ನಿಧನ ಸುದ್ದಿ

ಆರೆಸ್ಸೆಸ್ ನ ಹಿರಿಯ ಕಾರ್ಯಕರ್ತ ಎಂ.ಜಿ ವೈದ್ಯ ನಿಧನ

ನಾಗಪುರ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಕಾರ್ಯಕರ್ತರಾದ ಮಾ.ಗೋ. ವೈದ್ಯ (97) (ಎಂಜಿ ವೈದ್ಯ) ಅವರು ಇಂದು ಮಧ್ಯಾಹ್ನ 3.30ಕ್ಕೆ ನಿಧನರಾದರು.

ಸಂಘ ಸ್ಥಾಪಕ ಕೇಶವ ಬಲಿರಾಮ ಹೆಡಗೆವಾರ್ ಅವರಿಂದ ಈಗಿನ ಸರಸಂಘಚಾಲಕರಾದ ಮೋಹನ್ ಭಾಗವತ್ ಸೇರಿದಂತೆ ಎಲ್ಲ ಸರಸಂಘಚಾಲಕರೊಂದಿಗೆ ಮಾ.ಗೋ. ವೈದ್ಯ ಅವರಿಗೆ ಸಂಪರ್ಕವಿತ್ತು.

9 ದಶಕಗಳ ಕಾಲ ಸಂಘದ ಸ್ವಯಂಸೇವಕರಾಗಿದ್ದರು. ಕೆಲ ವರ್ಷಗಳ ಕಾಲ ಆರೆಸ್ಸೆಸ್ ನ ವಕ್ತಾರರಾಗಿಯೂ ಅವರು ಕಾರ್ಯ ನಿರ್ವಹಿಸಿದ್ದಾರೆ.

ಖ್ಯಾತ ಪತ್ರಕರ್ತರೂ ಆಗಿರುವ ಅವರು ‘ತರುಣ ಭಾರತ’ ಎಂಬ ಪತ್ರಿಕೆಯ ಸಂಪಾದಕರಾಗಿದ್ದರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಆಕಾಶವಾಣಿ ವಾರ್ತಾವಾಚಕ ಎ.ವಿ ಚಿತ್ತರಂಜನ್ ದಾಸ್ ನಿಧನ

Upayuktha

ವಿಟ್ಲ ಅರಮನೆಯ ಅರಸ ಜನಾರ್ದನ ವರ್ಮ ನಿಧನ

Upayuktha

ಎಐಎಡಿಎಂಕೆ ಸಂಸದ ಮೊಹಮ್ಮದ್ಜಾನ್ ನಿಧನ

Harshitha Harish