ಕ್ಯಾಂಪಸ್ ಸುದ್ದಿ ನಗರ ಸ್ಥಳೀಯ

ಪಾರಂಪರಿಕ ಕಲೆಯ ಪ್ರತಿಭೆಗಳನ್ನು ಹೊರಚಿಮ್ಮಿಸುವ ನೈತಿಕ ಜವಾಬ್ದಾರಿ ಬೆಳೆಯಬೇಕು: ಪ್ರೊ. ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ

ಆಳ್ವಾಸ್‌ ಕ್ಯಾಂಪಸ್‌ನಲ್ಲಿ ಮಹಿಳಾ ಯಕ್ಷಗಾನ 2021 ಸಂಭ್ರಮ

ಮೂಡುಬಿದಿರೆ: ಸಾಂಸ್ಕೃತಿಕ ಕಲೆಗಳು ಮರೆಯಾಗುತ್ತಿರುವ ಕಾಲಘಟ್ಟದಲ್ಲಿ, ವಿಪುಲ ಅವಕಾಶಗಳನ್ನು ಬಳಸಿಕೊಂಡು ಪ್ರತಿಭೆಗಳನ್ನು ಹೊರಚಿಮ್ಮಿಸುವ ನೈತಿಕ ಜವಬ್ದಾರಿ ಬೆಳೆಯಬೇಕೆಂದು ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳಾದ ಫ್ರೊ. ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ಹೇಳಿದರು.

ಕರ್ನಾಟಕ ಯಕ್ಷಗಾನ ಅಕಾಡೆಮಿ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದಲ್ಲಿ ವಿದ್ಯಾಗಿರಿಯ ಕುವೆಂಪು ಸಭಾಂಗಣದಲ್ಲಿ 2 ದಿನಗಳ ಕಾಲ ನಡೆಯಲಿರುವ `ಮಹಿಳಾ ಯಕ್ಷಸಂಭ್ರಮ- 2021′ ಕಾರ್ಯಕ್ರಮವನ್ನು ಉದ್ಘಾಟಿಸಿದ ಅವರು, ವಿದೇಶಿಯರು ಅಸೂಯೆ ಪಡುವಂತಹ ಯುವಶಕ್ತಿ ಭಾರತದಲ್ಲಿದೆ. ಆದರೆ ಯುವಜನರ ಇಚ್ಚಾಶಕ್ತಿ ನಿಂತ ನೀರಿನಂತಾಗಿ ಸಾಂಸ್ಕøತಿಕ ಚಟುವಟಿಕೆಗಳಲ್ಲಿ ಕಾಣಿಸಿಕೊಳ್ಳುವುದು ಕಡಿಮೆಯಾಗಿದೆ. ಆದ್ದರಿಂದ ಪುಸ್ತಕದ ಹೊರತಾದಜ್ಞಾನದೊಂದಿಗೆ ಪಾರಂಪರಿಕಕಲೆಯ ಮೌಲ್ಯಗಳ ಹಾಗೂ ಸನಾತನಧರ್ಮದ ಶ್ರೇಷ್ಠತೆಯ ಅರಿವು ಮೂಡಿಸಬೇಕು. ಈ ನಿಟ್ಟಿನಲ್ಲಿ ಯಕ್ಷಗಾನ ಕಲೆಯನ್ನು ಅಚ್ಚುಕಟ್ಟಾಗಿ ಮುಂದೆ ತರುವ ಪಠ್ಯಕ್ರಮ ಮತ್ತು ಸಾಂಸ್ಕೃತಿಕ ಅಸ್ಮಿತೆಯನ್ನು ಎತ್ತಿ ಹಿಡಿಯುವ ನೀತಿಯ ಅನುಷ್ಠಾನವನ್ನು ಮಂಗಳೂರು ವಿವಿಯ ಮುಖಾಂತರ ಜಾರಿಗೆ ತರಲಿದ್ದೇವೆ ಎಂದರು.

