ಕಿರುತೆರೆ- ಟಿವಿ ಚಂದನವನ- ಸ್ಯಾಂಡಲ್‌ವುಡ್ ಪ್ರಮುಖ ಸಿನಿಮಾ-ಮನರಂಜನೆ

ಬಿಗ್ ಬಾಸ್: ಈ ವಾರವೂ ಕಿಚ್ಚನ ಪಂಚಾಯತ್ ಇಲ್ಲ

ಕಳೆದ ಎರಡು ವಾರಗಳ ಕಾಲ ವೀಕೆಂಡ್​ ಕಾರ್ಯಕ್ರಮಕ್ಕೆ ಗೈರಾಗಿದ್ದ ನಟ ಸುದೀಪ್, ಈ ವಾರವೂ ಕಾಣಿಸಿಕೊಳ್ಳದಿರುವುದು ಬಿಗ್ ಬಾಸ್ ಅಭಿಮಾನಿಗಳಿಗೆ ಈ ವಾರವೂ ಬಿಗ್​ ಶಾಕ್​ ನೀಡಿದೆ

ಅನಿರೀಕ್ಷಿತ ಬೆಳವಣಿಗೆಯಲ್ಲಿ ಇಂದು ನಟ‌ ಸುದೀಪ್ ಬಿಗ್ ಬಾಸ್ ಕಾರ್ಯಕ್ರಮ ನಡೆಸಿಕೊಡುತ್ತಿಲ್ಲ ಎಂದು ವಾಹಿನಿ ತಿಳಿಸಿದೆ.

ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಣೆ ನೀಡಿರುವ ವಾಹಿನಿ, ಸದ್ಯ ಇರುವ ಸಂಕಷ್ಟದ ಸನ್ನಿವೇಶದ ಹಿನ್ನೆಲೆ ಕಿಚ್ಚ ಸುದೀಪ್ ಅವರ ಜೊತೆಯಲ್ಲಿ ನಡೆಯಬೇಕಿದ್ದ ವಾರಾಂತ್ಯದ ಪಂಚಾಯ್ತಿ ಚಿತ್ರೀಕರಣ ನಡೆಯುತ್ತಿಲ್ಲ. ಹೀಗಾಗಿ ಈ ವಾರವೂ ಬಿಗ್ ಬಾಸ್ ವಾರಾಂತ್ಯದ ಸಂಚಿಕೆಗಳಲ್ಲಿ ಕಿಚ್ಚ ಸುದೀಪ್ ಅವರ ಉಪಸ್ಥಿತಿ ಇರುವುದಿಲ್ಲ ಎಂದು ತಿಳಿಸಿದೆ.

ಆರೋಗ್ಯ ಸಮಸ್ಯೆಯಿಂದ 2 ವಾರದ ವೀಕೆಂಡ್ ಎಪಿಸೋಡ್​ನಲ್ಲಿ ಕಾಣಿಸಿಕೊಳ್ಳದ ಕಿಚ್ಚ ಸುದೀಪ್ ಅವರು, ಇದೇ ವಾರ ವೀಕ್ಷಕರ ಎದುರು ಬರಲು ಮುಂದಾಗಿರುವುದಾಗಿ ಸ್ವತಃ ಸ್ಪಷ್ಟನೆ ನೀಡಿದ್ದರು. ಈ ಬಗ್ಗೆ ಟ್ವೀಟ್ ಮಾಡಿದ್ದ ಸುದೀಪ್, ಆರೋಗ್ಯ ಸುಧಾರಿಸಿದ್ದು, ಈ ವಾರ ಬಿಗ್ ಬಾಸ್ ಎಪಿಸೋಡಿನಲ್ಲಿ ಕಾಣಿಸಿಕೊಳ್ಳಲು ಕಾತುರರಾಗಿದ್ದೇನೆ ಎಂದು ಬರೆದುಕೊಂಡಿದ್ದರು. ಅಲ್ಲದೆ ನನ್ನ ಆರೋಗ್ಯಕ್ಕಾಗಿ ಪ್ರಾರ್ಥಿಸಿದ ಹಾಗೂ ಹಾರೈಸಿದ ಎಲ್ಲರಿಗೂ ಕೃತಜ್ಞನಾಗಿದ್ದೇನೆ ಎಂದಿದ್ದರು.

Related posts

ಉಜಿರೆ: ಕೋವಿಡ್ ಪರೀಕ್ಷೆ ಪ್ರಾರಂಭ, ಶೀಘ್ರದಲ್ಲಿ ವರದಿ ಲಭ್ಯ

Sushmitha Jain

ನಿಷ್ಠೆ ಮತ್ತು ಜ್ಞಾನದ ಜತೆಗೆ ರಾಷ್ಟ್ರ ನಿರ್ಮಾಣ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಗುರಿ

Upayuktha

ಐತಿಹಾಸಿಕ ಅಯೋಧ್ಯೆ ತೀರ್ಪು ಇಂದು ಪ್ರಕಟ: ದೇಶಾದ್ಯಂತ ಬಿಗಿ ಭದ್ರತೆ

Upayuktha