ದೇಶ-ವಿದೇಶ ಪ್ರಮುಖ

ಲಾಕ್‌ಡೌನ್ ವಿಸ್ತರಣೆ ಹಿನ್ನೆಲೆ: 6ರಿಂದ 9 ಮತ್ತು 11ನೇ ತರಗತಿ ವಿದ್ಯಾರ್ಥಿಗಳು ಪರೀಕ್ಷೆ ಇಲ್ಲದೆಯೇ ಪಾಸ್: ಉ.ಪ್ರ ಸರಕಾರದ ತೀರ್ಮಾನ

ಲಖನೌ: ಕೊರೊನಾ ವೈರಸ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಉಂಟಾದ ವಿಷಮ ಸ್ಥಿತಿಯಿಂದಾಗಿ 6ರಿಂದ 9ನೇ ತರಗತಿ ವರೆಗಿನ ಹಾಗೂ 11ನೇ ತರಗತಿಯ ವಿದ್ಯಾರ್ಥಿಗಳನ್ನು ಅಂತಿಮ ಪರೀಕ್ಷೆಯಿಲ್ಲದೇ ಮುಂದಿನ ತರಗತಿಗಳಿಗೆ ಉತ್ತೀರ್ಣಗೊಳಿಸಲು ಉತ್ತರ ಪ್ರದೇಶ ಸರಕಾರ ತೀರ್ಮಾನಿಸಿದೆ.

ಕೊರೊನಾ ಸಾಂಕ್ರಾಮಿಕ ತೊಲಗಿದ ಬಳಿಕ, ಮುಂದಿನ ಶೈಕ್ಷಣಿಕ ವರ್ಷ ಆರಂಭವಾದ ಬಳಿಕ ಈ ತರಗತಿಗಳ ವಿದ್ಯಾರ್ಥಿಗಳು ನೇರವಾಗಿ ಮುಂದಿನ ತರಗತಿಗಳಿಗೆ ಹಾಜರಾಗಬಹುದಾಗಿದೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರಕಾರದ ಈ ಘೋಷಣೆಯಿಂದ ಪರೀಕ್ಷೆಗಳಿಗೆ ಸಿದ್ಧತೆ ನಡೆಸಿಯೂ ಪರೀಕ್ಷೆಗಳೇ ರದ್ದಾಗಿ ಅತಂತ್ರರಾಗಿರುವ ಲಕ್ಷಾಂತರ ವಿದ್ಯಾರ್ಥಿಗಳು ಸಮಾಧಾನದ ನಿಟ್ಟುಸಿರು ಬಿಡುವಂತಾಗಿದೆ.

ಉಪ ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವ ಡಾ. ದಿನೇಶ್ ಶರ್ಮಾ ಅವರು ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿದ ಬಳಿಕ ಈ ತೀರ್ಮಾನ ಪ್ರಕಟಿಸಿದ್ದಾರೆ. ಅಲ್ಲದೆ 9ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ ಏಪ್ರಿಲ್ 20ರ ಬಳಿಕ ಇ-ಲರ್ನಿಂಗ್ ಮತ್ತು ವಾಟ್ಸಪ್ ಮೂಲಕ ವರ್ಚುವಲ್ ಕ್ಲಾಸ್‌ಗಳನ್ನು ನಡೆಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ದೀಕ್ಷಾ ಪೋರ್ಟಲ್‌ನಲ್ಲಿರುವ ಪಠ್ಯ ವಿಷಯಗಳನ್ನು ಆಧರಿಸಿ ಶಿಕ್ಷಣ ನೀಡಲಾಗುತ್ತದೆ ಮತ್ತು ದೂರದರ್ಶನ ಮೂಲಕವೂ ತರಗತಿಗಳನ್ನು ನಡೆಸಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಡಾ. ಶರ್ಮಾ ತಿಳಿಸಿದರು.

ಉತ್ತರ ಪ್ರದೇಶದ 10 ಮತ್ತು 10ನೇ ತರಗತಿಗಳ ಬೋರ್ಡ್‌ ಪರೀಕ್ಷೆಗಳ ಫಲಿತಾಂಶವನ್ನು ಜೂನ್‌ ಮೊದಲ ವಾರದಲ್ಲಿ ಪ್ರಕಟಿಸಲಾಗುತ್ತದೆ ಎಂದು ಅವರು ತಿಳಿಸಿದರು.

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ಬಜೆಟ್‌ 2021 ವಿಶ್ಲೇಷಣೆ: ದೂರದೃಷ್ಟಿಯ ಆತ್ಮ ನಿರ್ಭರ ಬಜೆಟ್

Upayuktha

ಚೀನಾದಲ್ಲಿ ಬಿಬಿಸಿ ಪ್ರಸಾರಕ್ಕೆ ನಿಷೇಧ

Harshitha Harish

ನಾನು ಜಾತ್ಯತೀತ ವ್ಯಕ್ತಿ, ರಾಮ ಮಂದಿರಕ್ಕೆ ದೇಣಿಗೆ ನೀಡುತ್ತೇನೆ: ರಾಬರ್ಟ್​ ವಾದ್ರಾ

Sushmitha Jain