ನಗರ ಸ್ಥಳೀಯ

ಹೊಸಬೆಳಕು ಆಶ್ರಮಕ್ಕೆ ನಾಗರಿಕ ಸಮಿತಿಯಿಂದ, ದಾನಿಗಳ ಮೂಲಕ ತುರ್ತು ನೆರವು

ಉಡುಪಿ: ಕೊರೊನಾ ಲಾಕ್ ಡೌನ್ ತುರ್ತು ಪರಿಸ್ಥಿತಿಯ ಬಿಸಿಯು, ಅನಾಥಶ್ರಮಗಳಿಗೂ ಬಹಳವಾಗಿ ತಟ್ಟಿದೆ. ಮಾನವೀಯ ನೆಲೆಯಲ್ಲಿ ಖಾಸಗಿಯವರಿಂದ ನಡೆಸಲ್ಪಡುವ ಅನಾಥಾಶ್ರಮಗಳಲ್ಲಿ ಆಶ್ರಯ ಪಡೆದಿರುವ ಅಸಹಾಯಕರಿಗೆ ಊಟೋಪಚಾರ ನಡೆಸಲು ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿವೆ. ಕೊರೊನಾ ಭೀತಿ, ಮತ್ತು ಲಾಕ್ ಡೌನ್ ಜಾರಿಯಲ್ಲಿ ಇರುವುದರಿಂದ ದಾನಿಗಳ ಆಶ್ರಮ ಸಂದರ್ಶನವು ಕಡಿಮೆಯಾಗಿರುವುದು ಹಾಗೂ ದಾನಿಗಳಿಗೂ ಎದುರಾಗಿರುವ ಪರಿಸ್ಥಿತಿಯಿಂದ, ಆರ್ಥಿಕ ಅಡಚಣೆಗಳು ಎದುರಾಗಿರುವುದು, ಸಮಸ್ಯೆಗೆ ಕಾರಣವೆಂದು ತಿಳಿದುಬಂದಿದೆ.

ಉದ್ಬವವಾಗಿರುವ ಸಮಸ್ಯೆ ಅರಿತು, ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಅವರು, ಮಣಿಪಾಲದಲ್ಲಿ ಅಸಹಾಯಕರ ಸೇವಾ ಕೈಂಕರ್ಯದಲ್ಲಿ ನಿರತವಾಗಿರುವ ಹೊಸ ಬೆಳಕು ಆಶ್ರಮಕ್ಕೆ ದಾನಿಗಳ ಸಹಕಾರದಿಂದ ತುರ್ತು ನೆರವನ್ನು ಸೋಮವಾರ ಒದಗಿಸಿದರು.

ಆದಿ ಉಡುಪಿಯ ಜೋತ್ಸ್ನಾ ಅಮೀನ್ ಅವರು, ಒಂದು ತಿಂಗಳಿಗೆ ಬೇಕಾಗುವಷ್ಟು ನಿತ್ಯ ಬಳಕೆಯ ಪಡಿತರ ಸಾಮಾಗ್ರಿ, ಹಾಗೂ ಆಶ್ರಮದ ಗೋಶಾಲೆಯ ಗೋವುಗಳಿಗಾಗಿ ಹಿಂಡಿಯನ್ನು ನೀಡಿದರು. ಮತ್ತು ಸುಶೀಲಾ ರಾವ್ ಉಡುಪಿ ಅವರು, 5 ಸಾವಿರ ದೇಣಿಗೆ ನೀಡಿದರು. ಆಶ್ರಮ ಸಂಚಾಲಕ ವಿನಯಚಂದ್ರ ಸಾಸ್ತಾನ ಅವರು, ದೇಣಿಗೆಗಳನ್ನು ಸ್ವೀಕರಿಸಿದರು.

 

 

 

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Related posts

ಜನಗಣತಿ 2021: ಕ್ಷೇತ್ರ ತರಬೇತುದಾರರ ತರಬೇತಿ

Upayuktha

ಗೃಹರಕ್ಷಕದಳ ಸುರತ್ಕಲ್ ಘಟಕದಲ್ಲಿ ವನಮಹೋತ್ಸವ, ಸ್ಯಾನಿಟೈಸರ್ ಮತ್ತು ಔಷಧಿ ವಿತರಣೆ

Upayuktha

ಅಂಗನವಾಡಿಗಳಿಗೆ ಆಹಾರ ಸಾಗಾಣಿಕೆ: ಟೆಂಡರ್ ಆಹ್ವಾನ

Upayuktha