ಅಪಘಾತ- ದುರಂತ ದೇಶ-ವಿದೇಶ

ಉ.ಪ್ರದೇಶ: ಬಸ್ ಹಾಗೂ ಟ್ಯಾಂಕರ್ ಡಿಕ್ಕಿ 7ಮಂದಿ ಸಾವು , 25ಕ್ಕೂ ಹೆಚ್ಚು ಮಂದಿ ಗಾಯ

ಸಂಭಾಲ್: ಉತ್ತರಪ್ರದೇಶದ ಸಂಭಾಲ್’ನಲ್ಲಿ ಭೀಕರ ರಸ್ತೆ ಅಪಘಾತವಾಗಿದ್ದು ಬಸ್ ಹಾಗೂ ಟ್ಯಾಂಕರ್ ಡಿಕ್ಕಿ ಹೊಡೆದು ಪರಿಣಾಮದಿಂದಾಗಿ 7 ಮಂದಿ ಸ್ಥಳದಲ್ಲೇ ಸಾವಿಗೀಡಾದ್ದು, 25ಕ್ಕೂ ಹೆಚ್ಚು ಮಂದಿಗೆ ಗಾಯವಾಗಿರುವ ಘಟನೆ ಬುಧವಾರ ನಡೆದಿದೆ.

ಇಂದು ಬೆಳಿಗ್ಗಿನ ವೇಳೆ, ಧಾನರಿ ಪ್ರದೇಶದಲ್ಲಿ ಮಂಜಿನ ವಾತಾವರಣವಿದ್ದ ಕಾರಣ ಬಸ್ ಹಾಗೂ ಟ್ಯಾಂಕರ್ ನಡುವೆ ಈ ಘಟನೆ ನಡೆದಿದೆ ಎಂದು ಸಂಭಾಲ್ ಜಿಲ್ಲೆಯ ಎಸ್’ಪಿ ಚಕ್ರೇಶ್ ಮಿಶ್ರಾ ಅವರು ಹೇಳಿದ್ದಾರೆ.

ಅಪಘಾತದ ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಭೇಟಿ ನೀಡಿ ಈ ವೇಳೆ ಗಾಯಾಳುಗಳನ್ನು ಕೂಡಲೇ ರಕ್ಷಣೆ ಮಾಡಿ ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಯಿತು ಎಂದು ಮಾಹಿತಿ ತಿಳಿಸಿದ್ದಾರೆ.

ಘಟನೆಯ ಬಗ್ಗೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಗಾಯಾಳುಗಳಿಗೆ ಅಗತ್ಯ ನೆರವು ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ತಿಳಿಸಿದ್ದಾರೆ.

Related posts

ಅಂತಾರಾಷ್ಟ್ರೀಯ ಗುಣಮಟ್ಟದಲ್ಲೇ ದೇಶೀಯ ಡಯಾಗ್ನಾಸ್ಟಿಕ್ ಉತ್ಪನ್ನಗಳು: ಬೆಂಗಳೂರು ಟೆಕ್‌ ಶೃಂಗಸಭೆಯಲ್ಲಿ ಲಲಿತ್ ಕಿಶೋರ್

Upayuktha

ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಆಸ್ಪತ್ರೆ ದಾಖಲು

Harshitha Harish

ವೈರಲ್ ವೀಡಿಯೋ: ಕೋವಿಡ್ ವಾರಿಯರ್‌ಗಳ ಬಗ್ಗೆ ಕೇಜ್ರಿ ಸರಕಾರದ ಅಸಡ್ಡೆ: ಕಣ್ಣೀರಿಟ್ಟ ಅಂಬೇಡ್ಕರ್ ಆಸ್ಪತ್ರೆ ಸಿಬ್ಬಂದಿಗಳು

Upayuktha