ಗ್ರಾಮಾಂತರ ಸಮುದಾಯ ಸುದ್ದಿ ಸ್ಥಳೀಯ

ಪೆರಡಾಲದಲ್ಲಿ ವಸಂತವೇದ ಪಾಠ ಶಾಲೆ ಆರಂಭ

ಬದಿಯಡ್ಕ: ಕಾಸರಗೋಡು ಹೊಸದುರ್ಗ ಹೈವ ಬ್ರಾಹ್ಮಣ ಸಭಾ ಪೆರಡಾಲ ಇದರ ವತಿಯಿಂದ ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದಲ್ಲಿ ಬುಧವಾರ ಯಜುರ್ವೇದ ವಟುಗಳಿಗೆ ವಸಂತ ವೇದ ಪಾಠ ಶಿಬಿರ ಪ್ರಾರಂಭಿಸಲಾಯಿತು.

ದೇವಸ್ಥಾನದ ಪ್ರಧಾನ ಅರ್ಚಕ ಶಿವಪ್ರಸಾದ ಭಟ್ ದೀಪ ಬೆಳಗಿಸಿ ಉದ್ಘಾಟಿಸಿದರು. ಕಾಸರಗೋಡು ಹೊಸದುರ್ಗ ಹೈವ ಬ್ರಾಹ್ಮಣ ಸಭಾದ ಅಧ್ಯಕ್ಷ ಕುಳಮರ್ವ ಶಂಕರನಾರಾಯಣ ಭಟ್ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಕಳೆದ ಅನೇಕ ವರ್ಷಗಳಿಂದ ಸಮಾಜದ ಅಭ್ಯುದಯಕ್ಕಾಗಿ ನಡೆಯುವ ವಸಂತ ವೇದ ಪಾಠ ಶಾಲೆಯನ್ನು ಮುನ್ನಡೆಸಲು ಎಲ್ಲರ ಸಹಕಾರ ಅಗತ್ಯ ಎಂದರು.

ನಿವೃತ್ತ ಅಧ್ಯಾಪಕ ಉಪ್ಪಂಗಳ ಸುಬ್ರಹ್ಮಣ್ಯ ಭಟ್ ಮಾತನಾಡಿ ಹಿತವಚನಗಳನ್ನು ನುಡಿದರು. ಕಾಸರಗೋಡು ಹೊಸದುರ್ಗ ಹೈವ ಬ್ರಾಹ್ಮಣ ಸಭಾದ ಕಾರ್ಯದರ್ಶಿ ಶ್ಯಾಮಪ್ರಸಾದ ಕಬೆಕ್ಕೋಡು, ಖಜಾಂಜಿ ಗೋವಿಂದ ಭಟ್ ಏತಡ್ಕ, ಕ್ಷೇತ್ರದ ಆಡಳಿತ ಮೊಕ್ತೇಸರ ವೆಂಕಟ್ರಮಣ ಭಟ್ ಚಂಬಲ್ತಿಮಾರ್ ಉಪಸ್ಥಿತರಿದ್ದರು.

ವೇದಮೂರ್ತಿ ಶಿವರಾಮ ಭಟ್ ಪೆರಡಾಲ ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ ಶಿಬಿರದ ಸಂದರ್ಭದಲ್ಲಿ ನಡೆಸಲ್ಪಡುವ ಸೇವೆಗಳಾದ ವಟುಸಮಾರಾಧಾನೆ ಹಾಗೂ ವೇದ ವಿದ್ಯಾಸರಸ್ವತೀ ಸೇವೆಯೆಂಬ ಪುಣ್ಯ ಕಾರ್ಯದಲ್ಲಿ ಸಮಾಜಬಾಂಧವರು ಪಾಲ್ಗೊಳ್ಳಲು ಅವಕಾಶವಿದೆ ಎಂದು ತಿಳಿಸಿದರು.

ಅಧ್ಯಾಪಕರಾಗಿ ಗಣಪತಿ ಶರ್ಮ ಅಳಕ್ಕೆ, ಸುಬ್ರಹ್ಮಣ್ಯ ಪ್ರಸಾದ ನೀರ್ಚಾಲು, ಮುರಲೀಧರ ಶರ್ಮ ಸಹಕರಿಸಲಿರುವರು. ಪಟ್ಟಾಜೆ ವೆಂಕಟೇಶ್ವರ ಭಟ್ಟ ಸ್ವಾಗತಿಸಿದರು. ಮುರಲೀಧರ ಶರ್ಮ ಅಳಕ್ಕೆ ವಂದಿಸಿದರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Related posts

ಪಂಪ್‌ವೆಲ್‌ ಫ್ಲೈಓವರ್‌: ಮಾತು ತಪ್ಪಿದ ನವಯುಗ ಕಂಪನಿ ವಿರುದ್ಧ ಟೋಲ್ ಗೇಟ್ ಪ್ರತಿಭಟನೆ

Upayuktha

ತುಡರ್ ಯುವಕ ಮಂಡಲದಿಂದ ಭಜನಾ ಸಂಕೀರ್ತನೆ – ಅಯೋಧ್ಯೆಯ ಭೂಮಿ ಪೂಜೆ ಸ್ಪೆಷಲ್

Harshitha Harish

ಅಗಲ್ಪಾಡಿ ಜಾತ್ರೆ ಜ.30ರಿಂದ ಫೆ 4ರ ವರೆಗೆ

Upayuktha