ಕ್ಯಾಂಪಸ್ ಸುದ್ದಿ ನಗರ ಸ್ಥಳೀಯ

ಪುತ್ತೂರು: ಯಶಸ್ ವಿದ್ಯಾರ್ಥಿಗಳಿಂದ ಕೃಷಿ ತೋಟಕ್ಕೆ ಭೇಟಿ

ಪುಣಚ: ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಂಗ ಸಂಸ್ಥೆಯಾದ ವಿವೇಕಾನಂದ ಅಧ್ಯಯನ ಕೇಂದ್ರ ಯಶಸ್ ಇದರ ವಿದ್ಯಾರ್ಥಿಗಳಿಗೆ ಬಾಳೆ ಕೃಷಿ ಮತ್ತು ತೋಟಗಾರಿಕೆಯಲ್ಲಿರುವ ಲಾಭ-ನಷ್ಟ, ಸೌಲಭ್ಯ- ಸಮಸ್ಯೆಗಳ ಕುರಿತಾದ ಪ್ರಾತ್ಯಕ್ಷಿಕೆ ಅಧ್ಯಯನಕ್ಕಾಗಿ ಪುಣಚದ ರಾಜೇಶ್ ಅವರ ತೋಟಕ್ಕೆ ಭೇಟಿ ನೀಡಲಾಯಿತು. ನಾಗರಿಕ ಸೇವೆಯ ಗುರಿಯನ್ನು ಹೊಂದಿರುವ ವಿದ್ಯಾರ್ಥಿಗಳಲ್ಲಿ ಕೃಷಿಯ ಕುರಿತು ಮಾಹಿತಿಯನ್ನು ನೀಡುವ ದೃಷ್ಟಿಯಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ವಿದ್ಯಾರ್ಥಿ ಸಮೂಹಕ್ಕೆ ಕೃಷಿ ಕಡೆಗಿನ ಒಲವು ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಕೃಷಿ ಮತ್ತು ತೋಟಗಾರಿಕೆ ನೀಡಬಲ್ಲ ಲಾಭ ಮತ್ತು ಅದಕ್ಕಾಗಿ ವಹಿಸಬೇಕಾದ ಶ್ರಮದ ಕುರಿತು ಪುಣಚದ ರಾಜೇಶ್ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಅಷ್ಟೇ ಅಲ್ಲದೆ, ಕೃಷಿಯಲ್ಲಿ ತೊಡಗಿಸಿಕೊಂಡಾಗ ಬಂಡವಾಳ ಹೂಡುವ ಮೊದಲು ವಹಿಸಬೇಕಾದ ಜಾಗರೂಕತೆ, ಮಾಡಬೇಕಾದ ಯೋಜನೆಗಳ ಕುರಿತು ಹೇಗೆ ಗಮನವಹಿಸಬೇಕು. ಒಂದು ಪ್ರತ್ಯೇಕ ಕೃಷಿಯ ಆರಂಭದಿಂದ, ಅದರ ಮುಕ್ತಾಯದ ವರೆಗೆ ಎದುರಾಗಬಹುದಾದ ಸಮಸ್ಯೆಗಳ ಕುರಿತು ಮೊದಲೇ ಎಚ್ಚರಿಕೆ ವಹಿಸಬೇಕು ಎಂಬುದನ್ನು ತಿಳಿಸಿದರು.

ಈ ಸಂದರ್ಭದಲ್ಲಿ ವಿವೇಕಾನಂದ ಯಶಸ್ ಅಧ್ಯಯನ ಕೇಂದ್ರದ ಸಂಯೋಜಕ ಗೋವಿಂದರಾಜ ಶರ್ಮ, ಯಶಸ್‍ನ ಮೊದಲ ಮೂರು ಬ್ಯಾಚ್‍ನ ನಲವತ್ತು ಮಂದಿ ವಿದ್ಯಾರ್ಥಿಗಳು, ವಿವೇಕಾನಂದ ಹಾಸ್ಟೆಲ್ಸ್‌ನ ಮುಖ್ಯ ನಿಲಯಪಾಲಕ ಹರೇಕೃಷ್ಣ, ವಿವೇಕಾನಂದ ಕಾಲೇಜಿನ ಎಸ್ಟೇಟ್ ಮ್ಯಾನೇಜರ್ ಲಕ್ಷ್ಮೀ ಪ್ರಸಾದ್, ವಿದ್ಯಾರ್ಥಿನಿ ನಿಲಯ ಪಾಲಕರು ಉಪಸ್ಥಿತರಿದ್ದರು.

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ಕೆನರಾ ಬ್ಯಾಂಕ್‍ನಲ್ಲಿ ಮಹಿಳಾ ದಿನಾಚರಣೆ

Upayuktha

ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ನಾಳೆ ಮಂಗಳೂರಿಗೆ, ಎನ್‍ಐಟಿಕೆ 17ನೇ ಘಟಿಕೋತ್ಸವದಲ್ಲಿ ಭಾಗಿ

Upayuktha

ರಾಜ್ಯ ಸರ್ಕಾರ ಗ್ರಾಮೀಣ ರಸ್ತೆಗಳ ಕಾಮಗಾರಿ ಹಾಗೂ ಅಭಿವೃದ್ಧಿಗೆ ಮೊದಲ ಪ್ರಾಶಸ್ಯ ನೀಡುತ್ತಿದೆ: ಹರೀಶ್ ಪೂ೦ಜ

Sushmitha Jain