ಉಳ್ಳಾಲ: ಹಳೆ ವೈಷಮ್ಯಕ್ಕೆ ಸಂಬಂಧ ಪಟ್ಟಂತೆ ಯುವಕನ ಮೇಲೆ ತಂಡವೊಂದು ಹಲ್ಲೆ ನಡೆಸಿದ ಘಟನೆ ಯೊಂದು ಉಳ್ಳಾಲ ಠಾಣಾ ವ್ಯಾಪ್ತಿಯ ಕೆ.ಸಿರೋಡ್ ಬಳಿ ಶುಕ್ರವಾರ ರಾತ್ರಿ ನಡೆದಿದೆ.
ಮೂಲತ: ಪುತ್ತೂರು ನಿವಾಸಿ , ಸದ್ಯ ತಲಪಾಡಿಯಲ್ಲಿ ಇರುವ ಶಿವರಾಮ (38) ಹಲ್ಲೆಗೊಳಗಾದವರು.
ಕೆ.ಸಿರೋಡ್ ಬಳಿ ನಡೆಯುತ್ತಿದ್ದ ದೈವಸ್ಥಾನದ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದ ಸಂದರ್ಭ ಕುಂಜತ್ತೂರು ನಿವಾಸಿ ಆದಿ ಮತ್ತು ಐವರ ತಂಡ ಸ್ಥಳಕ್ಕಾಗಮಿಸಿ ಶಿವರಾಮನಿಗೆ ಹಲ್ಲೆ ನಡೆಸಿದ್ದಾರೆ.
ಕುಂಜತ್ತೂರು ಕ್ಲಬ್ ವಿಚಾರಕ್ಕೆ ಸಂಬಂಧಿಸಿದಂತೆ ಶಿವರಾಮ ಮತ್ತು ಕುಂಜತ್ತೂರು ನಿವಾಸಿ ಯುವಕರಿಗೆ ವೈಷಮ್ಯ ಇತ್ತು ಎನ್ನಲಾಗಿದೆ.
ಈ ಕಾರಣದಿಂದ ಹಲ್ಲೆ ನಡೆದಿದೆ. ಶಿವರಾಮ ಹಿಂದೆ ಬಸ್ ನಲ್ಲಿ ನಿರ್ವಾಹಕನಾಗಿದ್ದು, ಇದೀಗ ಮರೋಳಿ ಬಾರ್ ನಲ್ಲಿ ಕಾರ್ಮಿಕನಾಗಿದ್ದಾನೆ.
ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.