ಜಿಲ್ಲಾ ಸುದ್ದಿಗಳು

ಕುಮಾರಧಾರಾ ನದಿ ದಂಡೆಯ ಮೇಲೆ ಸಾಲು ಮರದ ತಿಮ್ಮಕ್ಕನ ಹೆಸರಿನ ಉದ್ಯಾನವನ ಉದ್ಘಾಟನೆ

ಮಂಗಳೂರು: ಕುಮಾರಧಾರಾ ನದಿ ದಂಡೆಯ ಮೇಲೆ ಪರಿಸರವಾದಿ ಸಾಲುಮರದ ತಿಮ್ಮಕ್ಕನ ಹೆಸರಿನ ಉದ್ಯಾನವನವನ್ನು ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಇಂದು ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಸಚಿವರು ಅರಣ್ಯ ಇಲಾಖೆ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಟ್ರಸ್ಟಿಗಳ ಸಹಯೋಗದೊಂದಿಗೆ 5 ಕೋಟಿ ರೂ.ಗಳ ವೆಚ್ಚದಲ್ಲಿ ಉದ್ಯಾನವನವನ್ನು ಅಭಿವೃದ್ಧಿಪಡಿಸಿದೆ ಎಂದರು.

“ಸಾಲುಮರದ ತಿಮ್ಮಕ್ಕ ಸಸಿಗಳನ್ನು ನೆಟ್ಟು ಕಠಿಣ ಪರಿಶ್ರಮದ ಮೂಲಕ ಪೋಷಿಸಿದ್ದರು ಮತ್ತು ಪ್ರಕೃತಿ ಸಂರಕ್ಷಣೆಗೆ ಅವರು ನೀಡಿದ ಕೊಡುಗೆಗೆ ಈ ಉದ್ಯಾನವನವು ಸೂಕ್ತ ಗೌರವವಾಗಿದೆ”

ಈ ಉದ್ಯಾನವನವು 25 ಎಕರೆ ಸ್ಥಳದಲ್ಲಿ ಮತ್ತು ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಿಂದ 2 ಕಿ.ಮೀ ದೂರದಲ್ಲಿದ್ದು, ಈ ಉದ್ಯಾನವನವು ಪಶ್ಚಿಮ ಘಟ್ಟದ ​​ಸ್ಥಳೀಯ ಜಾತಿಯ ಸಸ್ಯಗಳನ್ನು ಹೊಂದಿದೆ.

ಇಲ್ಲಿ ಮಕ್ಕಳ ಆಟದ ಪ್ರದೇಶ, ವಾಕಿಂಗ್ ಟ್ರ್ಯಾಕ್, ಪಕ್ಷಿ ವೀಕ್ಷಣೆ ಟ್ರ್ಯಾಕ್, ನಕ್ಷತ್ರವನ, ಆಯುರ್ವೇದ ಸಸ್ಯಗಳನ್ನು ಹೊಂದಿದೆ. ಇದರ ಜೊತೆಗೆ, ಉದ್ಯಾನದಲ್ಲಿ ಕಾವಲು ಗೋಪುರ ಮತ್ತು ತೆರೆದ ರಂಗಮಂದಿರವಿದೆ.

ಉದ್ಯಾನವನವು ಮಲೆನಾಡಲ್ಲಿ ಕಂಡುಬರುವ 17 ಬಗೆಯ ಬಿದಿರು ಮತ್ತು ವಿವಿಧ ವರ್ಣರಂಜಿತ ಹೂವಿನ  ಗಿಡಗಳನ್ನು ಮತ್ತು ಮರಗಳನ್ನು ಹೊಂದಿದೆ.

ಮುಂದಿನ 5 ವರ್ಷಗಳಲ್ಲಿ ಉದ್ಯಾನವನ್ನು ಹಸಿರಿನಿಂದ ಆಕರ್ಷಿಸುವಂತೆ ಅಭಿವೃದ್ಧಿಪಡಿಸಲಾಗುವುದು. ಈ ರೀತಿಯಲ್ಲಿ ಅಭಿವೃದ್ಧಿ ಪಡಿಸಲು ಸುಮಾರು ಒಂದು ಕೋಟಿ ರೂ. ಖರ್ಚು ಮಾಡಲಾಗಿದ್ದು, ಅದರ ನಿರ್ವಹಣೆಯನ್ನು ನೋಡಿಕೊಳ್ಳಲು ಸಮಿತಿಯನ್ನು ರಚಿಸಲಾಗುವುದು.

ಪ್ರವಾಸಿಗರಿಗೆ ಬೋಟಿಂಗ್ ಸೌಲಭ್ಯವೂ ಇದ್ದು  ದೇಗುಲದ ಇತಿಹಾಸವನ್ನು ವಿವರಿಸುವ ಸ್ಟಾಲ್ ಸಹ ಈ ಉದ್ಯಾನವನದಲ್ಲಿ ಇರಲಿದೆ. ಎಂದು ಸಚಿವರು ಹೇಳಿದ್ದಾರೆ.

 

Related posts

ದ.ಕ. ಜಿಲ್ಲೆಯಲ್ಲಿ ಇಬ್ಬರಿಗೆ ಕೊರೊನಾ ಪಾಸಿಟಿವ್

Upayuktha

ಧರ್ಮಸ್ಥಳ: ಮಣಿಕೃಷ್ಣ ಸ್ವಾಮಿ ಅಕಾಡಮಿಯಿಂದ ಯುವ ಕಲಾಮಣಿ ಪ್ರಶಸ್ತಿ ಪ್ರದಾನ

Upayuktha

ಮಹಾಕಾವ್ಯದ ಗಾಂಭೀರ್ಯ ಉಳಿಸಿದ ಮಂದಾರ ರಾಮಾಯಣ: ಡಾ. ನಿಕೇತನ

Upayuktha