿನಂದಿಸಿದ್ದಾರೆ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ಉಪಯುಕ್ತ ನ್ಯೂಸ್ ಸಿಗ್ನಲ್‌ ಗ್ರೂಪಿಗೆ ಜಾಯಿನ್ ಆಗಲು ಈ ಲಿಂಕ್‌ ಬಳಸಿ

Related posts

ಹಠ ಯೋಗ ಸಾಧನೆ ನಾಥಪಂಥದ ಮೂಲ: ಭಾಸ್ಕರ ರೈ ಕುಕ್ಕುವಳ್ಳಿ

Upayuktha

ಸುಳ್ಯದ ಪತ್ರಕರ್ತರಿಬ್ಬರಿಗೆ ತಗುಲಿದ ಕೋವಿಡ್

Harshitha Harish

ಶ್ರೀರಾಮ ನೈವೇದ್ಯಕ್ಕೆ ಭತ್ತದ ನಾಟಿ

Upayuktha