ಗ್ರಾಮಾಂತರ ಸ್ಥಳೀಯ

‘ತುಳುನಾಡ ಬಾಲೆ ಬಂಗಾರ್’ ಮುದ್ದು ಮಕ್ಕಳ ಭಾವಚಿತ್ರ ಸ್ಪರ್ಧೆಯ ಆಯ್ಕೆ ಪ್ರಕ್ರಿಯೆ ಸಂಪನ್ನ

ಚಿತ್ರಗಳು: ದೀಪಕ್ ರಾಜ್ ಉಪ್ಪಳ

ಮಂಜೇಶ್ವರ: ತುಳುವೆರೆ ಆಯನೊ ಕೂಟ (ರಿ.) ಹಾಗೂ ತುಳುನಾಡ ಬಾಲೆ ಬಂಗಾರ್ ಸಮಿತಿ ಮಂಜೇಶ್ವರ ಇದರ ಆಶ್ರಯದಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ಆಯೋಜಿಸಿದ ತುಳುನಾಡ ಬಾಲೆ ಬಂಗಾರ್- 2019 ಮುದ್ದು ಮಕ್ಕಳ ಫೋಟೋ ಸ್ಪರ್ಧೆ- ಸೀಸನ್ 4ರ ಆಯ್ಕೆ ಪ್ರಕ್ರಿಯೆ ಹೊಸಂಗಡಿಯ ಗೇಟ್ ವೇ ಸಭಾಂಗಣದಲ್ಲಿ ಶನಿವಾರ ಅಪರಾಹ್ನ ಬಳಿಕ ಜರಗಿತು. ಈ ವರ್ಷದ ಸ್ಪರ್ಧೆಯಲ್ಲಿ 4 ವರ್ಷದ ಒಳಗಿನ ಸುಮಾರು 70ರಷ್ಟು ಮಕ್ಕಳ ಭಾವಚಿತ್ರಗಳು ಸ್ವಿಕೃತಿಗೊಂಡಿತ್ತು.

ಕಾಸರಗೋಡು , ದಕ್ಷಿಣ ಕನ್ನಡ, ಕೊಡಗು, ಉಡುಪಿ ಜಿಲ್ಲೆಯ ಮಕ್ಕಳು ಸ್ಪರ್ಧೆಗೆ ಭಾವಚಿತ್ರ ಕಳುಹಿಸಿದ್ದರು. ಸ್ಪರ್ಧೆಯ ತೀರ್ಪುಗಾರರಾಗಿ ಚಿತ್ರ ಕಲಾವಿದ ಜೆ.ಪಿ.ಆಚಾರ್ಯ ಕೋಟೆಕ್ಕಾರ್ ,ಡಾ.ಸ್ವಪ್ನಾ ಹೊಸಂಗಡಿ, ಖ್ಯಾತ ಛಾಯಾಗ್ರಾಹಕ ಪುಣಿಕ್ ಶೆಟ್ಟಿ ಮಂಗಳೂರು ಭಾಗವಹಿಸಿ ಪ್ರಥಮ, ದ್ವಿತೀಯ, ತೃತೀಯ ಹಾಗೂ ಐದು ಮಂದಿಗೆ ಸಮಾಧಾನಕರ ಹಾಗೂ ಪ್ರೋತ್ಸಾಹಕರ ಬಹುಮಾನಕ್ಕೆ ಭಾವಚಿತ್ರವನ್ನು ಆಯ್ಕೆ ಮಾಡಿ ತೀರ್ಪು ಕೊಟ್ಟರು.

