ಕ್ಯಾಂಪಸ್ ಸುದ್ದಿ ಗ್ರಾಮಾಂತರ ಪ್ರಮುಖ ಸ್ಥಳೀಯ

ಕರ್ತವ್ಯದಲ್ಲಿ ಒತ್ತಡಗಳನ್ನು ಯಶಸ್ವಿಯಾಗಿ ನಿಭಾಯಿಸಲು ತಾಳ್ಮೆ ಮತ್ತು ಒಂದಿಷ್ಟು ಹಾಸ್ಯ ಪ್ರಜ್ಞೆ ಅಗತ್ಯ: ಬಿ. ರಾಜೇಂದ್ರ ಇಂದ್ರ

ಉಜಿರೆ: ವೃತ್ತಿ ಜೀವನದಲ್ಲಿ ಹಲವು ಏಳುಬೀಳುಗಳು ಸಹಜ. ಆದರೆ ಇಲ್ಲಿ ಸಿಗುವ ಅನುಭವದ ಪಾಠ ನಮ್ಮ ಜೀವನದ ಮುಂದಿನ ದಿನಗಳಿಗೆ ಉತ್ತಮ ತಳಹದಿಯನ್ನು ನಿರ್ಮಿಸುತ್ತದೆ ಎಂದು ಉಜಿರೆ ಶ್ರೀ ಧ.ಮಂ. ಕಾಲೇಜಿನ ಪ್ರಾಂಶುಪಾಲ ಡಾ. ಸತೀಶ್ಚಂದ್ರ ಹೇಳಿದರು.

ಅವರು ಶ್ರೀ ಧ.ಮಂ. ಕಾಲೇಜಿನ ಶಿಕ್ಷಕೇತರ ಸಂಘದ ವತಿಯಿಂದ ನಡೆದ ಕಾಲೇಜಿನ ಕಚೇರಿ ಅಧೀಕ್ಷಕರಾಗಿ 32 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಬಿ.ರಾಜೇಂದ್ರ ಇಂದ್ರ ರವರಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.

ಗೌರವ ಸ್ವೀಕರಿಸಿ ಮಾತನಾಡಿದ ಬಿ. ರಾಜೇಂದ್ರ ಇಂದ್ರರವರು , ಸಂಸ್ಥೆಯ ಎಲ್ಲಾ ಸಿಬ್ಬಂದಿಗಳ ಸಹಕಾರದಿಂದ ಕೆಲಸ ನಿರ್ವಹಿಸುವ ದಿನಗಳಲ್ಲಿ ಯಾವುದೇ ರೀತಿಯ ಕಠಿಣ ಸಮಯ ಎದುರಾಗಿಲ್ಲ. ನಂಬಿಕೆ ಉಳಿಸಿಕೊಂಡು ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳಿಗೆ ಎಂದಿಗೂ ತೊಂದರೆ ಎದುರಾಗದು. ಕರ್ತವ್ಯದಲ್ಲಿ ಒತ್ತಡಗಳನ್ನು ಯಶಸ್ವಿಯಾಗಿ ನಿಭಾಯಿಸಲು ತಾಳ್ಮೆ ಮತ್ತು ಒಂದಿಷ್ಟು ಹಾಸ್ಯ ಪ್ರಜ್ಞೆ ಅಗತ್ಯ ಎಂದರು.

ಕಚೇರಿ ಅಧೀಕ್ಷಕ ಯುವರಾಜ ಪೂವಣಿ, ರಾಜೇಶ್ವರಿ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಿಬ್ಬಂದಿ ತುಕಾರಾಮ್ ಸಾಲಿಯಾನ್ ಸ್ವಾಗತಿಸಿ, ಸದಾನಂದ ಬಿ ವಂದಿಸಿದರು. ಲಿಡಿಯಾ ರೊಡ್ರಿಗಸ್ ಕಾರ್ಯಕ್ರಮ ನಿರ್ವಹಿಸಿದರು.
ಈ ಸಂದರ್ಭದಲ್ಲಿ ರಾಜೇಂದ್ರ ಇಂದ್ರ ಕುರಿತು ಕಾಲೇಜು ವತಿಯಿಂದ ನಿರ್ಮಿಸಲಾದ ‘ರಾಜಾಭಿನಂದನ’ ಸಾಕ್ಷ್ಯಚಿತ್ರ ಪ್ರದರ್ಶನಗೊಂಡಿತು.

Related posts

ವಿವೇಕಾನಂದ ಕಾಲೇಜಿನ ಸಂಸ್ಕತ ವಿಭಾಗದಿಂದ ‘ಪ್ರತಿಭೋತಃ’ ಕಾರ್ಯಕ್ರಮ

Upayuktha

ಇಂದು ವಿಶ್ವ ರೇಡಿಯೋ ದಿನ: ಹವ್ಯಾಸಿ ರೇಡಿಯೋ ಬಳಗದ ಝೇಂಕಾರ

Upayuktha

ಉಜಿರೆ ಅಂತರಾಷ್ಟ್ರೀಯ ಸಮ್ಮೇಳನಕ್ಕೆ ವೇದಿಕೆ ಸಜ್ಜು

Upayuktha