ನಿಧನ ಸುದ್ದಿ ಪ್ರಮುಖ

ಕಂಚಿನ ಕಂಠದ ಭಾಗವತ, ಯಕ್ಷಗಾನ ಗುರು ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ ನಿಧನ

ಮಂಗಳೂರು: ತೆಂಕುತಿಟ್ಟು ಯಕ್ಷಗಾನದ ಹೆಸರಾಂತ ಭಾಗವತರಾದ ತೆಂಕಬೈಲು ತಿರುಮಲೇಶ್ವರ ಭಟ್ ಅವರು ಇಂದು ಮಧ್ಯಾಹ್ನ 12:35 ಅತ್ಯಲ್ಪಕಾಲದ ವಯೋಸಹಜ ಅನಾರೋಗ್ಯದಿಂದ ವಿಧಿವಶರಾದರು. ಅವರಿಗೆ 77 ವರ್ಷಗಳಾಗಿತ್ತು.

ಅವರು ಮೂವರು ಪುತ್ರಿಯರು, ಪುತ್ರರಾದ ಭಾಗವತ ಮುರಳೀ ಕೃಷ್ಣಶಾಸ್ತ್ರಿ ಮತ್ತು ಮೊಮ್ಮಕ್ಕಳನ್ನು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ತೆಂಕಬೈಲು ಶಾಸ್ತ್ರಿಗಳ ತಂದೆ ಕೃಷ್ಣ ಭಟ್. ತಾಯಿ ಸಾವಿತ್ರಿ ಅಮ್ಮ. ತಂದೆಗೆ ಮಗ ವೈದಿಕನಾಗಬೇಕೆಂಬ ಹಂಬಲ. ತಾಯಿಯ ಪರಂಪರೆಯಿಂದ ಬಂದ ಯಕ್ಷಗಾನ. ಇವೆರಡೂ ಸ್ವಲ್ಪ ಕಾಲ ಜತೆಜತೆಗೆ ಹೆಜ್ಜೆಯೂರಿತು. ರಾತ್ರಿ ಆಟ, ಹಗಲು ತಂದೆಯೊಂದಿಗೆ ಸಾಥ್. ಬಿಡುವಿರದ ದುಡಿಮೆ. ಮುಂದೆ ಕುಲವೃತ್ತಿಯಲ್ಲಿ ಮರೆಯದ ಯಕ್ಷಗಾನವೇ ವೃತ್ತಿಯಾಯಿತು.

ಶಾಸ್ತ್ರಿಗಳು ಓದಿದ್ದು ಎಂಟನೇ ತರಗತಿ. ಐದು ವರುಷ ಪಾರಂಪರಿಕ ವೈದಿಕ ಅಭ್ಯಾಸ. ನಾಲ್ಕು ವರುಷ ಶಾಸ್ತ್ರೀಯ ಸಂಗೀತ ಕಲಿಕೆ. ತನ್ನೂರು ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದ ಮಿತ್ತನಡ್ಕದಲ್ಲಿ ಟೆಂಟ್ ಊರಿದ ಎಲ್ಲಾ ಮೇಳಗಳಿಗೂ ಖಾಯಂ ಪ್ರೇಕ್ಷಕ. ಇವರ ಮಾವಂದಿರಲ್ಲಿ ಓರ್ವ ಭಾಗವತ, ಮತ್ತೋರ್ವ ಮದ್ದಳೆಗಾರ. ಇವರಿಬ್ಬರಿಂದಲೂ ಬಾಲಪಾಠ.

