ಇತರ ಕ್ರೀಡೆಗಳು ಕ್ರೀಡೆ ನಗರ ಪ್ರಮುಖ ಸ್ಥಳೀಯ

ವೀರರಾಣಿ ಅಬ್ಬಕ್ಕ ಉತ್ಸವ ಕ್ರೀಡಾ ಪಂದ್ಯಾಟ ಫೆ.23ಕ್ಕೆ

ವೀರ ರಾಣಿ ಅಬ್ಬಕ್ಕ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮ (ಫೈಲ್‌ ಫೋಟೋ: ಚಿತ್ರ ಕೃಪೆ: ದಿ ಹಿಂದೂ)

ಮಂಗಳೂರು:

2019-20ನೇ ಸಾಲಿಗೆ ವೀರರಾಣಿ ಅಬ್ಬಕ್ಕ ಉತ್ಸವದ ಅಂಗವಾಗಿ ದ.ಕ. ಜಿಲ್ಲಾಡಳಿತ, ಅಬ್ಬಕ್ಕ ಉತ್ಸವ ಸಮಿತಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಯೋಗದಲ್ಲಿ ಫೆಬ್ರವರಿ 23 ರಂದು ಬೆಳಿಗ್ಗೆ 9 ಗಂಟೆಗೆ ಮಂಗಳೂರು ತಾಲೂಕಿನ ಅಸೈಗೋಳಿ ಕೇಂದ್ರ ಮೈದಾನದಲ್ಲಿ ಪುರುಷರಿಗೆ ವಾಲಿಬಾಲ್ ಮತ್ತು ಹಗ್ಗ ಜಗ್ಗಾಟ, ಮಹಿಳೆಯರಿಗೆ ತ್ರೋಬಾಲ್ ಮತ್ತು ಹಗ್ಗ ಜಗ್ಗಾಟ ಪಂದ್ಯಾಟ ನಡೆಯಲಿದೆ.

ಪಂದ್ಯಾಟದಲ್ಲಿ ಭಾಗವಹಿಸುವ ತಂಡಗಳು ಫೆಬ್ರವರಿ 21ರ ಒಳಗಾಗಿ ವಿನೋದ್ ಕುಮಾರ್ ದೂರವಾಣಿ ಸಂಖ್ಯೆ 9845026869 ಅಥವಾ ಲೋಕನಾಥ ರೈ ದೂರವಾಣಿ ಸಂಖ್ಯೆ 944800007 ಇವರಲ್ಲಿ ಹೆಸರು ನೊಂದಾಯಿಸಬೇಕು.

ಪಂದ್ಯಾಟದ ವಿಜೇತರಿಗೆ ನಗದು ಬಹುಮಾನದ ವಿವಿರ ಇಂತಿವೆ: ಪುರುಷರ ವಿಭಾಗದ ವಾಲಿಬಾಲ್ ಪಂದ್ಯಾಟದಲ್ಲಿ ಪ್ರಥಮ 12,000 ರೂ, ದ್ವಿತೀಯ 8,000 ರೂ, ತೃತೀಯ 4,000 ರೂ, ಚತುರ್ಥ- 2,000 ರೂ ನೀಡಲಾಗುತ್ತದೆ.

ತ್ರೋಬಾಲ್ ಮಹಿಳೆಯರ ವಿಭಾಗದಲ್ಲಿ, ಪ್ರಥಮ 8,000 ರೂ, ದ್ವಿತೀಯ 6,000 ರೂ, ತೃತೀಯ 4,000 ರೂ, ಚತುರ್ಥ- 2,000 ರೂ ನೀಡಲಾಗುತ್ತದೆ.

ಹಗ್ಗ ಜಗ್ಗಾಟ ಪುರುಷರ ವಿಭಾಗದಲ್ಲಿ ಪ್ರಥಮ 10,000 ರೂ, ದ್ವಿತೀಯ 7,000 ರೂ, ತೃತೀಯ- 4,000 ರೂ, ಚತುರ್ಥ 2,000 ರೂ ನೀಡಲಾಗುತ್ತದೆ.

ಹಗ್ಗ ಜಗ್ಗಾಟ ಮಹಿಳೆಯರು ವಿಭಾಗದಲ್ಲಿ ಪ್ರಥಮ 8,000 ರೂ, ದ್ವಿತೀಯ 6,000 ರೂ, ತೃತೀಯ-4,000 ರೂ, ಚತುರ್ಥ 2,000 ರೂ ನೀಡಲಾಗುತ್ತದೆ.

ಭಾಗವಹಿಸುವ ತಂಡಗಳು ಫೆಬ್ರವರಿ 23 ರಂದು ಬೆಳಿಗ್ಗೆ 9 ಗಂಟೆಯೊಳಗೆ ಅಸೈಗೋಳಿ ಕೇಂದ್ರ ಮೈದಾನದಲ್ಲಿ ಹಾಜರಿರಬೇಕೆಂದು ಯುವ ಸಬಲೀಕರಣ ಮ್ತು ಕ್ರೀಡಾ ಇಲಾಖೆಯ ಉಪ ನಿರ್ದೇಶಕರ ಪ್ರಕಟಣೆ ತಿಳಿಸಿದೆ.

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ಗಡಿನಾಡ ಜನತೆಗೆ ಅಗತ್ಯ ಔಷಧಗಳ ಪೂರೈಕೆ: ‘ಸೇವಾ ಹಿ ಪರಮೋ ಧರ್ಮ’ ಗ್ರೂಪಿನ ಹೆಗ್ಗಳಿಕೆ

Upayuktha

ಮಂಗಳೂರು: ಪಿಲಿಕುಳ ನಿಸರ್ಗಧಾಮದಲ್ಲಿ ನಾಯಿಗಳ ದಾಳಿಗೆ 15 ಜಿಂಕೆಗಳು ಬಲಿ

Upayuktha

ಬಜಪೆ ಸಮೀಪ ಎಕ್ಕಾರಿನಲ್ಲಿ ಚಲಿಸುತ್ತಿದ್ದ ಕಾರಿಗೆ ಬೆಂಕಿ, ಪ್ರಯಾಣಿಕರು ಪಾರು

Upayuktha