ಹೈದರಾಬಾದ್ :
ನವೆಂಬರ್ 12 ರಂದು ರಾತ್ರಿ ಹೈದರಾಬಾದ್ನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟರು. ಒಂದು ತಿಂಗಳ ಹಿಂದೆ ವಂಶಿ ರಾಜೇಶ್ ಕೊಂಡವೀಟಿಗೆ ಕೋವಿಡ್ ಸೋಂಕು ತಗುಲಿ ಆ ಬಳಿಕ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಕಳೆದ ಒಂದು ವಾರದಿಂದ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿತ್ತು. ಹೀಗಾಗಿ ಚಿಕಿತ್ಸೆ ಫಲಿಸದೆ ನವೆಂಬರ್ 12 ರಂದು ನಿಧನರಾಗಿದ್ದಾರೆ.
ಅವರ ಅಕಾಲಿಕ ಮರಣ ತೆಲುಗು ಇಂಡಸ್ಟ್ರಿಗೆ ಬೇಸರ ತಂದಿದ್ದು ಕಳೆದ ಒಂದು ವಾರದಿಂದ ವೆಂಟಿಲೇಟರ್ ಮೂಲಕ ಚಿಕಿತ್ಸೆಯಲ್ಲಿದ್ದ ವಂಶಿ ಉಸಿರಾಟ ತೊಂದರೆಯಿಂದ ಸಾವನ್ನಪ್ಪಿದರು ಎಂದು ವೈದ್ಯರು ತಿಳಿಸಿದರು.
ಅವರು ಬಹಳ ವರ್ಷದಿಂದ ತೆಲುಗು ಇಂಡಸ್ಟ್ರಿಯಲ್ಲಿ ಬರಹಗಾರನಾಗಿ ಕೆಲಸ ಮಾಡುತ್ತಿದ್ದಾರೆ. 2017ರಲ್ಲಿ ತೆರೆಕಂಡಿದ್ದ ‘ಮಿಸ್ಟರ್’ ಚಿತ್ರಕ್ಕೆ ಸ್ಕ್ರಿಪ್ಟ್ ಮಾಡಿದ್ದರು. ರವಿತೇಜ ನಟನೆಯ ಅಮರ್ ಅಕ್ಬರ್ ಆಂಟೋನಿ ಚಿತ್ರದಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ.
ನವೆಂಬರ್ 13 ರಂದು ಅವರ ಅಂತಿಮ ಸಂಸ್ಕಾರ ನಡೆಯಿತು.