ನಿಧನ ಸುದ್ದಿ ಪ್ರಮುಖ

ಹಿರಿಯ ಭಾಷಾ ವಿಜ್ಞಾನಿ, ತುಳು ವಿದ್ವಾಂಸ ಡಾ. ಯು.ಪಿ ಉಪಾಧ್ಯಾಯ ನಿಧನ

ಉಡುಪಿ: ಹಿರಿಯ ಭಾಷಾ ವಿಜ್ಞಾನಿ, ತುಳು ವಿದ್ವಾಂಸ ಡಾ. ಯು. ಪಿ ಉಪಾಧ್ಯಾಯ (85) ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ರಾತ್ರಿ ನಿಧನರಾದರು.

ಕಾಪು, ಉಳಿಯಾರು ಗ್ರಾಮದ ಡಾ. ಉಳಿಯಾರು ಪದ್ಮನಾಭ ಉಪಾಧ್ಯಾಯ ಅವರು ಜಾನಪದ, ಸಂಸ್ಕೃತಿ, ಭಾಷೆಯ ವಿಚಾರಗಳಲ್ಲಿ ಅತ್ಯಮೂಲ್ಯ ಅಧ್ಯಯನ ಮಾಡಿ ಬಹಳಷ್ಟು ಸಾಧನೆ ಮಾಡಿದ್ದರು.

ಸಂಶೋಧಕ ಮಹೋಪಾಧ್ಯಾಯ ಎಂಬ ಬಿರುದು ಪಡೆದಿದ್ದ ಅವರು,  ರಾಷ್ಟ್ರಕವಿ ಗೋವಿಂದ ಪೈ ತುಳು ನಿಘಂಟು ಯೋಜನೆಯ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದರು. ಈ ಯೋಜನೆಗೆ ಸಂಬಂಧಿಸಿ ಆರು ಸಂಪುಟಗಳ (3,440 ಪುಟ, ಒಂದು ಲಕ್ಷ ಶಬ್ಧ) ತುಳು ನಿಘಂಟು ಬಿಡುಗಡೆ ಮಾಡಲಾಗಿತ್ತು. ಕರಾವಳಿಯಲ್ಲಿ ಕನ್ನಡ ಶಾಸನಗಳ ಅಧ್ಯಯನ ಬಗ್ಗೆಯೂ ಸಂಶೋಧನೆ ಕೈಗೊಂಡಿದ್ದರು.

ಮಕ್ಕಳಲ್ಲಿ ನಾಯಕತ್ವ ಲಕ್ಷಣಗಳನ್ನು ಬೆಳೆಸುವ ಬಗ್ಗೆ ಹಾಗೂ ಭಾಷಾ ಅಧ್ಯಯನದಲ್ಲಿ ಕುರಿತಾಗಿ ವಿಶೇಷ ಆಸಕ್ತರಾಗಿದ್ದ ಅವರು ಆಫ್ರಿಕಾ ಖಂಡದ ದೇಶಗಳಿಗೆ ತೆರಳಿ ಜಾನಪದ ಭಾಷೆಗಳ ಕುರಿತು ಸಂಶೋಧನೆ ಕೈಗೊಂಡು ದಾಖಲಿಕರಣ ಮಾಡಿದ್ದರು. ಪತ್ನಿ ದಿ. ಡಾ. ಸುಶೀಲಾ ಉಪಾಧ್ಯಾಯ ಅವರೊಂದಿಗೆ ಸೇರಿಕೊಂಡು ಬಹಳಷ್ಟು ಮಹತ್ವದ ಸಂಶೋಧನೆ ಕಾರ್ಯಗಳನ್ನು ನಡೆಸಿದ್ದರು.

 

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

 

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್  App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

ಸೇಡಂ ಮಾಜಿ ಶಾಸಕ ಬಸವಂತರೆಡ್ಡಿ ಪಾಟೀಲ ನಿಧನ

Harshitha Harish

ಸಿಎ ಪರೀಕ್ಷೆಗಳ ಮುಂದೂಡಿಕೆ; ಹೊಸ ದಿನಾಂಕಗಳು ಪ್ರಕಟ

Upayuktha

ಐಪಿಎಲ್ 2020: ಕೋಲ್ಕತಾ ವಿರುದ್ಧ ಚೆನ್ನೈ ರೋಚಕ ಜಯ, ನೈಟ್‌ರೈಡರ್ಸ್‌ಗೆ ಮುಂದಿದೆ ಮುಳ್ಳಿನ ಹಾದಿ

Upayuktha News Network