ನಿಧನ ಸುದ್ದಿ ಪ್ರಮುಖ

ಬಾಲಿವುಡ್ ಖ್ಯಾತ ನಟ ರಿಷಿ ಕಪೂರ್ ವಿಧಿವಶ

(ರಿಷಿ ಕಪೂರ್ (ಚಿತ್ರ ಕೃಪೆ: ಬ್ಯುಸಿನೆಸ್‌ ಟುಡೇ)

ಮುಂಬಯಿ: ಬಾಲಿವುಡ್ ನ ಖ್ಯಾತ ನಟ ರಿಷಿ ಕಪೂರ್ ಮುಂಬೈನ ಖಾಸಗಿ ಆಸ್ಪತ್ರೆಯೊಂದರಲ್ಲಿ ಇಂದು ಬೆಳಗ್ಗೆ 8:45ರ ಸುಮಾರಿಗೆ ವಿಧಿವಶರಾದರು. ಅವರಿಗೆ 67 ವರ್ಷ ವಯಸ್ಸಾಗಿತ್ತು.

ಬಾಲಿವುಡ್ ಖ್ಯಾತ ತಾರೆಯಾದ ರಿಷಿ ಕಪೂರ್ ಅವರು ಎರಡು ವರ್ಷಗಳಿಂದ ಕ್ಯಾನ್ಸರ್ (ಲ್ಯುಕೇಮಿಯಾ) ಕಾಯಿಲೆಯಿಂದ ಬಳಲುತ್ತಿದ್ದರು. 1952ರ ಸೆಪ್ಟೆಂಬರ್ 4ರಂದು ಜನಿಸಿದ ರಿಷಿ ಕಪೂರ್ ನಟ, ನಿರ್ದೇಶಕ ಮತ್ತು ನಿರ್ಮಾಪಕರಾಗಿ ಹಿಂದಿ ಚಿತ್ರರಂಗದಲ್ಲಿ ಕೆಲಸ ಮಾಡಿದ್ದಾರೆ.

ತಂದೆ ರಾಜ್ ಕಪೂರ್ ಅವರ ಚಲನಚಿತ್ರ ಮೇರಾ ನಾಮ್ ಜೋಕರ್ (1970) ನಲ್ಲಿ ಬಾಲ ಕಲಾವಿದರಾಗಿ ಚೊಚ್ಚಲ ಪಾತ್ರಕ್ಕಾಗಿ ಅವರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದಿದ್ದಾರೆ.

1973 ರಲ್ಲಿ ಬಾಬಿ ಚಿತ್ರದೊಂದಿಗೆ ಡಿಂಪಲ್ ಕಪಾಡಿಯಾ ಎದುರು ವಯಸ್ಕನಾಗಿ ಮೊದಲ ಪಾತ್ರವನ್ನು ನಿರ್ವಹಿಸಿದರು. 1974ರಲ್ಲಿ ಫಿಲ್ಮ್‌ಫೇರ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದರು. ತಮ್ಮ ಕಲಾಜೀವನದಲ್ಲಿ ಸುಮಾರು 92 ಚಲನಚಿತ್ರಗಳಲ್ಲಿ ನಾಯಕನಾಗಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.

ರಿಷಿ ಕಪೂರ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ರಿಷಿ ಕಪೂರ್ ನಿಧನದಿಂದ ಭಾರತೀಯ ಚಿತ್ರರಂಗ ಮತ್ತೊಬ್ಬ ಪ್ರತಿಭಾವಂತ ಕಲಾವಿನನ್ನು ಕಳೆದುಕೊಂಡಿದೆ ಎಂದು ಪ್ರಧಾನಿ ಟ್ವೀಟ್ ಸಂದೇಶದಲ್ಲಿ ಶೋಕಿಸಿದ್ದಾರೆ.

ತಮಿಳು ಚಿತ್ರಂಗದ ಸೂಪರ್‌ ಸ್ಟಾರ್‌ ರಜನಿಕಾಂತ್ ಅವರು ತಮ್ಮ ಆತ್ಮೀಯ ಮಿತ್ರರೊಬ್ಬರನ್ನು ಕಳೆದುಕೊಂಡಿರುವುದಾಗಿ ಸಂತಾಪ ವ್ಯಕ್ತಪಡಿಸಿದ್ದಾರೆ.

 

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ನೇತ್ರಾವತಿ ಸೇತುವೆ ಸಮೀಪ ನಿಲ್ಲಿಸಿದ್ದ ಕಂಟೈನರ್‌ಗೆ ಕಾರು ಡಿಕ್ಕಿ: ಒಬ್ಬ ಸಾವು, ಮೂವರಿಗೆ ಗಂಭೀರ ಗಾಯ

Upayuktha

ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ ಆಶ್ಲೇಷಾ ಬಲಿ, ನವಚಂಡಿಕಾ ಯಾಗ

Upayuktha

ಲಡಾಖ್‌ನಲ್ಲಿ ಭಾರತದ ನೆಲದ ಮೇಲೆ ಕಣ್ಣುಹಾಕಿದ ದುಷ್ಟಶಕ್ತಿಗೆ ತಕ್ಕ ಉತ್ತರ ನೀಡಿದ್ದೇವೆ: ಪ್ರಧಾನಿ ಮೋದಿ

Upayuktha

Leave a Comment