ಗ್ರಾಮಾಂತರ ಪ್ರಮುಖ ಸ್ಥಳೀಯ

ಕಿಡ್ನಿ, ಲಿವರ್ ಕಾಯಿಲೆಯಿಂದ ಮೃತಪಟ್ಟ ವೇಣೂರಿನ ವ್ಯಕ್ತಿಗೆ ಕೊರೊನಾ ಪಾಸಿಟಿವ್!

ಅಂಗಡಿ, ಮನೆಗಳು ಸೀಲ್‌ಡೌನ್; ಹಲವು ಮಂದಿಗೆ ಕ್ವಾರಂಟೈನ್

ವೇಣೂರು: ಚಾಲಕರಾಗಿ ದುಡಿಯುತ್ತಿದ್ದ ವೇಣೂರಿನ ಶ್ರೀರಾಮ ನಗರ ನಿವಾಸಿ ಅಮರೇಶ್ ಶೆಟ್ಟಿ (40) ಅವರು ಶನಿವಾರ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಇದೀಗ ಕೊರೊನಾ ಪಾಸಿಟಿವ್ ಶಂಕೆ ವ್ಯಕ್ತವಾಗಿದೆ.

ಈ ಸಂಬಂಧ ವೇಣೂರಿನ ಅವರಿದ್ದ ಮನೆ, ಅವರು ಕೆಲಸಕ್ಕಿದ್ದ ಅಂಗಡಿ ಹಾಗೂ ಅವರ ಸಂಬಂಧಿಕರ ಮನೆಯನ್ನು ಸೀಲ್‌ಡೌನ್ ಮಾಡಲಾಗಿದೆ. ಕಿಡ್ನಿ ಹಾಗೂ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಶನಿವಾರ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ರಾತ್ರಿ ಮೃತಪಟ್ಟಿದ್ದರು.

ಈ ವೇಳೆ ಅವರ ಗಂಟಲು ದ್ರವ ಮಾದರಿಯನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ವರದಿ ಬರದೆ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸದೆ ವರದಿ ಬರುವವರೆಗೆ ಕಾಯಲಾಗಿತ್ತು. ಸೋಮವಾರ ಬೆಳಿಗ್ಗೆ ವರದಿ ಜಿಲ್ಲಾಡಳಿತದ ಕೈ ಸೇರಿದ್ದು, ಕೊರೊನಾ ಪಾಸಿಟಿವ್ ಬಂದಿದೆ ಎನ್ನಲಾಗಿದೆ.

ವೇಣೂರಿನ ಅಂಗಡಿಯ ಟೆಂಪೋ ಚಾಲಕರಾಗಿದ್ದ ಇವರು ಅಂಗಡಿಗೆ ಮಂಗಳೂರು ಬಂದರು ಹಾಗೂ ವಿವಿಧ ಕಡೆಗಳಿಂದ ಸಾಮಾನುಗಳನ್ನು ತರುತ್ತಿದ್ದರು. ಇತರ ಸಮಯದಲ್ಲಿ ತನ್ನ ಸ್ವಂತ ರಿಕ್ಷಾದಲ್ಲಿ ದುಡಿಯುತ್ತಿದ್ದರು. ಶನಿವಾರ ಏಕಾಏಕಿ ತೀವ್ರ ಅಸ್ವಸ್ಥಗೊಂಡ ಇವರನ್ನು ಮಂಗಳೂರಿಗೆ ಸಾಗಿಸಲಾಗಿತ್ತು.

ಹೆಚ್ಚಿನ ಟ್ರಾವೆಲ್ ಹಿಸ್ಟರಿಯೇ ಇಲ್ಲದ ಇವರಿಗೆ ಕೊರೊನಾ ಸೋಂಕು ಹೇಗೆ ಹರಡಿದೆ ಎಂಬುವುದನ್ನು ಪತ್ತೆ ಹಚ್ಚಲು ಜಿಲ್ಲಾಡಳಿತಕ್ಕೆ ಸವಾಲಿನ ಕೆಲಸವಾಗಿದ್ದು, ಪ್ರಾಥಮಿಕ ಸಂಪರ್ಕದಲ್ಲಿದ್ದ ನೂರಾರು ಮಂದಿ ಈಗ ಆತಂಕಕ್ಕೊಳಗಾಗಿದ್ದಾರೆ.

ಮೃತರ ಪತ್ನಿ ಹಾಗೂ ಮಗಳನ್ನು, ಮೃತರು ದುಡಿಯುತ್ತಿದ್ದ ಅಂಗಡಿ ಮಾಲಕರ ಅಂಗಡಿ-ಮನೆಯನ್ನು ಹಾಗೂ ಆಸ್ಪತ್ರೆಗೆ ಸಾಗಿಸಿದ ಬೊಲೆರೊ ವಾಹನ ಚಾಲಕನನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಈ ಮಧ್ಯೆ ಪುತ್ರಿಯನ್ನು ರವಿವಾರ ಬೇರೆ ಗ್ರಾಮವೊಂದರ ಮನೆಯೊಂದರಲ್ಲಿ ಕುಳ್ಳಿರಿಸಿದ್ದು, ಆ ಮನೆಯನ್ನೂ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.

ಬೆಳ್ತಂಗಡಿ ತಹಶೀಲ್ದಾರ ಗಣಪತಿ ಶಾಸ್ತ್ರಿ ಹಾಗೂ ಆರೋಗ್ಯಾಧಿಕಾರಿಗಳು ಭೇಟಿ ನೀಡಿ ಮನೆ ಮಂದಿಯನ್ನು ಹಾಗೂ ಅಂಗಡಿ ಮಾಲಕರನ್ನು ಕ್ವಾರಂಟೈನ್‌ನಲ್ಲಿರುವಂತೆ ಸೂಚಿಸಿದ್ದಾರೆ. ಮೃತರ ಪ್ರಾಥಮಿಕ ಸಂಪರ್ಕದಲ್ಲಿದ್ದವರ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಈಗ ಲಭ್ಯ. ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Related posts

ಕೊರೊನಾ ವಿರುದ್ಧ ಸಮರ: ದೇಶವ್ಯಾಪಿ ಲಾಕ್‌ಡೌನ್‌ ಮೇ 3ರ ವರೆಗೆ ವಿಸ್ತರಣೆ: ಪ್ರಧಾನಿ ಮೋದಿ ಘೋಷಣೆ

Upayuktha

ಪ್ರತಿಭೆಯನ್ನು ಗೌರವಿಸಿ, ಸಮಾಜಕ್ಕೆ ತೋರ್ಪಡಿಸುವಂತಾಗಲಿ: ಸುಬ್ರಹ್ಮಣ್ಯ ಭಟ್

Upayuktha

ಕುಂಚ ಹಿಡಿದ ಪೇಜಾವರ ಶ್ರೀ ..!!! ಮೊಸರು ಕುಡಿಕೆಗಾಗಿ ಮಡಕೆಯ ಮೇಲೆ ಚಿತ್ತಾರ ಬರೆದ ಸಂತ

Upayuktha