ಅಪಘಾತ- ದುರಂತ ರಾಜ್ಯ

ತಮಿಳುನಾಡಿನಲ್ಲಿ ಟ್ರ್ಯಾಕ್ಟರ್ ಮಗುಚಿ ಅದರಲ್ಲಿದ್ದ 5 ಮಹಿಳೆಯರು ಸಾವು; 15 ಮಂದಿ ಗೆ ಗಾಯ

ರಾಮನಗರ: ತಮಿಳುನಾಡಿನಲ್ಲಿ ಟ್ರ್ಯಾಕ್ಟರ್ ಒಂದು ಮಗುಚಿ ಬಿದ್ದ ಪರಿಣಾಮ ರಾಜ್ಯದ ಐವರು ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿದರು. ಇನ್ನುಳಿದಂತೆ 15 ಮಂದಿ ಗಾಯಗೊಂಡಿರುವ ಘಟನೆ ಸೋಮವಾರ ನಡೆದಿದೆ.

ಕನಕಪುರ ತಾಲೂಕಿನ ಕಸಬಾ ಹೋಬಳಿ ಕೆರಳಾಳುಸಂದ್ರ ಗ್ರಾಮದ ನಿವಾಸಿಗಳಾದ ಮಲ್ಲಯ್ಯನವರ ಪತ್ನಿ ಈರಮ್ಮ(85), ಹಳೆಬೀದಿಯ ಹೊಸಬಮ್ಮ(75), ವೆಂಕಟೇಗೌಡರ ಪತ್ನಿ ಪುಟ್ಟನಿಂಗಮ್ಮ(60), ಜಗದೀಶ್‌ ಎಂಬವರ ಪತ್ನಿ ಗೌರಮ್ಮ(60), ಮಂಜುನಾಥ್‌ ಎಂಬವರ ಪತ್ನಿ ಮಂಗಳಾ(25) ಮೃತಪಟ್ಟ ಮಹಿಳೆಯರೆಂದು ಗುರುತಿಸಲಾಗಿದೆ.

ಕೆರಳಾಳುಸಂದ್ರ ಗ್ರಾಮದ 15 ಮಂದಿ ಟ್ರ್ಯಾಕ್ಟರ್ ಮೂಲಕ ತಮಿಳುನಾಡಿನ ದಬ್ಬಗುಳೇಶ್ವರ ದೇವಾಲಯಕ್ಕೆ ಹೋದ ಸಂಧರ್ಭದಲ್ಲಿ ಈ ದುರಂತ ಸಂಭವಿಸಿದೆ.

Related posts

ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಕೊರೊನಾ ಪಾಸಿಟಿವ್

Harshitha Harish

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಎಪ್ರಿಲ್ 20ರ ವರೆಗೆ ಮುಂದೂಡಿಕೆ: ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ

Upayuktha

ಸಚಿವರು ಜನರನ್ನು ರಕ್ಷಿಸುವ ಬದಲು ದುಡ್ಡು ಮಾಡಲು ಮುಂದಾಗಿದ್ದಾರೆ: ಡಿ.ಕೆ ಶಿವಕುಮಾರ್ ವಾಗ್ದಾಳಿ

Upayuktha