ಕತೆ-ಕವನಗಳು

ವರ್ಷಧಾರೆ

ಮುಗಿಲಳುತಿದೆ ನೋಡು
ಮನವ ಕರಗಿಸಿ
ಕೂಡಿಟ್ಟ ದುಗುಡಗಳ
ಒಟ್ಟಿಗೆ ಹೊರಹಾಕಿ

ಅದೇಷ್ಟೋದಿನಗಳ ನೋವು
ಘನವಾಗಿ ಮಂಜಿನಲಿ ಕೂತು
ತಡೆಯಲಾರದೆ ಕಟ್ಟೆಯೊಡೆದು
ಧೋ ಎಂದು ಭಿಕ್ಕಿ ಅತ್ತು.

ಉಸಿರು ಬಿಗಿದು ಕಟ್ಟಿ
ಬೀಸುವ ಗಾಳಿಗೆ ಕಣ್ಮುಚ್ಚಿ
ಬಿಸಿಯುಸಿರ ಬಸಿದು
ತಣ್ಣನೆ ಹನಿಗಳ ಹರಿಸಿ.

ಕಳೆದುಕೊಳ್ಳುತ್ತಿದೆ ಮನದ ದುಗುಡ
ಹಗಳಿರುಳೆನ್ನದೆ ಮೌನ ರಾಗ ನಿರಂತರ
ತಾನತ್ತು ನೀರಾಗಿ ಜಗಕೆ ನೆರವಾಗುವ
ವರ್ಷದಾರೆಯೇ ನಿನಗೆ ನನಮನ.

ಡಾ.ಅನಪು

Related posts

ನಮೋ

Harshitha Harish

*ಹಳ್ಳಿಯ ಜೀವನ*

Harshitha Harish

*ಬಾಳ ಬಂಡಿ*

Harshitha Harish