ಕ್ಯಾಂಪಸ್ ಸುದ್ದಿ ಗ್ರಾಮಾಂತರ ಪ್ರಮುಖ ಶಿಕ್ಷಣ ಸ್ಥಳೀಯ

ಗ್ರಾಮಸ್ಥರಲ್ಲಿ ಅರಿವು ಮೂಡಿಸುವ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ಸ್ವೀಕರಿಸುವಂತೆ ಪ್ರೇರೇಪಿಸಿ: ಗ್ರಾ. ಪಂ.ಅಧ್ಯಕ್ಷೆ  ಆಶಾಲತಾ

ಬೆಳ್ತಂಗಡಿ: ಉಜಿರೆ ಶ್ರೀ.ಧ.ಮಂ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ವತಿಯಿಂದ ಕುವೆಟ್ಟು ಗ್ರಾ.ಪಂ.ನ ಸಹಭಾಗಿತ್ವದಲ್ಲಿ ಕುವೆಟ್ಟು ಗ್ರಾಮದಲ್ಲಿ ಗ್ರಾಮ ಸ್ವರಾಜ್ ಕಾರ್ಯಕ್ರಮ ನಡೆಯಿತು.

ಕುವೆಟ್ಟು ಗ್ರಾ. ಪಂ.ಅಧ್ಯಕ್ಷೆ  ಆಶಾಲತಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು, ಗ್ರಾಮದ್ಯಾಂತ ಈಗಾಗಲೇ ಕೋವಿಡ್ ಲಸಿಕೆ ವಿತರಣೆ ಕಾರ್ಯಕ್ರಮ ಪ್ರಾರಂಭವಾಗಿದ್ದು, ಗ್ರಾಮಸ್ಥರಲ್ಲಿ ಅರಿವು ಮೂಡಿಸುವ ಮೂಲಕ ಅತೀ ಹೆಚ್ಚು ಗ್ರಾಮಸ್ಥರು ಲಸಿಕೆ ಸ್ವೀಕರಿಸಲು ಪ್ರೇರೇಪಿತರಾಗಲಿ. ಯಾವುದೇ ಭಯವಿಲ್ಲದೆ ವ್ಯಾಕ್ಸಿನ್ ತೆಗೆದುಕೊಳ್ಳಬಹುದಾಗಿದ್ದು,  ಇದಲ್ಲದೆ ಸರಕಾರದ ಪ್ರತಿಯೊಂದು ಸೌಲಭ್ಯಗಳು ಎಲ್ಲರಿಗೂ ಸಿಗಲಿ ಎಂದು ಹೇಳಿದರು.

ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಶಲೀಪ್ ಕುಮಾರಿ ಮಾತನಾಡಿ “ಪ್ರತಿ ವರ್ಷದಂತೆ ಈ ವರ್ಷವೂ ನಮ್ಮ ವಿಭಾಗದಿಂದ ಗ್ರಾಮ ಸ್ವರಾಜ್ ಮತ್ತು ಮನೆ ಮನೆ ಭೇಟಿ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಗ್ರಾಮಸ್ಥರಿಗೆ ಕೋವಿಡ್ ಲಸಿಕೆ, ಕಸ ವಿಲೇವಾರಿ ಮತ್ತು ಜನರ ಜವಾಬ್ದಾರಿಗಳ ಬಗ್ಗೆ ಅರಿವು ಮೂಡಿಸುವುದು ಇದರ ಮುಖ್ಯ ಉದ್ದೇಶವಾಗಿದೆ”. ಜೊತೆಗೆ ಈ ಹವ್ಯಾಸ ವಿದ್ಯಾರ್ಥಿಗಳ ಬೆಳವಣಿಗೆಗೆ ಸಹ ಅತ್ಯಂತ ಪೂರಕವಾಗಲಿದೆ ಎಂದರು.

ಗ್ರಾ. ಪಂ. ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್ ಅವರು ರಾಜ್ಯಶಾಸ್ತ್ರ ವಿಭಾಗದಿಂದ ಮನೆ ಮನೆ ಭೇಟಿ ಕೊಡಲ್ಪಡುವ ಕರಪತ್ರ ಬಿಡುಗಡೆ ಮಾಡಿದರು. ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ನಟರಾಜ್, ಲಕ್ಷ್ಮಿಕಾಂತ್, ಕುವೆಟ್ಟು ಗ್ರಾ. ಪಂ. ಉಪಾಧ್ಯಕ್ಷ ಪ್ರದೀಪ್ ಶೆಟ್ಟಿ, ಗ್ರಾ. ಪಂ. ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್ ಉಪಸ್ಥಿತರಿದ್ದರು. ಸಂಜನ್ ಸ್ವಾಗತಿಸಿ, ಶಕುಂತಲಾ ವಂದಿಸಿದರು, ರೇಖಾ ನಿರ್ವಹಿಸಿದರು.

ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳನ್ನು 8 ತಂಡಗಳಾಗಿ ವಿಂಗಡಿಸಿ ಗ್ರಾಮದ 300 ಮನೆಗಳಿಗೆ ಭೇಟಿ ನೀಡಿ ಕೋವಿಡ್ ಲಸಿಕೆಯನ್ನು ಯಾವುದೇ ಭಯವಿಲ್ಲದೆ ತೆಗೆದುಕೊಳ್ಳುವಂತೆ ಪ್ರೇರೇಪಣೆ, ಸ್ವಚ್ಛತೆ, ಮತ ಚಲಾವಣೆ, ಮಿತವಾದ ನೀರಿನ ಬಳಕೆ, ಕೋವಿಡ್19 ಮುನ್ನೆಚ್ಚರಿಕೆ, ಗ್ರಾಮಸಭೆಗೆ ಕಡ್ಡಾಯ ಹಾಜರು. ಮೂಲ ಹಕ್ಕುಗಳು ಕರ್ತವ್ಯಗಳ ಕುರಿತು ಮಾಹಿತಿ ನೀಡಿದರು.

Related posts

ಫೆ. 20ರಂದು ಫಿಲೋಮಿನಾದಲ್ಲಿ ಇಕನಾಮಿಕ್ಸ್ ಫೆಸ್ಟ್ ‘ಇಕೊಕ್ಸೆನಿತ್-2020’

Upayuktha

ಧರ್ಮಸ್ಥಳದಲ್ಲಿ 2 ಕಿ.ಮೀ. ವ್ಯಾಪ್ತಿಯಲ್ಲಿ ಹೊಸದಾಗಿ ಖಾಸಗಿ ಹೋಟೆಲ್, ವಸತಿಗೃಹ ಆರಂಭಿಸದಂತೆ ಆಗ್ರಹ

Upayuktha

ಡಿಎಲ್‌ಗೆ ಮುನ್ನ ರಸ್ತೆ ಸುರಕ್ಷತೆ ಬಗ್ಗೆ ತರಬೇತಿ ನೀಡಿ: ಉಡುಪಿ ಡಿಸಿ ಜಿ.ಜಗದೀಶ್

Upayuktha