ತಾಳ, ರಾಗಗಳ ಅನುಭವದಲ್ಲಿ ಪ್ರಸಂಗಗಳ ಪದ್ಯಗಳ ಸ್ವ-ಕಲಿಕೆ. ಗುರು ಮಾಂಬಾಡಿ ನಾರಾಯಣ ಭಾಗವತರಲ್ಲಿ ಕಲಿತ ಪಾಠಗಳ ಶುದ್ಧೀಕರಣ. ಆ ಕಾಲಘಟ್ಟದಲ್ಲಿ ಮಾಂಬಾಡಿ ಗುರುಗಳ ಪುತ್ರ ಮಾಂಬಾಡಿ ಸುಬ್ರಹ್ಮಣ್ಯ ಭಟ್, ಪದ್ಯಾಣ ಶಂಕರನಾರಾಯಣ ಭಟ್, ತೆಂಕಬೈಲು – ಸಮಪ್ರಾಯದ ಹೊಂತಕಾರಿಗಳು! ಪದ್ಯಾಣರು ಚೆಂಡೆಗೆ, ಮಾಂಬಾಡಿಯವರ ಮದ್ದಳೆ, ಶಾಸ್ತ್ರಿಗಳ ಭಾಗವತಿಕೆ. ಈ ಜತೆಗಾರಿಕೆಯು ‘ಕರೋಪಾಡಿ ಹಿಮ್ಮೇಳ’ ಎಂದೇ ಖ್ಯಾತಿಯಾಗಿತ್ತು.

ಸೊರ್ನಾಡು ಮೇಳದಿಂದ ವ್ಯವಸಾಯ. ಮುಂದೆ ಬಪ್ಪನಾಡು, ಕುಂಡಾವು, ಸುಂಕದಕಟ್ಟೆ, ಮಲ್ಲ, ಕುಂಟಾರು, ಮಧೂರು ಮೇಳಗಳಲ್ಲಿ ತಿರುಗಾಟ. ಭಾಗವತನೇ ನಿರ್ದೇಶಕನೆಂಬ ಹಿರಿ ಮಾತಿಗೆ ವಿಧೇಯ. ಆ ಸ್ಥಾನಕ್ಕೆ ಎಂದೂ ಚ್ಯುತಿ ತಂದವರಲ್ಲ. ಹಲವರ ಪಾಲಿಗೆ ಇವರು ನಿಷ್ಠುರ ವ್ಯಕ್ತಿ! ರಂಗ ಮತ್ತು ಮೇಳದ ವ್ಯವಹಾರಗಳಲ್ಲಿ ಸ್ವಲ್ಪ ಆಚೀಚೆ ಆದರೂ ಸಹಿಸದ ಗುಣ. ನೇರವಾಗಿ ಹೇಳುವ ವ್ಯಕ್ತಿತ್ವ. ಮುಖಸ್ತುತಿ ಇಲ್ಲದೇ ಇದ್ದುದರಿಂದ ವೃತ್ತಿ ಮೇಳದ ವ್ಯವಸ್ಥೆಯು ಶಾಸ್ತ್ರಿಗಳಿಗೆ ಪ್ರತಿಕೂಲವಾದುದೇ ಹೆಚ್ಚು. ವೈಯಕ್ತಿಕ ಅನನುಕೂಲಗಳಿಂದ ಮೇಳದ ಸಹವಾಸಕ್ಕೆ ವಿದಾಯ ಹೇಳಿದರು.

(ತೆಂಕಬೈಲು ಶಾಸ್ತ್ರಿಗಳ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಅಡಿಕೆ ಪತ್ರಿಕೆಯ ಸಹಾಯಕ ಸಂಪಾದಕರಾದ ನಾ. ಕಾರಂತ ಪೆರಾಜೆ ಅವರ ಬ್ಲಾಗ್‌ನಿಂದ ಪಡೆಯಲಾಗಿದೆ. ಅವರಿಗೆ ಕೃತಜ್ಞತೆಗಳು)

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್ App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ

Upayuktha

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಭಕ್ತಾದಿಗಳ ದರ್ಶನಕ್ಕೆ ಜೂನ್ 8ರಿಂದ ವ್ಯವಸ್ಥೆ

Upayuktha

ಸಾಹುಕಾರನ ಸಿಡಿ ಪ್ರಕರಣ: ನೈತಿಕ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ಜಾರಕಿಹೊಳಿ ರಾಜೀನಾಮೆ

Sushmitha Jain