ಕಿರುತೆರೆ- ಟಿವಿ ನಿಧನ ಸುದ್ದಿ

ಬರ್ತ್ ಡೇ ದಿನವೇ ಇಹಲೋಕ ತ್ಯಜಿಸಿದ ಹಿರಿಯ ನಟ

ಬೆಂಗಳೂರು: ಖ್ಯಾತ ಹಿರಿಯ ನಟ ಸಿದ್ದರಾಜ್ ಕಲ್ಯಾಣ್ಕರ್ ವಿಧಿವಶರಾಗಿದ್ದಾರೆ. 60 ವರ್ಷ ವಯಸ್ಸಿನ ಸಿದ್ದರಾಜ್ ಅವರಿಗೆ ನಿನ್ನೆ ರಾತ್ರಿ ಹೃದಯಾಘಾತ ಉಂಟಾಗಿದ್ದು, ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರ ಅಂತ್ಯಕ್ರಿಯೆ ಹುಬ್ಬಳ್ಳಿಯಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಮೂಲತಃ ಹುಬ್ಬಳ್ಳಿಯವರಾದ ಸಿದ್ದರಾಜ್ ನಾಟಕಗಳಿಂದ ಇವರು ಪ್ರಸಿದ್ಧಿಯನ್ನು ಪಡೆದಿದ್ದರು. ಅನೇಕ ಸಿನಿಮಾಗಳಲ್ಲಿ ಪೋಷಕ ನಟನಾಗಿ ಪಾತ್ರಗಳಲ್ಲಿ ಅಭಿನಯಿಸಿ ಜನಪ್ರಿಯತೆ ಪಡೆದಿದ್ದರು. ಬುದ್ಧಿವಂತ, ಸೂಪರ್ ಸೇರಿದಂತೆ ಸುಮಾರು 75ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಿ ಸುರೇಶ್ ಅವರ ಸಿರೀಯಲ್ ಗೆ ಮೊದಲು ಎಂಟ್ರಿ ಕೊಟ್ಟರು.

ನಿನ್ನೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ಸಿದ್ದರಾಜ್ ಇದ್ದಕ್ಕಿದ್ದಂತೆ ರಾತ್ರಿ ನಿಧನರಾದ ವಿಷಯದಿಂದಆಘಾತವಾಗಿದೆ ಎಂದು ನಿರ್ದೇಶಕ ಬೀಸು ಸುರೇಶ್​​ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

Related posts

ರಾಮಾಯಣದ ಭರತ- ಸಂಜಯ್ ಜೋಗ್

Upayuktha

ಕರುಳಿನ ಕ್ಯಾನ್ಸರ್‌: ಖ್ಯಾತ ಬಾಲಿವುಡ್ ನಟ ಇರ್ಫಾನ್ ಖಾನ್ ವಿಧಿವಶ

Upayuktha

ಶಾರದಾ ವಿದ್ಯಾನಿಕೇತನ ಪ್ರಾಂಶುಪಾಲೆ ಲತಾಂಜಲಿ ಎಸ್‌. ರೈ ನಿಧನ

Upayuktha

Leave a Comment

error: Copying Content is Prohibited !!