ಲೇಖನಗಳು

ವಿದ್ಯಾದೇಗುಲ ನಮ್ಮ ಬಾಳಿಗೆ ಸಂಸ್ಕಾರದ ಬೆಳಕು ನೀಡುವ ಪವಿತ್ರ ತಾಣ.*

ದಕ ಜಿಲ್ಲೆಯ ಪುತ್ತೂರು ತಾಲೂಕಿನ ಇರ್ದೆ-ಬೆಟ್ಟಂಪಾಡಿ-ನಿಡ್ಪಳ್ಳಿ ಗ್ರಾಮಗಳಿಗೆ ಹೊಂದಿಕೊಂಡಂತೆ ಎತ್ತರವಾದ ಬಿಲ್ವಗಿರಿಯಲ್ಲಿ ಅಂದಿನ ಊರ ಹಿರಿಯರಿಂದ ತಲೆಯೆತ್ತಿ ಮೂಡಿ ಬಂದ ನವೋದಯ ಪ್ರೌಢಶಾಲೆ ಬೆಟ್ಟಂಪಾಡಿ ಲಕ್ಷಾಂತರ ವಿದ್ಯಾರ್ಥಿಗಳ ಬಾಳ ಬೆಳಗಿಸಿದೆ.

ಫೆ.22/2021 ಆದಿತ್ಯವಾರ ಈ ಪವಿತ್ರ ವಿದ್ಯಾಮಂದಿರದಲ್ಲಿ ಈ ಹಿಂದೆ ಯಾರೂ ಮಾಡಿರದ ಮುಂದೆ ಮಾಡಬಹುದಾದ ಕಾರ್ಯಕ್ರಮಕ್ಕೆ ಎಲ್ಲರೂ ಸಾಕ್ಷಿಯಾದರು.
ನಮ್ಮ ಯುವ ಮನಸ್ಸುಗಳಲ್ಲಿ ಎಂಥ ಸೃಜನಾತ್ಮಕ ಭಾವನೆ ಮೊಳಕೆಯೊಡೆದು ಯಶಸ್ವಿಯಾಗುತ್ತದೆ ಎಂಬುದಕ್ಕೆ ಇದು ಅನುಕರಣೀಯವಾಗುತ್ತದೆ.1983-84ರ SSLC ಬ್ಯಾಚಿನ ವಿದ್ಯಾರ್ಥಿ ವೃಂದ “ಸ್ನೇಹ ಮಿಲನ”ಮರೆಯಲಾಗದ ಮರೆಯಬಾರದ ಸವಿನೆನಪುಗಳ ಪುನರ್ ಮನನ ಕಾರ್ಯಕ್ರಮದೊಂದಿಗೆ ಅಂದಿನ ಗುರುಗಳಿಗೆ,ಸಿಬಂದಿಗಳಿಗೆ,ಸಾಧಕರಿಗೆ ಅಭಿನಂದನಾ-ಗುರು ನಮನ ಕಾರ್ಯಕ್ರಮ ನಡೆಸಿರುವುದು ಎಲ್ಲರ ಪ್ರಶಂಸೆಗೆ ಪಾತ್ರವಾಯಿತು.
ದೇಶ-ವಿದೇಶಗಳಲ್ಲಿದ್ದ ಸ್ನೇಹಿತರನ್ನು ಈ ಜಾಲತಾಣದ ಮೂಲಕ ಸಂಪರ್ಕಿಸಿ ಒಟ್ಟು ಸೇರಿಸಿ ಗೌರವ-ಯುತವಾದ…. ಅಭಿನಂದನೀಯ ಕಾರ್ಯಮಾಡಿದ ಯುವ ಮನಸ್ಸಿನ ಸಹೃದಯರೆಂದರೆ ಅನಿಲ್ ಕುಮಾರ್ ದೇರ್ಲ,ಸೀತಾರಾಮ ಗೌಡ ಮಿತ್ತಡ್ಕ,ಡಾ.ಸತೀಶ್ ಬೆಟ್ಟಂಪಾಡಿ, ರಾಮಯ್ಯ ರೈ ನುಳಿಯಾಲು.
ಈ ವಿದ್ಯಾಲಯದಲ್ಲಿ ಕಲಿತ ಗ್ರಾಮೀಣ ಮಕ್ಕಳಾಗಿದ್ದ ನಮ್ಮವರಲ್ಲಿ ರೈತರಾಗಿ ,ಕೃಷಿಕರಾಗಿ,ಸೈನಿಕರಾಗಿ, ವೈದ್ಯರಾಗಿ,ಶಿಕ್ಷಕರಾಗಿ,ಸಮಾಜಧುರೀಣರಾಗಿ,ರಾಜಕೀಯ ಮುಂದಾಳು-ನಾಯಕರಾಗಿ,ನ್ಯಾಯವಾದಿಗಳಾಗಿ,ಪೊಲೀಸ್- ಅಧಿಕಾರಿಗಳಾಗಿ,ಕ್ರೀಡಾ ಪಟುಗಳಾಗಿ,ಮೆಸ್ಕಾಂನವರಾಗಿ,ಜೇನು ಸಾಕಣೆ-ಹೈನುಗಾರಿಕೆ-ಕೋಳಿಸಾಕಣೆಗಾರರಾಗಿ,ಉದ್ಯಮಿಗಳಾಗಿ…ಹೀಗೇ ವಿವಿಧ ಕ್ಷೇತ್ರಗಳಲ್ಲಿ ಬೆಳಗಿ ಹುಟ್ಟೂರಿನ ನಾಡಿನ ದೇಶದ ಕೀರ್ತಿ ಬೆಳಗಿಸುತ್ತಿರುವುದು ಅತೀ ಸಂತೋಷದ ವಿಷಯವಾಗಿದೆ.ಕೇಳಿ ನೋಡಿ ಅನುಭವಿಸುವುದೇ ಬದುಕಿನ ಆ-ನಂದದಾ ಕ್ಷಣ-ದಿನ.ಅಭಿನಂದನೆಗಳು.

✍️ ನಾರಾಯಣ ರೈ ಕುಕ್ಕುವಳ್ಳಿ.
ಬೆಟ್ಟಂಪಾಡಿ ನವೋದಯ ಪ್ರೌಢಶಾಲಾ ಹಿರಿಯ ವಿದ್ಯಾರ್ಥಿ.

Related posts

ವಿಶ್ವ ತಾಯಂದಿರ ದಿನ; ನಿಮ್ಮ ಅಮ್ಮನಿಗೊಂದು ಶುಭಕೋರಿ

Upayuktha

ವಿಶ್ವ ಆರೋಗ್ಯ ದಿನ – ಎಪ್ರಿಲ್ 7: ‘ಸರ್ವರಿಗೂ ಆರೋಗ್ಯ’ ಬೇಕಾದರೆ ಸರ್ವರ ಸಹಕಾರ ಇರಲೇಬೇಕು

Upayuktha

ಕೈ ಎತ್ತಿದಾಗ…

Harshitha Harish