ಗ್ರಾಮಾಂತರ ಸ್ಥಳೀಯ

ಸುರಕ್ಷಾ ದಂತ ಚಿಕಿತ್ಸಾಲಯದಲ್ಲಿ ವನಮಹೋತ್ಸವ

ಮಂಗಳೂರು: ಹೊಸಂಗಡಿಯ ಹೈಲ್ಯಾಂಡ್ ಕಾಂಪ್ಲೆಕ್ಸ್‌ನಲ್ಲಿ ಇರುವ ಸುರಕ್ಷಾ ದಂತ ಚಿಕಿತ್ಸಾಲಯದಲ್ಲಿ 24ನೇ ವಾರ್ಷಿಕೋತ್ಸವದ ಅಂಗವಾಗಿ ವನಮಹೋತ್ಸವ ಜರುಗಿತು.

ಕಳೆದ ಐದು ವರ್ಷಗಳಿಂದ ಸುರಕ್ಷಾ ದಂತ ಚಿಕಿತ್ಸಾಲಯದಲ್ಲಿ ಪ್ರತಿ ವರ್ಷ ಜುಲೈ ತಿಂಗಳಲ್ಲಿ ವನಮಹೋತ್ಸವ ಜರುಗಿಸಿ ಗಿಡ ವಿತರಣೆ ನಡೆಸಿ ಜನರಲ್ಲಿ ಪರಿಸರದ ಬಗ್ಗೆ ಕಾಳಜಿ ಮೂಡಿಸಲಾಗುತ್ತಿದೆ. ಕಳೆದ 5 ವರ್ಷಗಳಲ್ಲಿ ಸುಮಾರು 1000 ಗಿಡಗಳನ್ನು ವಿತರಿಸಲಾಗಿದೆ. ಪ್ರಸ್ತುತ ಜಾಗತಿಕವಾಗಿ ಕಾಡುತ್ತಿರುವ ಕೋವೀಡ್ 19 ರೋಗ ಕೂಡ ಪರಿಸರದ ನಾಶದಿಂದಾಗಿ ಉಂಟಾಗಿರುವ ನಿಟ್ಟಿನಲ್ಲಿ ಜನರಲ್ಲಿ ಪರಿಸರ ಪ್ರಜ್ಞೆ ಮೂಡಿಸುವ ನಿಟ್ಟಿನಲ್ಲಿ ಈ ವನಮಹೋತ್ಸವ ಕಾರ್ಯಕ್ರಮ ಜರುಗಿಸಲಾಗಿದೆ ಎಂದು ದಂತ ಚಿಕಿತ್ಸಾಲಯದ ಮುಖ್ಯ ವೈದ್ಯರಾದ ಡಾ| ಮುರಲೀ ಮೋಹನ್ ಚೂಂತಾರು ತಿಳಿಸಿದ್ದಾರೆ.

ಶುದ್ಧಗಾಳಿ, ಪರಿಶುದ್ಧ ನೀರು ಮತ್ತು ಸಮತೋಲನ ಉಳ್ಳ ಆಹಾರದಿಂದ ಎಲ್ಲ ರೋಗಗಳನ್ನು ತಡೆಯಬಹುದಾಗಿದ್ದು, ಪರಿಸರ ರಕ್ಷಣೆಯಿಂದ ಮಾತ್ರ ಈ ಕಾರ್ಯ ಸಾಧ್ಯ ಎಂದು ಡಾ| ಚೂಂತಾರು ತಿಳಿಸಿದರು. ಸಾಂಕೇತಿಕವಾಗಿ ಶ್ರೀಮತಿ ದೇವಕಿ ಇವರಿಗೆ ಗಿಡ ನೀಡುವ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಪ್ರತಿ ವರ್ಷದಂತೆ ಈ ವರ್ಷವೂ ಜುಲೈ ತಿಂಗಳಿಡೀ ಸುರಕ್ಷಾ ದಂತ ಚಿಕಿತ್ಸಾಲಯಕ್ಕೆ ಭೇಟಿ ನೀಡುವ ರೋಗಿಗಳಿಗೆ ಉಚಿತ ಗಿಡ ನೀಡುವ ಮೂಲಕ ವ್ಯವಸ್ಥೆ ಮಾಡಲಾಗಿದ್ದು, ಎಲ್ಲರೂ ಇದರ ಪ್ರಯೋಜನ ಪಡೆಯಲು ಕೋರಲಾಗಿದೆ.

ಈ ಸಂದರ್ಭದಲ್ಲಿ ದಂತ ಚಿಕಿತ್ಸಾಲಯ ವೈದ್ಯರಾದ ಡಾ| ಆದರ್ಶ್, ಸಹಾಯಕಿರಾದ ರಮ್ಯ, ಶ್ವೇತಾ, ಚೈತ್ರಾ, ಸುಶ್ಮಿತಾ ಉಪಸ್ಥಿತರಿದ್ದರು. ಜುಲೈ 3, 1997ರಂದು ಹೊಸಂಗಡಿಯ ಹಿಲ್‍ಸೈಡ್ ಕಾಂಪ್ಲೆಕ್ಸ್‌ನಲ್ಲಿ ಉದ್ಘಾಟನೆಯಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರತಿ ವರ್ಷ ಜುಲೈ 3ರಂದು ಈ ದಿನದ ನೆನಪಿಗಾಗಿ ಗಿಡ ವಿತರಣೆ, ರಕ್ತದಾನ ಶಿಬಿರ ಮತ್ತು ಬಾಯಿ ಕ್ಯಾನ್ಸರ್ ತಪಾಸಣಾ ಶಿಬಿರ ಮುಂತಾದ ಸಮಾಜಮುಖಿ ಕಾರ್ಯ ನಡೆಸಿ ಸುರಕ್ಷಾ ದಂತ ಚಿಕಿತ್ಸಾಲಯ ಬರೀ ದಮತ ಚಿಕಿತ್ಸೆಗೆ ಮಾತ್ರ ಸೀಮಿತವಾಗದೇ, ಜನರಲ್ಲಿ ಆರೋಗ್ಯದ ಬಗ್ಗೆ ಕಾಳಜಿ, ಪರಿಸರ ಪ್ರಜ್ಞೆ ಮತ್ತು ರಕ್ತದಾನದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಿದೆ.

ದಂತ ಚಿಕಿತ್ಸಾಲಯದ ಇನ್ನೋರ್ವ ದಂತ ವೈದ್ಯರಾದ ಡಾ| ರಾಜಶ್ರೀ ಮೋಹನ್‍ರವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

 

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್  App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

 

Related posts

ಮಂಗಳೂರು ವಿವಿಯಲ್ಲಿ ಶನಿವಾರ ವಿವಿಧ ಯೋಜನೆಗಳ ಉದ್ಘಾಟನೆ

Upayuktha

ಫೆ. 20ರಂದು ಫಿಲೋಮಿನಾದಲ್ಲಿ ಇಕನಾಮಿಕ್ಸ್ ಫೆಸ್ಟ್ ‘ಇಕೊಕ್ಸೆನಿತ್-2020’

Upayuktha

‘ಅಡಕವಾಗಿ, ಸಾಂದ್ರವಾಗಿ ಮತ್ತು ಸೂಕ್ಷ್ಮವಾಗಿ ಹೇಳುವುದೇ ಕಾವ್ಯ’

Upayuktha