ಮೂಲ್ಕಿ: ಸತ್ಯಕ್ಕಿಂತಲೂ ಸುಳ್ಳೇ ಹೇಗೆ ಕಾಳ್ಗಿಚ್ಚಿನಂತೆ ಹಬ್ಬುತ್ತದೆ ಎಂಬುದಕ್ಕೆ ಇದೊಂದು ಹೊಸ ಉದಾಹರಣೆ. ಉಡುಪಿ ಜಿಲ್ಲೆಯ ಹೆಜಮಾಡಿ ಕಡಲ ತೀರದಲ್ಲಿ ಸಮುದ್ರವು ಮಿನಿ ಸುನಾಮಿಯಂತೆ ಉಕ್ಕಿ ಹರಿದು ಪರಿಸರದ ಮನೆಗಳಿಗೆ ಅಪಾರ ಹಾನಿ ಉಂಟುಮಾಡಿದೆ ಎಂಬ ವಿವರಣೆಯೊಂದಿಗೆ ವೀಡಿಯೋತುಣುಕೊಂದು ವಾಟ್ಸಪ್ ಮತ್ತು ಇತರ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ.
ವಾಸ್ತವದಲ್ಲಿ ಇದು ಸಂಪೂರ್ಣ ಸುಳ್ಳಾಗಿದ್ದು, ಪಡುಬಿದ್ರಿ, ಹೆಜಮಾಡಿ ಪರಿಸರದಲ್ಲಿ ಅಂತಹ ಯಾವುದೇ ಘಟನೆ ಸಂಭವಿಸಿಲ್ಲ. ವೈರಲ್ ಆಗುತ್ತಿರುವ ವೀಡಿಯೋ ತುಣುಕು ಹಳೆಯದಾಗಿದ್ದು, ಈ ಪರಿಸರದ್ದಲ್ಲ. ಮೊದಲಿಗೆ ಮುಂಬಯಿ ಮೂಲದ ವಾಟ್ಸಪ್ ಗ್ರೂಪ್ಗಳಿಂದ ಹರಡಲು ಆರಂಭವಾದ ಈ ವೀಡಿಯೋ, ಇದೀಗ ಕೊರೊನಾ ಸಾಂಕ್ರಾಮಿಕದಂತೆ ಎಲ್ಲೆಡೆ ಹಬ್ಬುತ್ತಿದೆ.
ಕೇರಳ ಅಥವಾ ತಮಿಳುನಾಡು ಕರಾವಳಿಯ ದೃಶ್ಯದಂತೆ ಇದು ಕಾಣುತ್ತಿದ್ದು, ವರ್ಷಗಳಷ್ಟು ಹಳೆಯದಾಗಿದೆ. ಫೇಕ್ ನ್ಯೂಸ್ ಫ್ಯಾಕ್ಟರಿಯವರು, ಹಳೆಯ ವೀಡಿಯೋ ತುಣುಕಿಗೆ ತಮಗೆ ತೋಚಿದಂತೆ ವಿವರಣೆಗಳನ್ನು ನೀಡುತ್ತ ಹಬ್ಬಿಸುತ್ತಿದ್ದಾರೆ.
ಹೆಜಮಾಡಿ ಪರಿಸರದ ಜನತೆಯನ್ನೇ ಉಪಯುಕ್ತ ನ್ಯೂಸ್ ಮಾತನಾಡಿಸಿದಾಗ, ವೈರಲ್ ಆಗುತ್ತಿರುವ ವೀಡಿಯೋ ಸಂಪೂರ್ಣ ಸುಳ್ಳೆಂಬುದು ಖಾತ್ರಿಯಾಗಿದೆ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್ App ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ
‘ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಟ್ವಿಟರ್ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ
ಯೂಟ್ಯೂಬ್ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್ App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.