ಅಪಘಾತ- ದುರಂತ ರಾಜ್ಯ

ಮೀನು ಲಾರಿ ಮತ್ತು ಸ್ಕೂಟರ್ ಡಿಕ್ಕಿ ; ಓರ್ವ ಸಾವು

ಉಡುಪಿ: ಮಲ್ಪೆ ಬಂದರಿನಿಂದ ಮೀನು ಸಾಗಿಸುತ್ತಿದ್ದ ಲಾರಿಯೊಂದು ಸ್ಕೂಟರ್‌ಗೆ ಡಿಕ್ಕಿ ಹೊಡೆದಿದ್ದು ಅಪಘಾತದಲ್ಲಿ

  ಸವಾರ ಮೃತಪಟ್ಟಿರುವ ಘಟನೆ ಶನಿವಾರ ಬೆಳಗ್ಗೆ ನಡೆದಿದೆ.

ಮೃತರನ್ನು ಇಸಾಕ್ ಹೂಡೆ ಎಂದು ಗುರುತಿಸಲಾಗಿದೆ. ಮೀನು ಸಾಗಾಟದ ಇನ್ಸುಲೇಟರ್ ವಾಹನ ಬೆಳಗ್ಗಿನ ಜಾವ 4.30 ರ ಸುಮಾರಿಗೆ ಮಲ್ಪೆ ತೊಟ್ಟಂ ಸಮೀಪ ಹೂಡೆಯಿಂದ ಮಲ್ಪೆ ಕಡೆಗೆ ಹೋಗುತ್ತಿದ್ದ ಸ್ಕೂಟರ್‌ಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಈ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸವಾರನನ್ನು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಘಟನೆ ಬಗ್ಗೆ ಮಲ್ಪೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಬಜಪೆ ಸಮೀಪ ಎಕ್ಕಾರಿನಲ್ಲಿ ಚಲಿಸುತ್ತಿದ್ದ ಕಾರಿಗೆ ಬೆಂಕಿ, ಪ್ರಯಾಣಿಕರು ಪಾರು

Upayuktha

ರಾಮಚಂದ್ರಾಪುರ ಮಠದಲ್ಲಿ ತ್ಯಾಗ ಪರ್ವ: ಸಾವಿರ ಭಕ್ತರಿಂದ ಸರಳ ಜೀವನ ಪ್ರತಿಜ್ಞೆ

Upayuktha

ಪ್ರಕೃತಿದತ್ತ ಗಿಡಮೂಲಿಕೆಗಳಲ್ಲಿ ಮಾನವಕೋಶ ಪುನರುತ್ಥಾನ ಅಂಶಗಳು: ವಿಚಾರಸಂಕಿರಣ

Upayuktha