ರಾಜ್ಯ

ಇಂದು ವಿಶ್ವ ಕ್ಯಾನ್ಸರ್ ದಿನ ; ಬಿಎಸ್ ವೈ ಟ್ವೀಟ್

ಬೆಂಗಳೂರು: ಇಂದು ವಿಶ್ವ ಕ್ಯಾನ್ಸರ್‌ ದಿನವಾಗಿದ್ದು, ಕ್ಯಾನ್ಸರ್‌ಗೆ ಸಂಬಂಧಿಸಿದಂತೆ ಜನಜಾಗೃತಿ ಮೂಡಿಸುವಂತೆ ಮುಖ್ಯಮಂತ್ರಿ ಬಿ. ಎಸ್‌. ಯಡಿಯೂರಪ್ಪ ಕರೆ ನೀಡಿದ್ದಾರೆ.

ಈ ಬಗ್ಗೆ ಟ್ವೀಟ್‌ ಮೂಲಕ ಅವರು, ಇಂದು ವಿಶ್ವ ಕ್ಯಾನ್ಸರ್ ದಿನ! ನಾವೆಲ್ಲರೂ ಒಂದಾಗಿ ಸಮಾಜದಲ್ಲಿ ಕ್ಯಾನ್ಸರ್ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಬದಲಾವಣೆ ತರಲು ಪ್ರಯತ್ನಿಸೋಣ. ಕ್ಯಾನ್ಸರ್ ವಿರುದ್ಧ ಸಮರ ಸಾರಿರುವ ನಮ್ಮ ವೈದ್ಯಲೋಕದ ಸ್ಥೈರ್ಯವನ್ನು ಹೆಚ್ಚಿಸೋಣ, ಕ್ಯಾನ್ಸರ್‌ನಿಂದ ಬಳಲುತ್ತಿರುವವರಲ್ಲಿ ಆತ್ಮವಿಶ್ವಾಸ ಮೂಡಿಸೋಣ ಎಂದು ತಿಳಿಸಿದ್ದಾರೆ.

ಕ್ಯಾನ್ಸರ್‌ ಎಂಬ ದೊಡ್ಡ ಕಾಯಿಲೆಗೆ ತುತ್ತಾಗಿರುವ ರೋಗಿಗಳ ಮೇಲೆ ನಮ್ಮಲ್ಲಿ ಸಹಾನುಭೂತಿ ಪ್ರೀತಿ ಇರಲಿ. ಈ ರೋಗದ ವಿರುದ್ಧ ಸಮರ ಸಾರಿರುವ ವೈದ್ಯಕೀಯ ಲೋಕಕ್ಕೆ ನಾವೆಲ್ಲರೂ ಬೆಂಬಲ ಸೂಚಿಸೋಣ.

ಕ್ಯಾನ್ಸರ್‌ ರೋಗದ ಬಗ್ಗೆ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನಮ್ಮ ಪ್ರಯತ್ನವಿರಲಿ ಎಂಬುದಾಗಿಯೂ ಮುಖ್ಯಮಂತ್ರಿಗಳು ಟ್ವೀಟ್‌ ಮೂಲಕ ತಿಳಿಸಿದ್ದಾರೆ.

Related posts

‘ಮನೆ ಅಳಿಯಂದಿರ’ ಕೈ ಬಿಡುವ ಪ್ರಶ್ನೆಯೇ ಇಲ್ಲ: ಅನರ್ಹ ಶಾಸಕರ ಕುರಿತು ಕೆ.ಎಸ್ ಈಶ್ವರಪ್ಪ

Upayuktha

ಕರ್ನಾಟಕ ಉಪಚುನಾವಣೆ ಮತಗಳ ಎಣಿಕೆ: ತಾಜಾ ಟ್ರೆಂಡ್‌ಗಳ ಪ್ರಕಾರ 12 ಕಡೆ ಬಿಜೆಪಿ ಮುನ್ನಡೆ

Upayuktha

10 ಕೋಟಿ ರೂ. ದಂಡ ಪಾವತಿಸಿದ ಜಯಲಲಿತಾ ಆಪ್ತೆ ವಿಕೆ ಶಶಿಕಲಾ

Harshitha Harish