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ಶ್ರೀ ಕೇತ್ರ ಕಟೀಲಿನ ಅನುವಂಶಿಕ ಅರ್ಚಕರಾದ ಹರಿನಾರಾಯಣದಾಸ ಆಸ್ರಣ್ಣ ಮಾತನಾಡಿ, ಯಕ್ಷಗಾನದಲ್ಲಿ ಮಹಿಳೆಯರು ಎಷ್ಟು ಸೂಕ್ತ ಎನ್ನುವ ಜಿಜ್ಞಾಸೆ ಹಿಂದಿನಿಂದಲೂ ಇದೆ. ಆದರೆ ಯಕ್ಷಗಾನವು ಗಂಡುಕಲೆಯಾದ ಮಾತ್ರಕ್ಕೆ ಕೇವಲ ಪುರುಷರಿಗೆ ಸೀಮಿತವಾದುದಲ್ಲ, ಮಹಿಳೆಯರಿಗೂ ಸಮಾನ ಅವಕಾಶಗಳಿವೆ. ಹಿಮ್ಮೇಳದಲ್ಲಿ ಹೆಚ್ಚಾಗಿ ಮಹಿಳೆಯರನ್ನು ಕಾಣುತ್ತೇವೆ. ಮುಮ್ಮೇಳದ ರಾಜವೇಷಗಳಂತಹ ಪಾತ್ರಗಳಿಗೂ ಮಹಿಳೆಯರು ಸಜ್ಜುಗೊಳ್ಳಬೇಕು. ಇದರ ಜೊತೆಗೆ ವಿಶ್ವವಿದ್ಯಾನಿಲಯದ ಕಲಾ ವಿಭಾಗದಲ್ಲಿ ಯಕ್ಷಗಾನದ ಪಠ್ಯಗಳು ಆರಂಭಗೊಳ್ಳಬೇಕೆಂದರು. ಸಿನಿಮಾರಂಗದ ಪ್ರಭಾವದಿಂದಾಗಿ ಪಾರಂಪರಿಕ ಯಕ್ಷಗಾನದಲ್ಲಿ ಒಂದಷ್ಟು ಬದಲಾವಣೆಯಾದರೂ, ಅದರ ಮೂಲಸ್ವರೂಪಕ್ಕೆ ತೊಂದರೆಯಾಗದಂತಹ ಬದಲಾವಣೆಗಳು ಆದರೆ ತಪ್ಪಾಗುವುದಿಲ್ಲ ಎಂದರು.

Home

ಕಾರ್ಯಕ್ರಮದ ಆರಂಭದಲ್ಲಿ ಉಡುಪಿಯ ಶ್ರೀ ದುರ್ಗಾಂಬಿಕ ಮಹಿಳಾ ಚೆಂಡೆ ಬಳಗದ ವತಿಯಿಂದಯಕ್ಷಗಾನದ ಕೇಳಿ ಕರೆಯುವ ಸಂಪ್ರದಾಯ `ಚೆಂಡೆಯ ಕಲರವ’ ವಿಶೇಷವಾಗಿತ್ತು. ಯಕ್ಷಗಾನದ ಪೂರ್ವರಂಗವನ್ನು ಕಟೀಲಿನ ಶ್ರೀ ದುರ್ಗಾ ಮಕ್ಕಳ ಮೇಳದವರು ನಡೆಸಿಕೊಟ್ಟರು. ಸಭಾಕಾರ್ಯಕ್ರಮದ ನಂತರ ಮೂಡಲಪಾಯ ಯಕ್ಷಗಾನ ರತಿಕಲ್ಯಾಣ, ಬಡಗು ಯಕ್ಷಗಾನ ಭೌಮಾಸುರ ಕಾಳಗ ಹಾಗೂ ಆಳ್ವಾಸ್ ಧೀಂಕಿಟ ಯಕ್ಷಗಾನ ತಂಡದಿಂದ ಯಕ್ಷರೂಪಕ ನಡೆಯಿತು

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಫ್ರೊ. ಎಂ ಎ ಹೆಗಡೆ ವಹಿಸಿದ್ದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ, ಉದ್ಯಮಿ ಶ್ರೀಪತಿ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕರ್ನಾಟಕ ಯಕ್ಷಗಾನ ಅಕಾಡೆಮಿಯ ರಿಜಿಸ್ಟ್ರಾರ್ ಎಸ್. ಎಚ್. ಶಿವರುದ್ರಪ್ಪ ಸ್ವಾಗತಿಸಿ, ಸದಸ್ಯ ಯೋಗೀಶ್ ಚಿಗುರುಪಾದೆ ವಂದಿಸಿದರು. ಅಕಾಡೆಮಿಯ ಸದಸ್ಯ ಸಂಚಾಲಕ ನವನೀತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ಉಪಯುಕ್ತ ನ್ಯೂಸ್ ಸಿಗ್ನಲ್‌ ಗ್ರೂಪಿಗೆ ಜಾಯಿನ್ ಆಗಲು ಈ ಲಿಂಕ್‌ ಬಳಸಿ

Related posts

ಧರ್ಮಸ್ಥಳದಲ್ಲಿ ಭಗವಾನ್ ಬಾಹುಬಲಿ ಮೂರ್ತಿಗೆ ಪಾದಾಭಿಷೇಕ

Upayuktha

ಕ್ರಿಯೆ, ಪ್ರತಿಕ್ರಿಯೆ ಗುರುತಿಸಿದರೆ ಪ್ರಯೋಗ ಸಾಫಲ್ಯ: ಆಳ್ವಾಸ್‌ನಲ್ಲಿ ಬಯೋ ಕೈಮೆರಾ ಕಾರ್ಯಾಗಾರ

Upayuktha

ಮಾನವೀಯತೆಗಿಂತ ಮಿಗಿಲಾದ ಜಾತಿ ಇನ್ನೊಂದಿಲ್ಲ: ಡಾ| ಚೂಂತಾರು

Upayuktha