ಮುಂಬೈ: ಕೇಂದ್ರ ಸಚಿವರಾದ ರಾಮದಾಸ್ ಅಠಾವಳೆ ಅವರಿಗೆ ಮಂಗಳವಾರ ಕೋವಿಡ್ ವೈರಸ್ ತಗುಲಿ ಪಾಸಿಟಿವ್ ದೃಢಪಟ್ಟಿದ್ದು, ಇದೀಗ ಬಾಂಬೆ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಹಾಗೆಯೇ ಟ್ವಿಟರ್ ಮೂಲಕ ತಿಳಿಸಿದ ಅವರು “ನನಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿದ್ದು, ವೈದ್ಯರ ಸಲಹೆಯಂತೆ ನಾನು ಕೆಲವು ದಿನಗಳವರೆಗೆ ಆಸ್ಪತ್ರೆಗೆ ದಾಖಲಾಗಿದ್ದೇನೆ. ನನ್ನೊಂದಿಗೆ ಸಂಪರ್ಕಕ್ಕೆ ಬಂದವರು ಕೋವಿಡ್-19 ಪರೀಕ್ಷೆ ಮಾಡಿಸಿಕೊಳ್ಳಿ. ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಮತ್ತು ಸುರಕ್ಷಿತವಾಗಿರಿ” ಎಂದು ರಾಮದಾಸ್ ಅಠಾವಳೆ ಅವರು ಟ್ವೀಟ್ ಮಾಡಿದ್ದಾರೆ.
ಅವರು ನಿನ್ನೆ, ಬಾಲಿವುಡ್ ನಟಿ ಪಾಯಲ್ ಘೋಷ್ ಅವರು ಕೇಂದ್ರ ಸಚಿವ ರಾಮದಾಸ್ ಅಠಾವಳೆ ನೇತೃತ್ವದ ರಿಪಬ್ಲಿಕನ್ ಪಾರ್ಟಿ ಆಪ್ ಇಂಡಿಯಾಗೆ ಸೇರ್ಪಡೆಯಾಗಿದ್ದರು.
ಜಂಟಿ ಪತ್ರಿಕಾಗೋಷ್ಠಿಯಲ್ಲಿ ಪಾಯಲ್ ಘೋಷ್ ಮತ್ತು ರಾಮದಾಸ್ ಅಠಾವಳೆ ಒಟ್ಟಿಗೆ ನಿಂತಿದ್ದರು. ಹಾಗೂ ಕೇಂದ್ರ ಸಚಿವರಾದ ಅಠಾವಳೆ ಮಾಸ್ಕ್ ಅನ್ನು ಸರಿಯಾಗಿ ಪೂರ್ಣ ಪ್ರಮಾಣದಲ್ಲಿ ಧರಿಸದಿರುವುದು ಈಗ ನಟಿ ಸೇರಿದಂತೆ ಪತ್ರಿಕಾಗೋಷ್ಠಿಯಲ್ಲಿದ್ದ ಹಲವರಿಗೆ ಭಯ ಮೂಡಿದೆ.