- ಸ್ನಾತಕೋತ್ತರ ವಿಭಾಗದಲ್ಲಿ ಇಬ್ಬರಿಗೆ ಚಿನ್ನದ ಪದಕ
- 9 ಮಂದಿಗೆ ಬಿ ಟೆಕ್ ಪದವಿ ಚಿನ್ನದ ಪದಕ
- 116 ಮಂದಿಗೆ ಪಿಎಚ್ಡಿ ಪದವಿ, 634 ಮಂದಿಗೆ ಸ್ನಾತಕೋತ್ತರ ಹಾಗೂ 795 ಮಂದಿಗೆ ಬಿ ಟೆಕ್ ಪದವಿ ಪ್ರದಾನ
ಮಂಗಳೂರು: ಸುರತ್ಕಲ್ನ ರಾಷ್ಟ್ರೀಯ ತಾಂತ್ರಿಕ ಮಹಾವಿದ್ಯಾಲಯದ (ಎನ್ಐಟಿಕೆ) 17ನೇ ಘಟಿಕೋತ್ಸವ ನ.ವೆಂಬರ್ 2ರಂದು ಬೆಳಗ್ಗೆ 11 ಗಂಟೆಗೆ ಮತ್ತು ಸಂಜೆ 4.30ಕ್ಕೆ ನೂತನ ಕ್ರೀಡಾ ಸಂಕೀರ್ಣದಲ್ಲಿ ನಡೆಯಲಿದೆ. ಭಾರತದ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಘಟಿಕೋತ್ಸವ ಭಾಷಣ ಮಾಡಲಿದ್ದಾರೆ ಎಂದು ಎನ್ಐಟಿಕೆ ನಿರ್ದೇಶಕ ಪ್ರೊ. ಕೆ. ಉಮಮಹೇಶ್ವರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸ್ನಾತಕೋತ್ತರ ವಿಭಾಗದಲ್ಲಿ ಇಬ್ಬರಿಗೆ ಚಿನ್ನದ ಪದಕ, 9 ಮಂದಿಗೆ ಬಿ ಟೆಕ್ ಪದವಿ ಚಿನ್ನದ ಪದಕ, 116 ಮಂದಿಗೆ ಪಿಎಚ್ಡಿ ಪದವಿ ಪ್ರದಾನ, 634 ಮಂದಿಗೆ ಸ್ನಾತಕೋತ್ತರ ಹಾಗೂ 795 ಮಂದಿಗೆ ಬಿ ಟೆಕ್ ಪದವಿ ಪ್ರದಾನ ನಡೆಯಲಿದೆ. ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯಪಾಲ ವಾಜುಭಾಯ್ ವಾಲ ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಎನ್ಐಟಿಕೆ ಆಡಳಿತ ಮಂಡಳಿಯ ಅಧ್ಯಕ್ಷ ಪ್ರೊ. ಬಲವೀರ ರೆಡ್ಡಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ಎನ್ಐಟಿಕೆ ಉಪ ನಿರ್ದೇಶಕ ಪ್ರೊ.. ಅನಂತ ನಾರಾಯಣ ವಿ.ಎಸ್., ರಿಜಿಸ್ಟ್ರಾರ್ ಕೆ. ರವೀಂದ್ರನಾಥ್, ಸಂಚಾಲಕ ಮತ್ತು ಅಕಾಡೆಮಿಕ್ ಡೀನ್ ಪ್ರೊ. ಎ.ನಿತ್ಯಾನಂದ ಶೆಟ್ಟಿ, ಹಾಗೂ ಡಾ.ಎಂ. ಅರುಣ್ ಇಸ್ಲೂರ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.