ಗ್ರಾಮಾಂತರ ಧರ್ಮ-ಅಧ್ಯಾತ್ಮ ಸ್ಥಳೀಯ

ವಿನಾಯಕ ನಗರದ ಶ್ರೀ ಸಿದ್ಧಿ ವಿನಾಯಕ ಪ್ರತಿಷ್ಠಾ ಮಹೋತ್ಸವ: ನೂತನ ಹಸಿರುವಾಣಿ ಉಗ್ರಾಣ ಉದ್ಘಾಟನೆ

ಉಜಿರೆ: ವಿನಾಯಕ ನಗರದ ಶ್ರೀ ಸಿದ್ಧಿ ವಿನಾಯಕ ಪ್ರತಿಷ್ಠಾ ಮಹೋತ್ಸವ ಇದೇ ಫೆ.13ರಿಂದ ಪ್ರಾರಂಭವಾಗಿದ್ದು, ವೇ.ಮೂ| ಹಿಜಂಕೂರಿ ಶ್ರೀಪತಿ ಯಳಚಿತ್ತಾಯ ನೇತೃತ್ವದಲ್ಲಿ  15ರ ವರೆಗೆ ನಡೆಯಲ್ಲಿದೆ.

ಈ ಹಿನ್ನಲೆಯಲ್ಲಿ  ನೂತನ ಹಸಿರುವಾಣಿ ಉಗ್ರಾಣ ಮತ್ತು ಪ್ರತಿಷ್ಠಾ ಮಹೋತ್ಸವದ ಕಾರ್ಯಾಲಯವನ್ನು ನಿರ್ಮಿಸಿದ್ದು, ಇದರ ಉದ್ಘಾಟನಾ ಕಾರ್ಯಕ್ರಮ ಫೆ.13ರಂದು ನಡೆಯಿತು.

ಉಜಿರೆಯ ಹಿರಿಯ ಉದ್ಯಮಿ ಸುಬ್ರಾಯ ಶೆಣೈ ಮತ್ತು ಯು  ರಮೇಶ್ ಪ್ರಭು ಕಾರ್ಯಾಲಯವನ್ನು ಉದ್ಘಾಟಿಸಿದರು. ಈ ವೇಳೆ ಪುನ: ಪ್ರತಿಷ್ಠಾ ಮಹೋತ್ಸವ ಸಮಿತಿಯ ಅಧ್ಯಕ್ಷ ಶರತ್ ಕೃಷ್ಣ ಪಡ್ವೆಟ್ನಾಯ, ಕಾರ್ಯಾಧ್ಯಕ್ಷ ವಿಶ್ವನಾಥ ನೇಕಾರ ಕಕ್ಕರಬೆಟ್ಟು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಕೆ. ಬಾಲಕೃಷ್ಣ ಗೌಡ, ಕಾರ್ಯಾಧ್ಯಕ್ಷ ರಾಜಪ್ಪ ನೇಕಾರ, ಕೋಶಾಧಿಕಾರಿ ರಾಮದಾಸ್ ಭಂಡಾರ್ಕಾರ್, ಪ್ರಧಾನ ಕಾರ್ಯದರ್ಶಿ ಹರೀಶ್ ನೇಕಾರ ಪ್ರತಿಷ್ಠಾ ಮಹೋತ್ಸವ ಸಮಿತಿಯ ಕಾರ್ಯದರ್ಶಿಯ ಸಂತೋಷ್ ಕುಮಾರ್, ಕೋಶಾಧಿಕಾರಿ ಹರಿಪ್ರಸಾದ್ ನೇಕಾರ, ಜಯಂತ್ ಶೆಟ್ಟಿ ಕುಂಠಿನಿ ಸಮಿತಿಯ ಪದಾಧಿಕಾರಿಗಳು ಸದಸ್ಯರು, ಭಕ್ತಾಧಿಗಳು ಉಪಸ್ಥಿತರಿದ್ದರು.

Related posts

ಎಚ್.ಭೀಮರಾವ್ ವಾಷ್ಠರ್ ಅವರಿಗೆ ಸಾಹಿತ್ಯ ಸಂಘಟನಾ ರಾಜ್ಯ ಪ್ರಶಸ್ತಿ

Harshitha Harish

ಸುರಕ್ಷಾ ದಂತ ಚಿಕಿತ್ಸಾಲಯದಲ್ಲಿ ವನಮಹೋತ್ಸವ

Upayuktha

ರೇಷ್ಮಾ ಉದಯಕುಮಾರ್ ಅವರ ಸಂಶೋಧನಾ ಪ್ರಬಂಧಕ್ಕೆ ಬೆಸ್ಟ್ ಪೇಪರ್ ಪ್ರಶಸ್ತಿ

Upayuktha