ಈ ಸಂದರ್ಭದಲ್ಲಿ ತುಳುನಾಡ ಬಾಲೆ ಬಂಗಾರ್ ಸಮಿತಿ ಅಧ್ಯಕ್ಷ ಸಂಕಬೈಲ್ ಸತೀಶ್ ಅಡಪ್ಪ, ಪ್ರ.ಕಾರ್ಯದರ್ಶಿ ರತನ್ ಕುಮಾರ್ ಹೊಸಂಗಡಿ, ಪ್ರ.ಸಂಚಾಲಕ ಜಯ ಮಣಿಯಂಪಾರೆ, ಛಾಯಾಗ್ರಾಹಕ ಶ್ರೇಯಸ್ ಮಂಗಳೂರು, ರಫೀಕ್ ಪ್ಲೇಕ್ಸ್ ಪಾಯಿಂಟ್ ಮೊದಲಾದವರು ಉಪಸ್ಥಿತರಿದ್ದರು.

ವಿಜೇತರ ಹಾಗೂ ಭಾಗವಹಿಸಿದವರ ವಿಶೇಷ ಪ್ರದರ್ಶನ ಚಿತ್ರ ಅನಾವರಣ ಮೂಲಕ ನವೆಂಬರ್ 13ರಂದು ಮಧ್ಯಾಹ್ನ 3 ಗಂಟೆಗೆ ಅತಿಥಿ ಗಣ್ಯರ ಸಮ್ಮುಖದಲ್ಲಿ ಬಹುಮಾನ ವಿತರಣೆ ನಡೆಯಲಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.

ತೀರ್ಪುಗಾರರ ತೀರ್ಮಾನ:

ತುಳುನಾಡಿನ ಸಂಸ್ಕೃತಿ, ಸಂಸ್ಕಾರಗಳನ್ನು ಬಿಂಬಿಸುವ ರೀತಿಯಲ್ಲಿನ ಮಕ್ಕಳ ಫೋಟೋಗಳಿಗೆ ಪ್ರಾಮಖ್ಯತೆ ನೀಡಲಾಗಿದೆ:’ ಜೆ.ಪಿ.ಕೋಟೆಕ್ಕಾರ್

ಮಕ್ಕಳ ಹಾವಭಾವಗಳು ಹಾಗೂ ನೈಜತೆ ಎದ್ದು ಕಾಣುವಂತಿರುವುದನ್ನು ಹಾಗೂ ನಿಬಂಧನೆಗೆ ಅನುಗುಣವಾದ ಉಡುಗೆ ತೊಡುಗೆಗೆ ಆಯ್ಕೆಯಲ್ಲಿ ಆದ್ಯತೆ ನೀಡಲಾಗಿದೆ. :  ಡಾ.ಸ್ಬಪ್ನಾ ಹೊಸಂಗಡಿ

ಮಕ್ಕಳ ಮುಗ್ದತೆ ಎಲ್ಲಾ ಚಿತ್ರಗಳಲ್ಲಿ ಬಿಂಬಿತವಾಗಿದ್ದರೂ ಕೆಲವು ನಿಬಂಧನೆಗೆ ಮೀರಿತ್ತು. ಮುಖ್ಯವಾಗಿ ಪೋಟೊಜೆನಿಕ್ ಫ್ರೇಮ್ ನ ವ್ಯವಸ್ಥೆಯಲ್ಲಿದ್ದವನ್ನು ಆಯ್ಕೆ ಮಾಡಲಾಗಿದೆ: ಪುಣಿಕ್ ಶೆಟ್ಟಿ ಮಂಗಳೂರು.

Related posts

ಎಸ್.ಡಿ.ಎಂ ಪಿ.ಜಿ. ಸೆಂಟರ್‌ಗೆ ನೂತನ ಡೀನ್

Upayuktha

ಸಂಶೋಧನೆಗಳು ಸಮಾಜಮುಖಿಯಾಗಿರಬೇಕು: ಪ್ರೊ.ಶ್ರೀಪತಿ ಕಲ್ಲೂರಾಯ

Upayuktha

ದ.ಕ. 16ಕ್ಕೇರಿದ ಕೊರೊನಾ ಪ್ರಕರಣ

Upayuktha