ನಿಧನ ಸುದ್ದಿ ಪ್ರಮುಖ

ಹೆಸರಾಂತ ವೈದಿಕ ವಿದ್ವಾಂಸ ವೇ.ಮೂ. ಪೊಳ್ಳಕಜೆ ಗೋವಿಂದ ಭಟ್ ದೈವಾಧೀನ

ಮಂಗಳೂರು: ಕಾಸರಗೋಡು ಜಿಲ್ಲೆಯ ಮೀಯಪದವು ಸಮೀಪದ ನಿವಾಸಿ, ಹೆಸರಾಂತ ವೈದಿಕ ವಿದ್ವಾಂಸರಾದ ವೇ.ಮೂ ಪೊಳ್ಳಕಜೆ ಗೋವಿಂದ ಭಟ್ಟರು (85) ಇಂದು (ಶನಿವಾರ) ಮಧ್ಯಾಹ್ನ ಸ್ವಗೃಹದಲ್ಲಿ ದೈವಾಧೀನರಾದರು.

ಅವರು ಕಲಾಪೋಷಕರೂ ಧಾರ್ಮಿಕ ಮಾರ್ಗದರ್ಶಕರೂ ಆಗಿದ್ದು, ಸಮಾಜದಲ್ಲಿ ಹಲವಾರು ಗೌರವಗಳಿಗೆ ಪಾತ್ರರಾಗಿದ್ದರು.

ನವರಾತ್ರಿ ದಿನಗಳಲ್ಲಿ ಕಳೆದ ಅರುವತ್ತು ವರ್ಷಗಳಿಂದ ತಮ್ಮ ಮನೆಯಲ್ಲಿ ತಾಳಮದ್ದಳೆ ಸೇವೆ ನಡೆಸುತ್ತಿದ್ದು ಕಲಾ ತಂಡಗಳನ್ನು ಪ್ರೋತ್ಸಾಹಿಸುತ್ತಿದ್ದರು.

ಮೂರು ವರ್ಷಗಳ ಹಿಂದೆ (2017) ಖಂಡಿಗೆ ಶ್ಯಾಮ ಭಟ್ಟ ಪ್ರತಿಷ್ಠಾನದ ವತಿಯಿಂದ ವೇದಮೂರ್ತಿ ಪೊಳ್ಳಕಜೆ ಗೋವಿಂದ ಭಟ್ಟರನ್ನು ಸನ್ಮಾನಿಸಿ ಗೌರವಿಸಲಾಗಿತ್ತು.

ಮಹಾಬಲೇಶ್ವರ ಭಟ್ಟ ಮತ್ತು ಲಕ್ಷ್ಮೀ ಅಮ್ಮ ದಂಪತಿಗಳ ಪುತ್ರರಾಗಿ 23 ಜನವರಿ 1936ರಲ್ಲಿ ಜನಿಸಿದ ಅವರು, ಹಿರಿಯರಿಂದ ಬಳುವಳಿಯಾಗಿ ಬಂದ ಜ್ಯೋತಿಷ್ಯ ಶಾಸ್ತ್ರದ ಮೂಲಕ ಪರಿಹಾರಗಳನ್ನು ಸೂಚಿಸುತ್ತಿದ್ದರು. ಪೊಳ್ಳಕಜೆಯ ವನದುರ್ಗಾಪರಮೇಶ್ವರಿಯ ಆರಾಧಕರಾಗಿ, ಮಹಾಗಣಪತಿಯ ಉಪಾಸಕರಾಗಿ ನಿತ್ಯ ನಿರಂತರ ಅಧ್ಯಯನ, ಜಪತಪ, ತಂತ್ರ ಮಂತ್ರ, ಯಂತ್ರಗಳ ಸಿದ್ಧಿಯ ಮೂಲಕ ಜಾತಿ-ಮತ ಭೇದವೆಣಿಸದೆ ತಮ್ಮನ್ನು ಅರಸಿ ಬಂದವರಿಗೆ ಮನಃಶಾಂತಿಯನ್ನು ನೀಡುತ್ತಿದ್ದರು. ಸಮಾಜ ಕಲ್ಯಾಣಕ್ಕಾಗಿ ದೈವ ದೇವಸ್ಥಾನಗಳ ನವೀಕರಣ, ಬ್ರಹ್ಮಕಲಶೋತ್ಸವಗಳಲ್ಲಿ ಅನುಪಮ ಸೇವೆ ಸಲ್ಲಿಸಿದ್ದರು.

ಕೆಲವು ದಿನಗಳಿಂದ ವಯೋಸಹಜ ಅನಾರೋಗ್ಯಕ್ಕೆ ತುತ್ತಾಗಿ ಕಾಸರಗೋಡಿನ ಆಸ್ಪತ್ರೆಗೆ ದಾಖಲಾಗಿದ್ದರು.

ಅವರಿಗೆ ಇಬ್ಬರು ಪುತ್ರಿಯರಿದ್ದು, ಅಪಾರ ಶಿಷ್ಯಬಳಗವನ್ನು ಅಗಲಿದ್ದಾರೆ.

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ಗಡಿ ನಿರ್ಬಂಧ ತೆರವುಗೊಳಿಸುವಂತೆ ಜನರು ಕೇಳಿಕೊಂಡಾಗ ಕೇರಳ ಅಧಿಕಾರಿಗಳು ಏನು ಹೇಳ್ತಾರೆ, ನೀವೇ ಕೇಳಿ…

Upayuktha News Network

ಹಿರಿಯ ಪತ್ರಕರ್ತ ಗೌರೀಪುರ ಚಂದ್ರು ನಿಧನ

Upayuktha

ದೇಶಾದ್ಯಂತ ಇಂದಿನಿಂದ ಅನ್‌ಲಾಕ್ 1.0 ಜಾರಿ: ಬಹುತೇಕ ಎಲ್ಲ ಚಟುವಟಿಕೆಗಳಿಗೆ ಅನುಮತಿ

Upayuktha