ನಗರ ಸ್ಥಳೀಯ

ವಿವಿ ಕಾಲೇಜು ಹಳೆ ವಿದ್ಯಾರ್ಥಿ, ಉದ್ಯಮಿ ಕಿಶೋರ್ ಕುಮಾರ್ ಶೆಟ್ಟಿಯವರಿಗೆ ನುಡಿನಮನ

ಮಂಗಳೂರು: ಸೆಪ್ಟೆಂಬರ್ 12ರಂದು ನಿಧನರಾದ ವಿಶ್ವವಿದ್ಯಾನಿಲಯ ಕಾಲೇಜಿನ ಹಳೆ ವಿದ್ಯಾರ್ಥಿ, ಉದ್ಯಮಿ ಮಾಗಣ್ತಡಿ ಕಿಶೋರ್ ಕುಮಾರ್ ಶೆಟ್ಟಿ (63) ಅವರ ಸ್ಮರಣಾರ್ಥ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಭಾನುವಾರ ಶ್ರದ್ಧಾಂಜಲಿ ಸಭೆ ಏರ್ಪಡಿಸಲಾಗಿತ್ತು.

ಪ್ರಾಸ್ತಾವಿಕವಾಗಿ ಮಾತನಾಡಿದ ಮಂಗಳೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವ ಪ್ರೊ. ಧರ್ಮ, ಕಿಶೋರ್ ಕುಮಾರ್ ಶೆಟ್ಟಿ ಅವರ ನಿಧನದೊಂದಿಗೆ ಅವರ ಅಪಾರ ಸ್ನೇಹಿತ ಬಳಗ ಸ್ಫೂರ್ತಿಯ ಸೆಲೆಯೊಂದನ್ನು ಕಳೆದುಕೊಂಡಿದೆ ಎಂದರು.

ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ ಸುಬ್ರಹ್ಮಣ್ಯ ಯಡಪಡಿತ್ತಾಯ, ಹೃದಯ ಶ್ರೀಮಂತಿಕೆಯಿದ್ದ ಮೃತರಿಗೆ ವಿವಿಗೆ ಹೊಸ ಕಳೆ ನೀಡುವ ಕನಸಿತ್ತು, ಎಂದರು. ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ. ಚಿನ್ನಪ್ಪ ಗೌಡ, ಶೆಟ್ಟಿಯವರು ಪರೋಪಕಾರಿಯಾಗಿದ್ದರು, ಎಲ್ಲವೂ ಇದ್ದರೂ ಅಹಂಕಾರ ಪಡದ ಅಪರೂಪದ ವ್ಯಕ್ತಿಯಾಗಿದ್ದರು ಎಂದರು.

ನೆರೆದಿದ್ದ ಕಿಶೋರ್ ಕುಮಾರ್ ಶೆಟ್ಟಿ ಮತ್ತು ಅವರ ಪತ್ನಿ ಮಂಗಳೂರು ವಿಶ್ವವಿದ್ಯಾನಿಲಯದ ವಿಶೇಷಾಧಿಕಾರಿ ಅನುಸೂಯಾ ರೈಯವರ ಸಹಪಾಠಿಗಳು, ಸ್ನೇಹಿತರು ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನುಡಿನಮನ ಸಲ್ಲಿಸಿದರು. ಅವರ ಕ್ರೀಡಾ ಸಾಧನೆ, ಲಯನ್ಸ್ ಕ್ಲಬ್ ಚಟುವಟಿಕೆಗಳನ್ನು ಕೊಂಡಾಡಿದರು. ಮೃತರ ಸದ್ಗತಿಗಾಗಿ ಮೌನ ಆಚರಿಸಲಾಯಿತು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್ App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

ಫಿಲೋ ವೆಂಚುರ 2020: ಎಸ್‌ವಿಎಸ್‌ ಕಾಲೇಜು ಬಂಟ್ವಾಳಕ್ಕೆ ಸಮಗ್ರ ಪ್ರಶಸ್ತಿ

Upayuktha

ಸಂತ ಫಿಲೋಮಿನಾ ಕಾಲೇಜಿನಲ್ಲಿ ವಿಶ್ವ ಪರಿಸರ ದಿನಾಚರಣೆ

Upayuktha

ಅರಣ್ಯೇತರ ಚಟುವಟಿಕೆ ವಿರುದ್ಧ ನೋಟಿಸ್: ವಿವಾದಾಸ್ಪದ ಹೊಸಗುಂದ ಉತ್ಸವಕ್ಕೆ ಬ್ರೇಕ್

Upayuktha

Leave a Comment