ಜಿಲ್ಲಾ ಸುದ್ದಿಗಳು

ಉಡುಪಿ: ಸ್ವಚ್ಛಾಂಗಣ ಶೌಚಾಲಯ ಯಾತ್ರಿಕರ ಬಳಕೆಗೆ ಒದಗಿಸುವಂತೆ ನಾಗರಿಕ ಸಮಿತಿ ಆಗ್ರಹ

ಉಡುಪಿ: ಶ್ರೀಕೃಷ್ಣ ಮಠದ ರಾಜಾಂಗಣ ಯಾತ್ರಿಕರ ವಾಹನ ನಿಲುಗಡೆ ಸ್ಥಳದಲ್ಲಿ, ಯಾತ್ರಿಕರ ಅನುಕೂಲಕ್ಕಾಗಿ, ದಾನಿಗಳು ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ, ಸ್ವಚ್ಛಾಂಗಣ ಶೌಚಾಲಯವು ಸೇವೆ ನಿರ್ವಹಿಸದೆ ಬೀಗ ಜಡಿದುಕೊಂಡಿದೆ.

ಯಾತ್ರಿಕರು, ಭಕ್ತಾದಿಗಳು ಮಲ ಮೂತ್ರ ವಿಸರ್ಜನೆಗೆ, ತೋಡು, ಪೊದೆ, ವಾಹನ ನಿಲುಗಡೆ ಸ್ಥಳದಲ್ಲಿ ನಿಲುಗಡೆಗೊಳಿಸಿರುವ, ವಾಹನದ ಮರೆಯನ್ನು ಆಶ್ರಯಿಸಬೇಕಾದ ಪರಿಸ್ಥಿತಿ ಎದುರಾಗಿದೆ.

ಬಯಲು ಶೌಚಾಲಯದ ಪರಿಣಾಮ ರಾಜಾಂಗಣ ಪರಿಸರವು ಸ್ವಚ್ಚಾಂಗಣ ಆಗುವುದರ ಬದಲು, ಮಲಿನಾಂಗಣ ಆಗುತ್ತಿರುವುದು ಕಂಡುಬಂದಿದೆ. ಭಕ್ತರು ಯಾತ್ರಿಕರು, ಮಹಿಳೆಯರು ಎದುರಾಗಿರುವ ಪರಿಸ್ಥಿತಿಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್, ಯಡಿಯೂರಪ್ಪ ಅವರಿಂದ ಉದ್ಘಾಟನೆಗೊಂಡಿರುವ, ಶುಲ್ಕ ಪಾವತಿಸಿ ಬಳಸುವ ಮೂತ್ರಾಲಯ, ಸ್ನಾನಗ್ರಹ ಒಳಗೊಂಡಿರುವ ಬ್ರಹತ್ ಶೌಚಾಲಯ ಇದಾಗಿದೆ. ಇಲ್ಲಿ ಎದುರಾಗಿರುವ ಪರಿಸ್ಥಿತಿಯಿಂದ ಹೊರಜಿಲ್ಲೆ ಹೊರರಾಜ್ಯದ ಯಾತ್ರಿಕರು ಸಂಕಷ್ಟ ಎದುರುಸುತ್ತಿದ್ದಾರೆ.

ಜಿಲ್ಲಾಡಳಿತವು ಸ್ವಚ್ಚಾಂಗಣ ಶೌಚಾಲಯದ ಬೀಗ ತೆರವುಗೊಳಿಸಿ ಯಾತ್ರಿಕರ, ಸಾರ್ವಜನಿಕರ ಬಳಕೆಗೆ ಒದಗಿಸಬೇಕೆಂದು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಅವರು ಆಗ್ರಹಿಸಿದ್ದಾರೆ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ಉಪಯುಕ್ತ ನ್ಯೂಸ್ ಸಿಗ್ನಲ್‌ ಗ್ರೂಪಿಗೆ ಜಾಯಿನ್ ಆಗಲು ಈ ಲಿಂಕ್‌ ಬಳಸಿ

Related posts

ದಕ ಜಿಲ್ಲಾ ಸಾಹಿತ್ಯ ಸಮ್ಮೇಳನ: ‘ಆರೋಗ್ಯಕರ ಸಮಾಜ-ಸಾಸ್ಥ್ಯ ಚಿಂತನೆ’ ವಿಚಾರಗೋಷ್ಠಿ

Upayuktha

ಕೆರೆ ಕಾಮೇಗೌಡ್ರ ಆರೋಗ್ಯ ಸ್ಥಿತಿ ಗಂಭೀರ: ಎಚ್ ಡಿ ಕುಮಾರಸ್ವಾಮಿ ಟ್ವೀಟ್

Harshitha Harish

ಕರಾವಳಿಯಲ್ಲಿ ಭಾರಿ ಮಳೆಯಾಗುವ ಸಂಭವ

Harshitha Harish