ವಾಣಿಜ್ಯ

ಕರ್ಣಾಟಕ ಬ್ಯಾಂಕ್‌: ವೇಣುಗೋಪಾಲ ಭಟ್ ಮಾಂಬಾಡಿ ಅವರಿಗೆ ಪದೋನ್ನತಿ

ತಮಿಳುನಾಡು ಪ್ರಾದೇಶಿಕ ಮುಖ್ಯಸ್ಥರಾಗಿ ನೇಮಕ

ಮಂಗಳೂರು: ಕರ್ಣಾಟಕ ಬ್ಯಾಂಕಿನ ಹಿರಿಯ ಅಧಿಕಾರಿ ವೇಣುಗೋಪಾಲ ಭಟ್ ಮಾಂಬಾಡಿ ಅವರು ತಮಿಳುನಾಡಿನ ಪ್ರಾದೇಶಿಕ ಮುಖ್ಯಸ್ಥರಾಗಿ ಪದೋನ್ನತಿ ಹೊಂದಿ (ರೀಜನಲ್ ಹೆಡ್) ಚೆನ್ನೈಗೆ ವರ್ಗಾವಣೆ ಹೊಂದಿದ್ದಾರೆ.

Advertisement
Advertisement

ಪ್ರಸ್ತುತ ಅವರು ಬೆಂಗಳೂರಿನಲ್ಲಿ ಡೆಪ್ಯುಟಿ ರೀಜನಲ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಅವರೀಗ ಚೆನ್ನೈ ಪ್ರಾದೇಶಿಕ ಮುಖ್ಯಸ್ಥರಾಗಿ ವರ್ಗಾವಣೆಗೊಂಡಿದ್ದಾರೆ. ತಮಿಳುನಾಡಿನ ಸುಮಾರು 50 ಶಾಖೆಗಳ ಕಾರ್ಯನಿರ್ವಹಣೆಯ ಉಸ್ತುವಾರಿ ಅವರದ್ದಾಗಿರುತ್ತದೆ.

ಕಳೆದ ಎರಡೂವರೆ ವರ್ಷಗಳಿಂದ ಬೆಂಗಳೂರಿನ ಪ್ರಾದೇಶಿಕ ಕಚೇರಿಯಲ್ಲಿ ಬ್ಯಾಂಕಿನ ಫೀಲ್ಡ್‌ ಎಕ್ಸಿಕ್ಯೂಟಿವ್‌ ಆಗಿ ಹಾಗೂ ರೀಜನಲ್ ಲೋನ್ ಪ್ರೋಸೆಸಿಂಗ್ ಸೆಂಟರಿನಲ್ಲಿ ಪ್ರಾರಂಭಿಕ ಎಜಿಎಂ ಆಗಿ ಹಾಗೂ ಒಂದು ರೀಜನ್‌ನ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಅದಕ್ಕೂ ಮೊದಲು ಮುಖ್ಯ ಪ್ರಭಂದಕರಾಗಿ ಬ್ಯಾಂಕಿನ ಪ್ರಧಾನ ಕಚೇರಿ ಮಂಗಳೂರಿನಲ್ಲಿ, ಬ್ಯಾಂಕಿನ ಎಂಡಿ ಸಿಇಒ ಅವರಿಗೆ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಅದಕ್ಕೆ ಮೊದಲು 4 ವರ್ಷಗಳ ಕಾಲ ಮಂಗಳೂರಿನಲ್ಲಿ ಬ್ಯಾಂಕಿನ ಸಿಬ್ಬಂದಿ ತರಬೇತಿ ಕಾಲೇಜಿನಲ್ಲಿ ಫ್ಯಾಕಲ್ಟಿಯಾಗಿ ಕಾರ್ಯ ನಿರ್ವಹಿಸಿದ್ದರು.

ವೇಣುಗೋಪಾಲ ಭಟ್ ಅವರು ಮಾಂಬಾಡಿ ಮೂಲದವರಾಗಿದ್ದು, ಪುತ್ತೂರು ತಾಲೂಕಿನ ಪಡುಮಲೆ ಎಂಬಲ್ಲಿ ತಂದೆ ರಾಮಕೃಷ್ಣ ಭಟ್ ಮಾಂಬಾಡಿ (92 ವರ್ಷ) ಹಾಗೂ ಅಣ್ಣತಮ್ಮಂದಿರ ಕೂಡು ಕುಟುಂಬದಲ್ಲಿ ಇದ್ದಾರೆ. ಅವರ ಪುತ್ರ ಬೆಂಗಳೂರಿನಲ್ಲಿ ಸೀಮೆನ್ಸ್ ಕಂಪನಿಯಲ್ಲಿ ಕಂಪ್ಯೂಟರ್ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

 

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್  App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

 

Advertisement
Advertisement

Related posts

4,335 ಕೋಟಿ ರೂ ಪಿಎಂಸಿ ಬ್ಯಾಂಕ್ ಹಗರಣ: ಎಚ್‌ಡಿಐಎಲ್ ನಿರ್ದೇಶಕರ ಬಂಧನ

Upayuktha

ಇಂದಿನ ಕ್ಯಾಂಪ್ಕೋ ಮಾರುಕಟ್ಟೆ ಧಾರಣೆ (07-11-2019)

Upayuktha

ಗುಟ್ಕಾ ನಿಷೇಧ ವದಂತಿ ನಂಬಬೇಡಿ, ಬೆಳೆಗಾರರಿಗೆ ಆತಂಕದ ಅಗತ್ಯವಿಲ್ಲ: ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘ

Upayuktha
error: Copying Content is Prohibited !!