ರಾಜ್ಯ

ಸಂಸತ್ ಗ್ರಂಥಾಲಯಕ್ಕೆ ಉಡುಪಿಯ ಮಹಾಭಾರತ ಗ್ರಂಥ

ಹೊಸದಿಲ್ಲಿ: ನೂರು ವರ್ಷಗಳ ನಂತರ ದೇಶದಲ್ಲಿ ಪ್ರಕಟವಾಗಿರುವ ಮಹಾಭಾರತ ಕೃತಿಯ ಪರಿಷ್ಕೃತ ಆವೃತ್ತಿಯ (ಸಂಸ್ಕೃತ, 24 ಸಂಪುಟಗಳು) ಒಂದು ಪ್ರತಿಯನ್ನು ಭಾರತದ ಶಕ್ತಿ ಕೇಂದ್ರ ಸಂಸತ್ತಿನ ಗ್ರಂಥಾಲಯಕ್ಕಾಗಿ ಸಲ್ಲಿಸಲಾಗಿದೆ.

ಶ್ರೀ ಪಲಿಮಾರು ಮಠದ ತತ್ವ ಸಂಶೋಧನ ಸಂಸತ್‌ನ ವತಿಯಿಂದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ ನೇತೃತ್ವದಲ್ಲಿ ಪ್ರಕಟಗೊಂಡು ಶ್ರೀ ವಿಶ್ವೇಶತೀರ್ಥ ಶ್ರೀಪಾದರೂ ಸೇರಿದಂತೆ ಅನೇಕ‌ ಮಾಧ್ವ ಮಠಾಧೀಶರ ಉಪಸ್ಥಿತಿಯಲ್ಲಿ ಪಲಿಮಾರು ಪರ್ಯಾಯದ ಅವಧಿಯಲ್ಲಿ ಉಡುಪಿ ಕೃಷ್ಣ ಮಠದಲ್ಲಿ ವೈಭವದ ಸಮಾರಂಭದಲ್ಲಿ ಲೋಕಾರ್ಪಣೆಗೊಂಡಿತ್ತು.

ಮಂಗಳವಾರ ದೆಹಲಿಯಲ್ಲಿ ಕೇಂದ್ರ ಸಂಸದೀಯ ವ್ಯವಹಾರಗಳ ಮಂತ್ರಿ ಪ್ರಹ್ಲಾದ್ ಜೋಷಿಯವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಗ್ರಂಥ ಪ್ರತಿಯನ್ನು ಹಸ್ತಾಂತರಿಸಿದರು.

ವಾಸುದೇವ ಭಟ್ ಪೆರಂಪಳ್ಳಿ ಇದನ್ನು ಸಂಯೋಜಿಸಿದ್ದರು.

ಪೇಜಾವರ ಮಠದ ಪರವಾಗಿ ವಿಷ್ಣುಮೂರ್ತಿ ಆಚಾರ್ಯ ಅನಂತ ಜಿಎ. ಕೃಷ್ಣ ಭಟ್, ಪೇಜಾವರ ಮಠದ ದೆಹಲಿ ಶಾಖೆಯ ವ್ಯವಸ್ಥಾಪಕ ದೇವೀಪ್ರಸಾದ್ ಭಟ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಶ್ರೀಗಳು ಸಚಿವರೊಂದಿಗೆ ಅನೇಕ ವಿಷಯಗಳ ಚರ್ಚೆ ನಡೆಸಿದರು.

ಸಚಿವರು ಶ್ರೀಗಳನ್ನು ಆದರದಿಂದ ಬರಮಾಡಿಕೊಂಡು ಭಕ್ತಿ ಗೌರವ ಅರ್ಪಿಸಿದರು. ಶ್ರೀಗಳೂ ಸಚಿವರಿಗೆ ಶಾಲು, ಫಲ, ಶ್ರೀಕೃಷ್ಣ ಪ್ರಸಾದ, ಮಂತ್ರಾಕ್ಷತೆ ನೀಡಿ ಅಭಿನಂದಿಸಿದರು.

ತುಳು ಲಿಪಿಯೂ ಸಂಸತ್ ಗ್ರಂಥಾಲಯಕ್ಕೆ…!

ಈ ಮಹಾಭಾರತ ಗ್ರಂಥಕ್ಕೆ ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ತುಳು ಹಸ್ತಾಕ್ಷರವನ್ನೂ ಹಾಕಿರುವುದರಿಂದ ಸಂಸತ್ ಗ್ರಂಥಾಲಯಕ್ಕೆ ತುಳು ಲಿಪಿಗೂ ಪ್ರವೇಶ ದೊರೆತಂತಾಗಿದೆ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ನ.26: ಹೊಂಬುಜ ಜೈನ ಮಠದಲ್ಲಿ ಶ್ರೀ ಪದ್ಮಾವತಿ ದೇವಿ ಮಹಾತ್ಮೆ ಕೃತಿ ಬಿಡುಗಡೆ, ಯಕ್ಷಗಾನ ನಾಟ್ಯ ವೈಭವ

Upayuktha

ಬೆಂಗಳೂರು : ಎನ್ ಬೇಗೂರು ಪ್ರದೇಶದಲ್ಲಿ ಮತ್ತೊಂದು ಚಿರತೆ ; ಅಧಿಕಾರಿಗಳಲ್ಲಿ ಆತಂಕ

Harshitha Harish

ಬೆಂಗಳೂರು ; ವಿಶ್ವ ವಿದ್ಯಾಲಯದ ನಿವೃತ್ತ ಪ್ರೊಫೆಸರ್ ನೇಣು ಬಿಗಿದು ಆತ್ಮಹತ್ಯೆ

Harshitha Harish