ಕ್ಯಾಂಪಸ್ ಸುದ್ದಿ ಗ್ರಾಮಾಂತರ ಯೂತ್ ಶಿಕ್ಷಣ ಸ್ಥಳೀಯ

ಮಹಿಳಾ ದಿನಾಚರಣೆ ವಿಶೇಷ: ಸ್ತನ ಕ್ಯಾನ್ಸರ್ ಬಗ್ಗೆ ಅರಿವು ಮಾಹಿತಿ ಕಾರ್ಯಗಾರ

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (ಸ್ವಾಯತ್ತ), ಸ್ನಾತಕೋತ್ತರ ಕೇಂದ್ರದ ಸಮಾಜಕಾರ್ಯ ವಿಭಾಗ ಹಾಗೂ ಗ್ರಾಮ ಪಂಚಾಯತ್ ಕಲ್ಮಂಜ ಇವರ ಸಹಯೋಗದಲ್ಲಿ “ಮಹಿಳಾ ದಿನಾಚರಣೆ-ಸ್ತನ ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸುವಿಕೆ ಮತ್ತು ಮಾಹಿತಿ ಕಾರ್ಯಕ್ರಮ” ನಡೆಯಿತು.

ಮಾ.4ರಂದು ಕಲ್ಮಂಜ ಸಭಾ ಗ್ರಾಮ ಪಂಚಾಯತ್ ಸಭಾ ಭವನದಲ್ಲಿ ಆಯೋಜಿಸಿದ್ದ ಈ ಮಾಹಿತಿ ಕಾರ್ಯಗಾರವನ್ನು ಕಲ್ಮಂಜ ಗ್ರಾ. ಪಂಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀ ಇಮ್ಮಿಯಾಜ್ ಕೆ ಉದ್ಘಾಟಿಸಿದರು.

ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಮ್ಯೂನಿಟಿ ಮೆಡಿಸಿನ್ ವಿಭಾಗದ ಡಾ. ಅನನ್ಯ ಲಕ್ಷ್ಮಿ ಎಂಬಿಬಿಎಸ್, ಎಂ.ಡಿ ಸ್ತನ ಕ್ಯಾನ್ಸರ್ ಕುರಿತು ವಿಚಾರ ವಿನಿಮಯ ಮಾಡಿಕೊಳ್ಳುವುದರೊಂದಿಗೆ ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸಿದ್ದರು.

ಮುಖ್ಯ ಅತಿಥಿಗಳಾಗಿ ಕಲ್ಮಂಜ ಗ್ರಾ. ಪಂ ಅಧ್ಯಕ್ಷ ಎಂ ಶ್ರೀಧರ, ಗ್ರಾ. ಪಂ ಉಪಾಧ್ಯಕ್ಷೆ ಶ್ರೀಮತಿ ವಿಮಲಾ, , ಶ್ರೀ ಧ.ಮ. ಸ್ನಾತಕೋತ್ತರ ಕೇಂದ್ರದ ಸಮಾಜ ಕಾರ್ಯ ವಿಭಾಗ ಮುಖ್ಯಸ್ಥರು ರವಿಶಂಕರ್ ಕೆ ಆರ್, ಸಹ ಪ್ರಾಧ್ಯಾಪಕಿ ಶ್ರೀಮತಿ ಸ್ವಾತಿ ಬಿ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಶ್ರೀದೇವಿ ನಿರ್ವಹಿಸಿದರು, ಕೃಪಾಲಿ ಸ್ವಾಗತಿಸಿ, ಶ್ವೇತನ್ ವಂದಿಸಿದರು.

Related posts

ಫೆ.18: ಉಜಿರೆಯ ಎಸ್‌ಡಿಎಂ ಸ್ನಾತಕೋತ್ತರ ಕಾಲೇಜಿನಲ್ಲಿ ಭಾಷಾಂತರ ಕಮ್ಮಟ

Upayuktha

ನಿಷೇಧಾಜ್ಞೆ ಉಲ್ಲಂಘಿಸಿ ರಸ್ತೆಗಿಳಿದರೆ ಕಠಿಣ ಕ್ರಮ: ಸಿಟಿ ಪೊಲೀಸ್ ಕಮಿಷನರ್ ಖಡಕ್ ವಾರ್ನಿಂಗ್

Upayuktha

ರಾಷ್ಟ್ರೀಯ ವಿಚಕ್ಷಣಾ ಸಪ್ತಾಹ: ಅಂಚೆ ಇಲಾಖೆಯಿಂದ ಜಾಗೃತಿ ಕರಪತ್ರ ಬಿಡುಗಡೆ

Upayuktha