ಕ್ಯಾಂಪಸ್ ಸುದ್ದಿ ನಗರ ಸ್ಥಳೀಯ

ಪದವಿ ಪರೀಕ್ಷೆ: ವಿಶ್ವವಿದ್ಯಾನಿಲಯ ಕಾಲೇಜಿಗೆ ಮೂರು ರ‍್ಯಾಂಕ್

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಕಳೆದ ಸಾಲಿನ ಪದವಿ ಪರೀಕ್ಷೆಯಲ್ಲಿ ನಗರದ ಹಂಪನಕಟ್ಟೆಯ ವಿಶ್ವವಿದ್ಯಾನಿಲಯ ಕಾಲೇಜಿನ ಮೂವರು ವಿದ್ಯಾರ್ಥಿನಿಯರು ರ‍್ಯಾಂಕ್ ಪಡೆದುಕೊಂಡಿದ್ದಾರೆ.

ಕಲಾ ವಿಭಾಗದಲ್ಲಿ ನಗರದ ಶೋಭಾ ಪಿ ಮತ್ತು ಕೆ ಎಸ್‌ ಪ್ರೇಂಕುಮಾರ್‌ ಅವರ ಪುತ್ರಿ ಸಾಯಿ ಸೂರ್ಯ ಕೆ ಪಿ 6ನೇ ರ‍್ಯಾಂಕ್ ಮತ್ತು ಆಕಾಶಭವನದ ಪ್ರೇಮನಾಥ ಆಚಾರ್ಯ ಅವರ ಪತ್ನಿ, ಪಾರ್ವತಿ- ಪ್ರಭಾಕರ ಆಚಾರ್ಯ ದಂಪತಿಯ ಪುತ್ರಿ ಸಂಧ್ಯಾ 9ನೇ ರ‍್ಯಾಂಕ್ ಗಳಿಸಿದ್ದಾರೆ.

ಸಂಧ್ಯಾ ಬೆಳ್ಮದೋಟದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿಯೂ ಹೌದು. ವಾಣಿಜ್ಯ ವಿಭಾಗದಲ್ಲಿ ಮಂಗಳೂರಿನ ರೈಲ್ವೇ ಕಾಲನಿಯ ಎಸ್‌. ಲಕ್ಷ್ಮೀ- ಐ ಬಾಬು ದಂಪತಿಯ ಮಗಳು ಐ. ಪ್ರಿಯದರ್ಶಿನಿ 8 ನೇ ರ‍್ಯಾಂಕ್‌ಗೆ ಭಾಜನರಾಗಿದ್ದಾರೆ. ರ‍್ಯಾಂಕ್ ವಿಜೇತರಿಗೆ ಕಾಲೇಜಿನ ಪ್ರಾಂಶುಪಾಲರು, ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Related posts

ಮಾರಣಕಟ್ಟೆ ಜಾತ್ರೆ: ಈ ಬಾರಿ ಜ. 15ರಿಂದ 17ರ ವರೆಗೆ

Upayuktha

ಅಮರಾವತಿ ಪೊಯೆಟಿಕ್ ಪ್ರಿಸಮ್ – 2019: ಅಂತಾರಾಷ್ಟ್ರೀಯ ಕವಿ ಸಮ್ಮೇಳನ

Upayuktha

ಫೆ. 23ರಂದು ಫಿಲೋಮಿನಾದಲ್ಲಿ ಹಿರಿಯ ವಿದ್ಯಾರ್ಥಿ, ಶಿಕ್ಷಕ-ರಕ್ಷಕ-ಸಂಘದ ಕ್ರೀಡಾಕೂಟ

Upayuktha