ದೇಶ-ವಿದೇಶ

ಬಿಹಾರದಲ್ಲಿ ಬಿಜೆಪಿ ಮುಖಂಡನ ಮೇಲೆ ಅಪರಿಚಿತ ದುಷ್ಕರ್ಮಿಗಳ ಗುಂಡಿನ ದಾಳಿ, ಗಂಭೀರ ಗಾಯ

ಪಾಟ್ನಾ: ಬಿಹಾರದ ಮುಂಗರ್ ಜಿಲ್ಲೆಯಲ್ಲಿ ಭಾರತೀಯ ಜನತಾ ಪಕ್ಷದ ಮುಖಂಡನನ್ನು ಅಪರಿಚಿತ ದುಷ್ಕರ್ಮಿಗಳು  ಗುಂಡು ಹಾರಿಸಿ ಗಂಭೀರ ಗಾಯಗೊಳಿಸಿದ್ದಾರೆ ಎಂದು ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಜಮಾಲ್ಪುರ್ ಕಾಲೇಜಿನ ಬಳಿ ನಡೆದ ದಾಳಿಯಲ್ಲಿ ಬಿಹಾರ ಬಿಜೆಪಿ ವಕ್ತಾರ ಅಜಫರ್ ಶಮ್ಸಿ ಗಂಭೀರ ಗಾಯಗೊಂಡಿದ್ದು ತಕ್ಷಣವೇ ವಾಹನ ಚಾಲಕ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಸದರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ.

ಈ ಬಗ್ಗೆ ಮಾಹಿತಿ ಪಡೆದ ಎಸ್ಪಿ ಮಾನವಜಿತ್ ಸಿಂಗ್ ಆಸ್ಪತ್ರೆಗೆ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.

ತನಿಖಾಧಿಕಾರಿಗಳ ಪ್ರಕಾರ  ಶಮ್ಸಿ  ಮೇಲಿನ ದಾಳಿಯಲ್ಲಿ ಮೂರು ಜನ ಭಾಗಿಗಳಾಗಿದ್ದಾರೆ.

“ಪ್ರಸ್ತುತ ಚಿಕಿತ್ಸೆ ಪಡೆಯುತ್ತಿರುವ ಶಮ್ಸಿ ಅವರ ಹೇಳಿಕೆಯನ್ನು ದಾಖಲಿಸಲಾಗಿದೆ, ನಾವು ಬಂಧಿಸಿರುವ ಕಾಲೇಜಿನ ಇನ್ನೊಬ್ಬ ಪ್ರಾಧ್ಯಾಪಕರೊಂದಿಗೆ ಅವರು ಮನಸ್ತಾಪ ಹೊಂದಿದ್ದರು. ಈ ಬಗ್ಗೆ ಅವರನ್ನು ಪ್ರಶ್ನಿಸಲಾಗುತ್ತದೆ” ಎಂದು ಎಸ್ಪಿ ಸುದ್ದಿಸಂಸ್ಥೆಗೆ ತಿಳಿಸಿದರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ಉಪಯುಕ್ತ ನ್ಯೂಸ್ ಸಿಗ್ನಲ್‌ ಗ್ರೂಪಿಗೆ ಜಾಯಿನ್ ಆಗಲು ಈ ಲಿಂಕ್‌ ಬಳಸಿ

Related posts

ರಾಜ್ಯದ ನಾಲ್ಕು ಕ್ಷೇತ್ರಕ್ಕೆ ಉಪಚುನಾವಣೆ ಸೇರಿದಂತೆ ಪಂಚರಾಜ್ಯ ಮತದಾನಕ್ಕೆ ಡೇಟ್ ಫಿಕ್ಸ್

Sushmitha Jain

ಪೌರತ್ವ ಕಾಯ್ದೆ ವಿರುದ್ಧ ಹಿಂಸೆಗಿಳಿದ ಜಾಮಿಯಾ ವಿವಿ ವಿದ್ಯಾರ್ಥಿಗಳ ಬಂಧನ, ಬಿಡುಗಡೆ

Upayuktha

‘ಎನ್‌ಪಿಆರ್‌ ಬಡವರ ಮೇಲಿನ ತೆರಿಗೆ’ ಎಂದ ರಾಹುಲ್‌ ‘ವರ್ಷದ ಸುಳ್ಳುಗಾರ;: ಬಿಜೆಪಿ ತಿರುಗೇಟು

Upayuktha